For Quick Alerts
  ALLOW NOTIFICATIONS  
  For Daily Alerts

  'ಧನ್ವೀರ್ ನಿಮ್ಮ ಶಿಷ್ಯ ಅಂತೆ ಹೌದಾ' ಎಂದಿದ್ದಕ್ಕೆ ದಾಸ ಏನಂದ್ರು?

  |
  Bazzar Kannada movie: ಧನ್ವೀರ್ ನಿಮ್ಮ ಶಿಷ್ಯ ಅಂತೆ ಹೌದಾ' ಎಂದಿದ್ದಕ್ಕೆ ದಾಸ ಏನಂದ್ರು? | FILMIBEAT KANNADA

  'ಬಜಾರ್' ಚಿತ್ರದ ನಾಯಕ ಧನ್ವೀರ್ ಅವರು ಡಿ ಬಾಸ್ ದರ್ಶನ್ ಅವರ ಶಿಷ್ಯ ಎಂದೇ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಮಾತಿನಂತೆ ದರ್ಶನ್ ಕೂಡ ಧನ್ವೀರ್ ಚಿತ್ರವನ್ನ ಪ್ರೋತ್ಸಾಹಿಸಿದ್ದಾರೆ.

  ಬಜಾರ್ ಚಿತ್ರದ ಆಡಿಯೋ ಲಾಂಚ್ ಮಾಡಿದ್ದ ದರ್ಶನ್, ರಿಲೀಸ್ ನಂತರ ಸಿನಿಮಾ ನೋಡಿ ಚಿತ್ರದ ಬಗ್ಗೆ ಮತ್ತು ಧನ್ವೀರ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  'ಬಜಾರ್' ಹೀರೋಗೆ ಪ್ರಾಂಕ್ ಕಾಲ್ ಮಾಡಿ ಕಾಲೆಳೆದ ದರ್ಶನ್

  ''ಧನ್ವೀರ್ ಚೆನ್ನಾಗಿ ರೆಡಿಯಾಗಿ ಬಂದಿದ್ದಾರೆ. ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಸುನಿ ಅವರು ಅಷ್ಟೇ ಕ್ಲೀನ್ ಆಗಿ ಕಥೆ ಮಾಡಿದ್ದಾರೆ. ಸೆಕೆಂಡ್ ಹಾಫ್ ಇಂಟ್ರೆಸ್ಟಿಂಗ್ ಆಗಿದೆ. ಒಂದು ಲಾಂಗ್ ಗ್ಯಾಪ್ ಬಳಿಕ ರೌಡಿಸಂ ಸಿನಿಮಾ ಬಂದಿದೆ, ಆ ಟ್ರೆಂಡ್ ಮತ್ತೆ ಶುರುವಾಗ್ಬೇಕು'' ಎಂದು ದರ್ಶನ್ ಹೇಳಿದರು.

  ತಮಿಳಿಗೆ ಹೊರಟ ಸುನಿ 'ಬಜಾರ್'?

  ಇನ್ನು ಇಂಡಸ್ಟ್ರಿಯಲ್ಲಿ ಧನ್ವೀರ್ ನಿಮ್ಮ ಶಿಷ್ಯ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ ಆ ಬಗ್ಗೆ ಏನ್ ಹೇಳ್ತೀರಾ ಎಂದಿದ್ದಕ್ಕೆ ''ಹೇ ಇಲ್ಲ ಸಾರ್, ಯಾರಿಗೂ ಯಾರು ಶಿಷ್ಯರಲ್ಲ ಎಲ್ಲಾ ಒಳ್ಳೆ ಕಲಾವಿದರೇ'' ಎಂದು ನಗುನಗುತ್ತಲೇ ಉತ್ತರಿಸಿದ್ದಾರೆ.

  ಇನ್ನುಳಿದಂತೆ 'ಬಜಾರ್' ಸಿನಿಮಾ ಕಳೆದ ವಾರ (ಫೆಬ್ರವರಿ 1) ರಿಲೀಸ್ ಆಗಿದೆ. ಸಿಂಪಲ್ ಸುನಿ ನಿರ್ದೇಶನ ಮಾಡಿದ್ದು, ಚೊಚ್ಚಲ ಬಾರಿಗೆ ಧನ್ವೀರ್ ನಾಯಕನಾಗಿ ಅಭಿನಯಿಸಿದ್ದಾರೆ. ಅಧಿತಿ ಪ್ರಭುದೇವ ನಾಯಕಿ ನಟಿಸಿದ್ದಾರೆ.

  Read more about: darshan ದರ್ಶನ್
  English summary
  Challenging star darshan watched bazaar movie In bengaluru. bazaar movie released on february 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X