ದರ್ಶನ್ ಪತ್ನಿ-ಮಗನ ಕೈಯಲ್ಲಿರುವ ಈ ಗಣೇಶ ಸ್ಪೆಷಲ್ ಏಕೆ?
ಸ್ಯಾಂಡಲ್‌ವುಡ್‌ನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಸ್ಟಾರ್ ನಟರ ಮನೆಯಲ್ಲಿ ಗೌರಿ ಮತ್ತು ಗಣೇಶನ ವಿಗ್ರಹ ಕೂರಿಸಿ ಸಂಪ್ರದಾಯಿಕವಾಗಿ ಪೂಜೆ ಸಹ ಮಾಡಲಾಗುತ್ತದೆ.
Recommended Video
ಗಣೇಶ ಹಬ್ಬದ ಪ್ರಯುಕ್ತ ಕನ್ನಡ ಚಿತ್ರರಂಗದ ಅಗ್ರಗಣ್ಯ ನಟ-ನಟಿಯರು, ನಿರ್ದೇಶಕರು ಮತ್ತು ಕುಟುಂಬಸ್ಥರು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಹ ಗಣೇಶ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.
ಪುತ್ರ ವಿನೀಶ್ ಹಾಗೂ ಚಿಕ್ಕ ಗಣೇಶನ ವಿಗ್ರಹದ ಜೊತೆ ಫೋಟೋ ಹಂಚಿಕೊಂಡಿರುವ ವಿಜಯಲಕ್ಷ್ಮಿ ಪರಿಸರ ಸ್ನೇಹಿ ಗಣೇಶನ ಬಳಕೆಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಫೋಟೋದಲ್ಲಿರುವ ಗಣೇಶ ಸ್ವಲ್ಪ ವಿಶೇಷ ಏಕೆ? ಮುಂದೆ ಓದಿ..

ತಯಾರಿಸಲು ಸುಲಭವಿದ್ದಾಗ, ಖರೀದಿ ಏಕೆ?
ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿ ಎಂದು ಹೇಳಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಖುದ್ದು ತಾವೇ ತಯಾರಿಸುವ ಗಣೇಶನನ್ನು ತಮ್ಮ ಮನೆಯಲ್ಲಿ ಕೂರಿಸಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. 'ತಯಾರಿಸಲು ಸುಲಭವಿದ್ದಾಗ ಖರೀದಿಸುವುದು ಏಕೆ?. ನಾಳಿನ ಆರೋಗ್ಯಕ್ಕಾಗಿ ಇಂದು ಪರಿಸರ ಸ್ನೇಹಿ ಗಣೇಶ ಬಳಸುವುದು ಉತ್ತಮ'' ಎಂದಿದ್ದಾರೆ.

ಎರಡರಲ್ಲಿ ಉತ್ತಮ ಯಾವುದು?
ದರ್ಶನ್ ಅವರ ಪತ್ನಿ ಮತ್ತು ಮಗ ವಿನೀಶ್ ಪ್ರತ್ಯೇಕವಾಗಿ ಎರಡು ಗಣೇಶನ ವಿಗ್ರಹ ತಯಾರಿಸಿದ್ದಾರೆ. ಈ ಎರಡರಲ್ಲಿ ಯಾವುದು ಚೆನ್ನಾಗಿದೆ ಎಂದು ಡಿ ಬಾಸ್ ಪತ್ನಿ ಕೇಳುತ್ತಿದ್ದಾರೆ. ನಿಮಗೆ ಈ ಎರಡು ಗಣೇಶ ಪೈಕಿ ಯಾವುದು ಇಷ್ಟ ಆಯ್ತು?

ಪರಿಸರ ಕಾಳಜಿ ಮೆರೆದ ದರ್ಶನ್
ಗೌರಿ ಗಣೇಶ ಹಬ್ಬದ ಪ್ರಯುಕ್ತ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಲ್ಲಿ ಶುಭಕೋರಿರುವ ದರ್ಶನ್ 'ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ' ಎಂದು ಮನವಿ ಮಾಡಿಕೊಂಡಿದ್ದಾರೆ. 'ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!!' ಎಂದು ತಿಳಿಸಿದ್ದಾರೆ.

ಮಣ್ಣಿನ ಗಣೇಶನ ಮೊರೆ ಹೋದ ಸಂಯುಕ್ತಾ
ನಟಿ ಸಂಯುಕ್ತಾ ಹೊರನಾಡು ಸಹ ಮಣ್ಣಿನ ಗಣೇಶನ ಮೊರೆ ಹೋಗಿದ್ದಾರೆ. ಪರಿಸರ ಕಾಳಜಿ ದೃಷ್ಠಿಯಿಂದ ಮಣ್ಣಿನ ಗಣೇಶ ಬಳಕೆ ಮಾಡುವುದು ಸೂಕ್ತ ಎಂದು ವಿನಂತಿಸಿದ್ದಾರೆ. ಜೊತೆಗೆ ಎಲ್ಲರಿಗೂ ಗೌರಿ ಗಣೇಶದ ಶುಭಾಶಯ ತಿಳಿಸಿದ್ದಾರೆ.


Click it and Unblock the Notifications











