For Quick Alerts
  ALLOW NOTIFICATIONS  
  For Daily Alerts

  ಉದ್ಯಮ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಪ್ರಶಸ್ತಿ ಪಡೆದ ದರ್ಶನ್ ಪತ್ನಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ ದೊರಕಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಿಜಯಲಕ್ಷ್ಮಿ ಹೊಸ ಉದ್ಯಮವನ್ನು ಆರಂಭಿಸಿದ್ದರು.

  ಇದು Darshan ಪತ್ನಿ ಮಾಡಿದ ಸಾಧನೆ | Filmibeat Kannada

  'ಮೈ ಫ್ರಶ್ ಬಾಸ್ಕೆಟ್' ಎಂಬ ಆನ್‌ಲೈನ್ ಆಪ್ ಸ್ಥಾಪಿಸಿದ್ದ ದರ್ಶನ್ ಪತ್ನಿ ರೈತರಿಗೆ ನೆರವಾಗುವಂತೆ ವ್ಯಾಪಾರ ಆರಂಭಿಸಿದ್ದರು. ಈ ಆಪ್ ಬಳಸಿ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಿತ್ತು.

  ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರಾರಂಭಿಸಿದ್ದಾರೆ ಹೊಸ ವ್ಯಾಪಾರ

  ಇನ್ನು ಗ್ರಾಹಕರಿಗೂ ಸಹ ನೇರವಾಗಿ ರೈತರಿಂದ ತರಕಾರಿ ಮತ್ತು ಹಣ್ಣುಗಳು ತಲುಪುತ್ತಿದ್ದವು. ರೈತರ ಪರವಾಗಿ, ಅವರಿಗೆ ಸಹಾಯವಾಗುವಂತಹ ಉದ್ಯಮ ಪ್ರಾರಂಭಿಸಿದ್ದ ವಿಜಯಲಕ್ಷ್ಮಿ ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

  ಇದೀಗ, ವಿಜಯಲಕ್ಷ್ಮಿ ಅವರ ಈ ಕೆಲಸಕ್ಕೆ 'ಟೈಮ್ಸ್ ಬಿಸಿನೆಸ್' ಅವರು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಸಂತಸವನ್ನು ಸ್ವತಃ ದರ್ಶನ್ ಪತ್ನಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ವಿಜಯಲಕ್ಷ್ಮಿ ಅವರು ಈ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಡಿ ಬಾಸ್ ಭಕ್ತರು ಫುಲ್ ಖುಷ್ ಆಗಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

  English summary
  Challening star Darshan's Wife Vijayalakshmi Awarded Upcoming Women Entrepreneur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X