»   » ಜೂ.ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ ವಿಜಯಲಕ್ಷ್ಮಿ.!

ಜೂ.ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ ವಿಜಯಲಕ್ಷ್ಮಿ.!

Posted By:
Subscribe to Filmibeat Kannada
ಜೂ.ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ ವಿಜಯಲಕ್ಷ್ಮಿ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ಹುಟ್ಟುಹಬ್ಬ ಇತ್ತೀಚೆಗಷ್ಟೇ ನೆರವೇರಿದ್ದು, ದರ್ಶನ್ ಅಭಿಮಾನಿಗಳು ಜೂನಿಯರ್ ಚಾಲೆಂಜಿಂಗ್ ಸ್ಟಾರ್ ಬರ್ತಡೇಯನ್ನ ಅದ್ಧೂರಿಯಾಗಿ ಆಚರಿಸಿದರು. ಡಿ-ಬಾಸ್ ಮನೆಯ ಬಳಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಆದ್ರೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಮಗನ ಹುಟ್ಟುಹಬ್ಬವನ್ನ ಆಚರಿಸಿದ ರೀತಿ ತುಂಬ ವಿಶೇಷವಾಗಿದೆ. ಮಗನ ಹುಟ್ಟುಹಬ್ಬಕ್ಕೆ 'ಹ್ಯಾಲೋವೀನ್ ಕಾನ್ಸೆಪ್ಟ್ ಇಟ್ಕೊಂಡು ಸ್ಪೆಷಲ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ.

ಈ ಫೋಟೋಗಳನ್ನ ಸ್ವತಃ ವಿಜಯಲಕ್ಷ್ಮಿ ಅವರೇ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಅವರ ಮಗನ ಹುಟ್ಟುಹಬ್ಬದ ಫೋಟೋಗಳನ್ನ ಮುಂದೆ ನೋಡಿ......

ಅಮ್ಮನ ಜೊತೆ ಬರ್ತಡೇ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಮಗ ವಿನೀಶ್ ಹುಟ್ಟುಹಬ್ಬವನ್ನ ವಿಜಯಲಕ್ಷ್ಮಿ ತಮ್ಮ ನಿವಾಸದಲ್ಲಿ ಆಚರಿಸಿದ್ದಾರೆ.

'ಹೈದರಾಬಾದ್'ನಲ್ಲಿ ಕನ್ನಡ ಬಾವುಟ ಹಾರಿಸಿ ಸಂಭ್ರಮಿಸಿದ 'ಕುರುಕ್ಷೇತ್ರ'.!

'ಹ್ಯಾಲೋವೀನ್' ಥೀಮ್ ನಲ್ಲಿ ಸಂಭ್ರಮ

ಈ ವರ್ಷದ ವಿನೀಶ್ ಬರ್ತ್ ಡೇಯನ್ನ ವಿಜಯಲಕ್ಷ್ಮಿ ಅವರು 'ಹ್ಯಾಲೋವೀನ್' (halloween) ಥೀಮ್ ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.

ವಿನೀಶ್ ಸ್ನೇಹಿತರ ಬಳಗ

ವಿನೀಶ್ ಬರ್ತಡೇ ಸಂಭ್ರಮದಲ್ಲಿ ಅವರ ಸ್ನೇಹಿತರೆಲ್ಲಾ ಭಾಗಿಯಾಗಿದ್ದು, ಮಸ್ತ್ ಎಂಜಾಯ್ ಮಾಡಿದ್ದಾರೆ.

'ಕುರುಕ್ಷೇತ್ರ'ದ ಒಂದು ಹಾಡಿಗೆ ಒಂದು ಕೋಟಿ ಸುರಿದ ನಿರ್ಮಾಪಕ ಮುನಿರತ್ನ!

'ಹ್ಯಾಲೋವೀನ್' ಗೆಟಪ್ ನಲ್ಲಿ ವಿಜಯಲಕ್ಷ್ಮಿ

ಇನ್ನು ವಿನೀಶ್ ಅವರ ತಾಯಿ ವಿಜಯಲಕ್ಷ್ಮಿ ಕೂಡ 'ಹ್ಯಾಲೋವೀನ್' (halloween) ನಲ್ಲಿ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಈ ರೀತಿ ಬರ್ತಡೇ ಯಾಕೆ?

ಅಂದ್ಹಾಗೆ, ದರ್ಶನ್ ಪುತ್ರನ ಬರ್ತಡೇಯನ್ನ 'ಹ್ಯಾಲೋವೀನ್' (halloween) ಥೀಮ್ ನಲ್ಲಿ ಆಚರಿಸುವುದಕ್ಕೆ ಒಂದು ಕಾರಣ ಇದೆ. ಯಾಕಂದ್ರೆ, ಅಕ್ಟೋಬರ್ 31 'ಹ್ಯಾಲೋವೀನ್' ದಿನ ಆಚರಿಸಲಾಗುತ್ತೆ. ಅದೇ ದಿನ ವಿನೀಶ್ ಜನನವಾಗಿತ್ತು.

'ಹ್ಯಾಲೋವೀನ್' ಶೃಂಗಾರ

ವಿನೀಶ್ ಬರ್ತಡೇ ಪ್ರಯುಕ್ತ ವಿಜಯಲಕ್ಷ್ಮಿ ಅವರು ತಮ್ಮ ನಿವಾಸವನ್ನ ಸಂಪೂರ್ಣವಾಗಿ 'ಹ್ಯಾಲೋವೀನ್' ಥೀಮ್ ನಲ್ಲಿ ಶೃಂಗಾರ ಮಾಡಿದ್ದರು.

'ಲಂಡನ್'ನಲ್ಲಿ ದಾಸನಿಗೆ ಪ್ರಶಸ್ತಿ: ಗೊಂದಲದ ಬಗ್ಗೆ ದರ್ಶನ್ ಮ್ಯಾನೇಜರ್ ಸ್ಪಷ್ಟನೆ.!

English summary
Kannada Actor, Challenging Star Darshan's wife Vijayalakshmi Celebrates her Son Vineesh's Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X