For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್ ಪತ್ನಿಗೆ ಕೊರೊನಾ ಪಾಸಿಟಿವ್ ವದಂತಿ: ವಿಜಯಲಕ್ಷ್ಮಿ ಹೇಳಿದ್ದೇನು?

  |

  ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಸ್ಯಾಂಡಲ್ ವುಡ್ ಕಲಾವಿದರಿಗೂ ಈಗ ಕೊರೊನಾ ಭಯ ಆವರಿಸಿದೆ. ಕಿಚ್ಚ ಸುದೀಪ್ ಅವರ ಪಕ್ಕದ ಮನೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗಾಗಿ ಸುದೀಪ್ ಮನೆ ಇರುವ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ.

  ದರ್ಶನ್ ಪತ್ನಿಗೆ ಕೊರೊನ ಪಾಸಿಟಿವ್..!? | Darshan Wife | Vijay Lakshmi | Filmibeat kannada

  ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಾಸವಿದ್ದಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ವರದಿಯಾಗಿದೆ. ಅಷ್ಟೆಯಲ್ಲದೆ ವಿಜಯಲಕ್ಷ್ಮಿ ಅವರಿಗೂ ಕೊರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.ಆದರೆ ಈ ಬಗ್ಗೆ ಈಗ ಸ್ವತಃ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ..

  ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡ ಮನಕಲಕುವ ಚಿತ್ರದರ್ಶನ್ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡ ಮನಕಲಕುವ ಚಿತ್ರ

  ವಿಜಯಲಕ್ಷ್ಮಿ ಇರುವ ಆಪಾರ್ಟ್ ಮೆಂಟ್ ನಲ್ಲಿ ಕೊರೊನಾ

  ವಿಜಯಲಕ್ಷ್ಮಿ ಇರುವ ಆಪಾರ್ಟ್ ಮೆಂಟ್ ನಲ್ಲಿ ಕೊರೊನಾ

  ದರ್ಶನ್ ಮತ್ತು ವಿಜಯಲಕ್ಷ್ಮಿ ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದಾರೆ. ಕೆಲವು ವರ್ಷಗಳಿಂದ ದರ್ಶನ್ ದಂಪತಿ ಈ ಅಪಾರ್ಟ್ ಮೆಂಟ್ ನಲ್ಲಿಯೆ ಇದ್ದಾರೆ. ಈಗ ಅದೆ ಅಪಾರ್ಟ್ ಮೆಂಟ್ ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

  ಸ್ಪಷ್ಟನೆ ನೀಡಿದ ವಿಜಯಲಕ್ಷ್ಮಿ

  ಸ್ಪಷ್ಟನೆ ನೀಡಿದ ವಿಜಯಲಕ್ಷ್ಮಿ

  ಟ್ವೀಟ್ ಮಾಡಿರುವ ದರ್ಶನ್ ಪತ್ನಿ"ನನಗೂ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಇದು ಸುಳ್ಳು. ನಾನು ಕ್ಷೇಮವಾಗಿದ್ದೀನಿ. ಎಲ್ಲರೂ ಈ ಕಷ್ಟದ ಸಮಯದಲ್ಲಿ ಸುರಕ್ಷಿತವಾಗಿರಿ" ಎಂದು ಟ್ವೀಟ್ ಮಾಡಿ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

  ಸಣ್ಣ ವ್ಯಾಪಾರಿಗಳ ಪರ ನಿಂತ ದರ್ಶನ್ ಪತ್ನಿ: ಪಿಜ್ಜಾ, ಬರ್ಗರ್ ಬಿಟ್ಟು ಕಿರಾಣಿ ಅಂಗಡಿಗೆ ಹೋಗಿ ಎಂದ ವಿಜಯಲಕ್ಷ್ಮೀಸಣ್ಣ ವ್ಯಾಪಾರಿಗಳ ಪರ ನಿಂತ ದರ್ಶನ್ ಪತ್ನಿ: ಪಿಜ್ಜಾ, ಬರ್ಗರ್ ಬಿಟ್ಟು ಕಿರಾಣಿ ಅಂಗಡಿಗೆ ಹೋಗಿ ಎಂದ ವಿಜಯಲಕ್ಷ್ಮೀ

  ರವಿಶಂಕರ್ ಗೌಡ ಕುಟುಂಬದಲ್ಲಿ ಆತಂಕ

  ರವಿಶಂಕರ್ ಗೌಡ ಕುಟುಂಬದಲ್ಲಿ ಆತಂಕ

  ಇದೇ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ನಟ ರವಿಶಂಕರ್ ಗೌಡ, ನಟಿ ಪೂಜಾ ಗಾಂಧಿ ಸಹ ವಾಸವಿದ್ದಾರೆ. ನಟ ರವಿಶಂಕರ್ ಗೌಡ ವಾಸವಿರುವ ಮನೆಯ ಮುಂದಿನ ಮಾನೆಯಲ್ಲಿಯೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆ ರವಿಶಂಕರ್ ಕುಟುಂಬವೀಗ ಆತಂಕದಲ್ಲಿದೆ.

  ರವಿಶಂಕರ್ ಗೌಡ ಟ್ವೀಟ್

  ರವಿಶಂಕರ್ ಗೌಡ ಟ್ವೀಟ್

  "ನನ್ನ ಅಪಾರ್ಟ್ ಮೆಂಟ್ ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕರೋನಾ. ನನ್ನ ಮಕ್ಕಳಿರುವ ಮನೆ ದೇವರೆ ಕಾಪಾಡಬೇಕು. ಬಾಗಿಲನ್ನು 14 ದಿನ ತೆರೆಯುವಂತಿಲ್ಲ Quarantin. ಸುದೀಪ , ಗಣಪ , ಸೃಜನ, ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ , ಸಂತೋಷ್ ಆನಂದ್, ರಘುರಾಮ್, ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.

  English summary
  Challenging star Darshan wife Vijayalakshmi clarified about covid positive rumours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X