ತಮ್ಮ ಪತಿ ದರ್ಶನ್‌ಗಾಗಿ ಶಕ್ತಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ...!

By ಫಿಲ್ಮಿಬೀಟ್ ಡೆಸ್ಕ್

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಸದ್ಯ ಪರಪ್ಪನ ಅಗ್ರಹಾರದ ಪಾಲಾದ ದರ್ಶನ್ ಅತ್ಯುತ್ತಮ ಉದಾಹರಣೆ.

ಮಾಡಬಾರದ್ದನ್ನ ಮಾಡಿದರೆ, ಆಗಬಾರದ್ದೇ ಆಗುತ್ತೆ ಅನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್, ಅದ್ಯಾರೋ ಪವಿತ್ರಾ ಎಂಬ ಮಾಯಾಂಗನೆಯ ಮೋಹದಲ್ಲಿ ಸಿಲುಕಿದ್ದಾರೆ. ಆದರೂ ಕೂಡ ದರ್ಶನ್ ಮೇಲೆ ಅವರ ಪತ್ನಿ ವಿಜಯ ಲಕ್ಷ್ಮೀ ಅವರಿಗೆ ಇರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಗಂಡ ದರ್ಶನ್ ಅವರನ್ನು ಜೈಲಿಂದ ಕರೆತರಲು ವಿಜಯಲಕ್ಷ್ಮೀ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಶಕ್ತಿ ದೇವತೆಯ ಮೊರೆ ಕೂಡ ಹೋಗಿದ್ದಾರೆ.

darshan-wife-vijayalakshmi-conducted-a-special-pooja-at-the-bande-mahakali-temple

ಹೌದು, ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ ಶ್ರೀ ಬಂಡೇ ಮಹಾಕಾಳಿ ದೇವಸ್ಥಾನಕ್ಕೆ ತೆರೆಳಿದ ವಿಜಯಲಕ್ಷ್ಮೀ, ಜೈಲಿನಾಚೆ ಪತಿಯ ದರ್ಶನಕ್ಕೆ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶೇಷ ಪೂಜೆಯನ್ನು ಮಾಡಿದ್ದಾರೆ. ಆಷಾಢ ಶನಿವಾರದ ಮಧ್ಯಾಹ್ನದಂದು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ, ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಂದ್ಹಾಗೇ ಈ ಎಲ್ಲ ಪ್ರಕರಣವಾಗುವ ಮುನ್ನ ದರ್ಶನ್ ಅವರಿಗೆ 5ನೇ ತಾರೀಖಿನಿಂದಲೇ ಮನಸ್ಸಿನಲ್ಲಿ ತುಂಬಾ ಆತಂಕ, ಕಸಿವಿಸಿ ಕಾಡುತ್ತಿತ್ತಂತೆ. ಅವತ್ತು ರಾತ್ರಿ ಕೂಡ ನಿದ್ದೆ ಬಾರದೇ ಒದ್ದಾಡಿದ್ದರಂತೆ ನಟ ದರ್ಶನ್. ಬಳಿಕ 6ನೇ ತಾರೀಖಿನಂದು ಅವರು ಯಾವತ್ತೂ ನಡೆದುಕೊಳ್ಳುವ ಬೆಂಗಳೂರಿನ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದ ಅರ್ಚಕರನ್ನು ಕರೆಸಿಕೊಂಡು ಈ ಬಗ್ಗೆ ಹೇಳಿಕೊಂಡಿದ್ದರು ಅನ್ನುವ ಸುದ್ದಿ ಇದೆ. ದರ್ಶನ್‌ ಅವರಿಗೆ ದೃಷ್ಟಿ ತೆಗೆದು, ತಡೆ ಒಡೆದು ಬಳಿಕ ಒಂದು ವಾರದ ಮಟ್ಟಿಗೆ ಯಾವುದೇ ಹೊಸ ಕೆಲಸ ಮಾಡಬೇಡಿ. ಸಾಧ್ಯವಾದರೆ ಬೆಂಗಳೂರು ಬಿಟ್ಟು ಎಲ್ಲಾದರೂ ದೂರ ಹೋಗಿಬಿಡಿ ಎಂದು ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದ ಅರ್ಚಕರು ದರ್ಶನ್‌ಗೆ ಹೇಳಿದ್ದರು ಅನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಆದರೆ ದರ್ಶನ್ ಅವರು ಅರ್ಚಕರ ಮಾತನ್ನು ಗಂಭೀರವಾಗಿ ತಗೊಳ್ಳಲೇ ಇಲ್ಲ ಎಂಬ ಸುದ್ದಿಯೂ ಇದೆ.

darshan-wife-vijayalakshmi-conducted-a-special-pooja-at-the-bande-mahakali-temple

ಉಳಿದಂತೆ ಶತಾಯು ಗತಾಯು ದರ್ಶನ್ ಅವರನ್ನು ಜೈಲಿಂದ ಹೊರ ಕರೆತರಬೇಕು ಎಂದು ಪ್ರಯತ್ನವನ್ನೂ ಮಾಡುತ್ತಿರುವ ವಿಜಯಲಕ್ಷ್ಮಿ, ಕೆಲ ದಿನದ ಹಿಂದೆ ದರ್ಶನ್ ಅವರ ಅಭಿಮಾನಿಗಳಿಗೆ ಸಂದೇಶ ನೀಡಿದ್ದರು. ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ.. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದ ಇರೋಣ.." ಎಂದು ಮನವಿ ಮಾಡಿಕೊಂಡಿದ್ದರು.

ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನ ಅವರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ ಎಂದಿದ್ದರು ವಿಜಯಲಕ್ಷ್ಮಿ ದರ್ಶನ್.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X