ಈ ಕಾರಣಕ್ಕಾಗಿ ಮಂಡ್ಯದಲ್ಲಿ ಸುಮಲತಾ ಗೆಲ್ಲಬೇಕಂತೆ: ದರ್ಶನ್ ಪತ್ನಿ ಟ್ವೀಟ್
ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದಿದೆ. ಈಗ ಏನಿದ್ರು ಗೆಲ್ಲೋದು ಯಾರು ಎಂಬ ಲೆಕ್ಕಾಚಾರ ಶುರುವಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾನ ಅಥವಾ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲ್ಲುತ್ತಾರ ಎಂಬುದು ಮಂಡ್ಯದ ಜನರ ಕುತೂಹಲವಾಗಿದೆ.
ಮಂಡ್ಯದಲ್ಲಿ ಸುಮಲತಾ ಮತ್ತು ನಿಖಿಲ್ ಬೆಂಬಲಿಗರಿಂದ ಬಾಜಿ ಕೂಡ ಆರಂಭವಾಗಿದೆ. ಸುಮಲತಾ ಗೆಲ್ತಾರೆ ಎಂದು ಕೆಲವರು, ನಿಖಿಲ್ ಗೆಲ್ತಾರೆ ಎಂದು ಮತ್ತೆ ಕೆಲವರು ಪಂದ್ಯ ಕಟ್ಟುತ್ತಿದ್ದಾರಂತೆ.
ದೇಶಕ್ಕೆ ಪ್ರಧಾನಿ ಯಾರಾಗ್ತಾರೆ ಎನ್ನುವುದಕ್ಕಿಂತ ಮಂಡ್ಯ ಸಂಸದರು ಯಾರಾಗ್ತಾರೆ ಎಂಬುದು ಮುಖ್ಯ ಎಂದು ಗುರುತಿಸಿಕೊಂಡಿದೆ. ಇದೀಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಲೇಟ್ ಆದ್ರೂ, ಲೇಟೆಸ್ಟ್ ಆಗಿ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟ್ವಿಟ್ಟರ್ ನಲ್ಲಿ ಸುಮಲತಾ ಪರ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ. ದರ್ಶನ್ ಪತ್ನಿ ಟ್ವೀಟ್ ನಲ್ಲಿ ಏನಿದೆ? ಮುಂದೆ ಓದಿ.....

ಸುಮಲತಾ ಅವರನ್ನ ಗೆಲ್ಲಿಸಿ
ಏಪ್ರಿಲ್ 18 ರಂದು ಮಂಡ್ಯದಲ್ಲಿ ಚುನಾವಣೆ ನಡೆದಿತ್ತು. ಆ ದಿನ ಬೆಳಿಗ್ಗೆ ಟ್ವಿಟ್ಟರ್ ನಲ್ಲಿ ಸುಮಲತಾ ಅವರನ್ನ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. 'ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ರವರಿಗೆ ನಿಮ್ಮ ಮತವನ್ನು ನಿಡಿ ಜಯಶೀಲರನ್ನಾಗಿ ಮಾಡಿ' ಎಂದು ಟ್ವೀಟ್ ಮಾಡಿದ್ದರು.

ಮಂಡ್ಯಕ್ಕೆ ಕೀರ್ತಿ ಬರುತ್ತದೆ
ಸುಮಲತಾ ಅವರನ್ನ ಯಾಕೆ ಗೆಲ್ಲಿಸಬೇಕು ಎಂಬುದನ್ನ ಮೂರು ಕಾರಣ ನೀಡಿರುವ ದರ್ಶನ್ ಪತ್ನಿ, 'ದೇಶದ ಇತಿಹಾಸದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯನ್ನ ಪಕ್ಷೇತರವಾಗಿ ಗೆಲ್ಲಿಸಿದ ಕೀರ್ತಿ ಮಂಡ್ಯಕ್ಕೆ ಬರುತ್ತದೆ' ಎಂದಿದ್ದರು.

ಹಣದ ಆಸೆಗೆ ಮರುಳಾಗಿಲ್ಲ
'ರಾಜ್ಯದಲ್ಲಿ ಆಡಳಿತರೂಢ ಮುಖ್ಯಮಂತ್ರಿ, ಜಿಲ್ಲೆಯ ಎಂಟು ಶಾಸಕರನ್ನು ಹೊಂದಿದ್ದರೂ, ಸ್ವತಃ ಸಿಎಂ ಪುತ್ರ ಅಭ್ಯರ್ಥಿಯಾಗಿದ್ದರೂ ಹಣದ ಆಸೆಗೆ ಮಂಡ್ಯದ ಜನ ಮರುಳಾಗಲಿಲ್ಲವೆಂಬ ಕೀರ್ತಿ ಸಲ್ಲುತ್ತೆ' ಎಂದು ಇನ್ನೊಂದು ಕಾರಣ ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಪ್ರಪ್ರಥಮ ಪಕ್ಷೇತರ ಮಹಿಳೆ
'ಕರ್ನಾಟಕದ ಇತಿಹಾಸದಲ್ಲಿ ಪ್ರಪ್ರಥಮ ಪಕ್ಷೇತರ ಮಹಿಳಾ ಸಂಸದರನ್ನು ಗೆಲ್ಲಿಸಿದ ಕೀರ್ತಿ ನಮ್ಮ ಮಂಡ್ಯಕ್ಕೆ ಬರುತ್ತೆ' ಎಂದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡಿರುವ ಟ್ವೀಟ್ ನಲ್ಲಿದೆ.


Click it and Unblock the Notifications











