'ಕರ್ಮ' : ಮತ್ತೆ ಸುದ್ದಿ ಮಾಡುತ್ತಿದೆ ವಿಜಯಲಕ್ಷ್ಮಿ ದರ್ಶನ್ ಟ್ವೀಟ್

Recommended Video

ಸುದ್ದಿ ಮಾಡುತ್ತಿದೆ ವಿಜಯಲಕ್ಷ್ಮಿ ದರ್ಶನ್ ಟ್ವೀಟ್

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇತ್ತೀಚಿಗಷ್ಟೆ ತಮ್ಮ ಪತಿಯ ಹೆಸರನ್ನು ಟ್ವಿಟ್ಟರ್ ಖಾತೆಯಿಂದ ತೆಗೆದು ಹಾಕಿದ್ದರು. ಈ ವಿಷಯ ಇಡೀ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಅದರ ಬಳಿಕ ಇಂದು ವಿಜಯಲಕ್ಷ್ಮಿ ಮಾಡಿರುವ ಟ್ವೀಟ್ ಮತ್ತೆ ಚರ್ಚೆಗೆ ಕಾರಣವಾಗಿದೆ.

ಸದ್ಯ, ಸ್ಯಾಂಡಲ್ ವುಡ್ ಸ್ಟಾರ್ ವಾರ್ ಜೋರಾಗಿ ನಡೆಯುತ್ತಿದೆ. 'ಪೈಲ್ವಾನ್' ಸಿನಿಮಾ ಬಿಡುಗಡೆಯ ನಂತರ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಕೆಸರೆರಚಾಟ ಹೆಚ್ಚಾಗಿದೆ. ಈ ಘಟನೆಗಳ ಬಿಸಿ ಇರುವಾಗಲೇ ವಿಜಯಲಕ್ಷ್ಮಿ ಒಂದು ಟ್ವೀಟ್ ಮಾಡಿದ್ದಾರೆ.

ಭಾನುವಾರದ ವಿಶೇಷವಾಗಿ 'ಕರ್ಮ'ದ ಬಗ್ಗೆ ವಿಜಯಲಕ್ಷ್ಮಿ ಟ್ವೀಟ್ ಮಾಡಿದ್ದಾರೆ. ಆದರೆ, ತಮ್ಮ ಟ್ವೀಟ್ ಯಾವುದೇ ವ್ಯಾಖ್ಯಾನ ನೀಡಿಲ್ಲ. ಹಾಗಾಗಿ, ಅವರ ಟ್ವೀಟ್ ನೂರಾರೂ ಅರ್ಥಗಳನ್ನು ಕಲ್ಪಿಸುವ ಹಾಗೆ ಮಾಡಿದೆ.

ವಿಜಯಲಕ್ಷ್ಮಿ ಮಾಡಿರುವ ಟ್ವೀಟ್ ಏನು?

ವಿಜಯಲಕ್ಷ್ಮಿ ಮಾಡಿರುವ ಟ್ವೀಟ್ ಏನು?

''ಸೇಡು ತೀರಿಕೊಳ್ಳುವ ಅಗತ್ಯ ಇಲ್ಲ. ಸುಮ್ಮನೆ ಕೂತು ಕಾಯಿರಿ. ನಿಮಗೆ ನೋವು ನೀಡಿದವರು, ಅಂತಿಮವಾಗಿ ಅವರಿಗೆ ಅವರೇ ಕೆಟ್ಟದನ್ನು ಮಾಡಿಕೊಳ್ಳುತ್ತಾರೆ. ನಿಮಗೆ ಅದೃಷ್ಟ ಇದ್ದರೆ, ದೇವರು ಅದನ್ನು ನೋಡಲು ಅವಕಾಶ ನೀಡುತ್ತಾನೆ.'' ಎನ್ನುವ ಟ್ವೀಟ್ ವಿಜಯಲಕ್ಷ್ಮಿ ಮಾಡಿದ್ದು, ಇದಕ್ಕೆ 'ಕರ್ಮ' ಎಂಬ ಶೀರ್ಷಿಕೆ ಇದೆ.

ಇದು ಕುಟುಂಬಕ್ಕೆ ಸಂಬಂಧ ಪಟ್ಟಿದೆಯೇ?

ಇದು ಕುಟುಂಬಕ್ಕೆ ಸಂಬಂಧ ಪಟ್ಟಿದೆಯೇ?

ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವೆ ಮತ್ತೆ ಮುನಿಸು ಎದ್ದಿತ್ತು. ಹೀಗಾಗಿ, ಇದು ಅವರ ಕುಟುಂಬಕ್ಕೆ ಸಂಬಂಧಪಟ್ಟ ಟ್ವೀಟ್ ಇರಬಹುದಾ ಎನ್ನುವ ಪ್ರಶ್ನೆ ಮೂಡಿದೆ. ಇನ್ನೊಂದು ಕಡೆ ವಿಜಯಲಕ್ಷ್ಮಿ ಟ್ವಿಟ್ಟರ್ ಖಾತೆಯನ್ನು ಗಮನಿಸಿದರೆ, ಅವರು ಹೆಚ್ಚಾಗಿ ಪತಿ ದರ್ಶನ್, ಮಗ ವಿನೀಶ್ ಬಗ್ಗೆಯೇ ಈ ಹಿಂದೆಯಿಂದ ಟ್ವೀಟ್ ಮಾಡಿದ್ದರು.

ಚಿತ್ರರಂಗಕ್ಕೆ ಸಂಬಂಧಪಟ್ಟ ವಿಚಾರವೇ?

ಚಿತ್ರರಂಗಕ್ಕೆ ಸಂಬಂಧಪಟ್ಟ ವಿಚಾರವೇ?

ಚಿತ್ರರಂಗದಲ್ಲಿ ಮತ್ತೆ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ನಡುವೆ ಗುದ್ದಾಟ ನಡೆಯುತ್ತಿದೆ. ದರ್ಶನ್ ಅಭಿಮಾನಿಗಳು 'ಪೈಲ್ವಾನ್' ಸಿನಿಮಾವನ್ನು ಪೈರಸಿ ಮಾಡಿದ್ದಾರೆ, ಚಿತ್ರದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುತ್ತಿದ್ದಾರೆ ಎನ್ನುವ ಆರೋಪ ಬಂದಿದೆ. ಇದರ ಬಿಸಿ ಜೋರಾಗಿದೆ. ಹೀಗಾಗಿ, ಈ ಬೆಳೆವಣಿಗೆಗಳ ಬಗ್ಗೆಯೇ ವಿಜಯಲಕ್ಷ್ಮಿ ಟ್ವೀಟ್ ಮಾಡಿದ್ದಾರೆಯೇ ಎನ್ನುವ ಅನುಮಾನ ಕಾಡಿದೆ.

ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಪ್ರತಿಕ್ರಿಯೆ

ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಪ್ರತಿಕ್ರಿಯೆ

ವಿಜಯಲಕ್ಷ್ಮಿ ಮಾಡಿರುವ ಟ್ವೀಟ್ ಗೆ ದರ್ಶನ್ ಹಾಗೂ ಸುದೀಪ್ ಇಬ್ಬರೂ ಅಭಿಮಾನಿಗಳು ಕಾಮೆಂಟ್ಸ್ ಮಾಡಿದ್ದಾರೆ. ದರ್ಶನ್ ಅವರ ಕೆಲವು ಅಭಿಮಾನಿಗಳು ವಿಜಯಲಕ್ಷ್ಮಿ ಟ್ವೀಟ್ ಗೆ ಮೆಚ್ಚುಗೆ ಸೂಚಿಸಿದ್ದರೆ, ಇನ್ನು ಕೆಲವರು ತಮ್ಮ ವಿರೋಧ ವ್ಯಕ್ತಪಡಿದ್ದಾರೆ. ಸುದೀಪ್ ಫ್ಯಾನ್ಸ್ ಕೂಡ ಇದೇ ಕೆಲಸ ಮಾಡಿದ್ದಾರೆ.

ನೂರಾರೂ ಅರ್ಥಗಳು ಬರುತ್ತಿವೆ

ನೂರಾರೂ ಅರ್ಥಗಳು ಬರುತ್ತಿವೆ

ವಿಜಯಲಕ್ಷ್ಮಿ ಟ್ವೀಟ್ ನೂರಾರೂ ಅರ್ಥಗಳಿಗೆ ಕಾರಣವಾಗಿದೆ. ಟ್ವೀಟ್ ನೋಡಿದ ಪ್ರತಿಯೊಬ್ಬರು ಅವರಿಗೆ ತಿಳಿದ ಹಾಗೆ ಅರ್ಥೈಸಿಕೊಳ್ಳುತ್ತಿದ್ದಾರೆ. ಆದರೆ, ತಾವು ಮಾಡಿದ ಟ್ವೀಟ್ ನ ಅರ್ಥ ಏನು, ತಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ವಿಜಯಲಕ್ಷ್ಮಿ ಅವರೇ ಹೇಳಬೇಕಾಗಿದೆ. ಆಗ ಮಾತ್ರ ಆ ಟ್ವೀಟ್ ಹಿಂದಿನ ಅರ್ಥ ತಿಳಿಯಲಿದೆ.

More from Filmibeat

English summary
Kannada actor Darshan wife Vijayalakshmi tweet create confusion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X