For Quick Alerts
  ALLOW NOTIFICATIONS  
  For Daily Alerts

  ಪತಿ ದರ್ಶನ್ ಗೆ ವಿಜಯಲಕ್ಷ್ಮಿ ಕೊಟ್ರು ದೊಡ್ಡ ಸರ್ಪ್ರೈಸ್

  By Pavithra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದುಕೊಂಡಿವೆ. ಅಭಿಮಾನಿಗಳು 'ಡಿ ಬಾಸ್' ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಲು ವಿಭಿನ್ನವಾಗಿ ಯೋಚನೆ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಅವರ ಪತ್ನಿ ಕೂಡ ತಮ್ಮ ಪತಿಯ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.

  ವಾರಕ್ಕೂ ಮುಂಚೆಯೇ ವಿಜಯಲಕ್ಷ್ಮಿ ದರ್ಶನ್ ವಿಶೇಷವಾಗ ಉಡುಗೊರೆಯನ್ನ ನೀಡಿದ್ದಾರೆ. ಹೌದು ದರ್ಶನ್ ಪತ್ನಿ ನಿನ್ನೆ ತಮ್ಮ ಕೈ ಮೇಲೆ ದರ್ಶನ್ ಅವರ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾರೆ.

  ಸಾಮಾನ್ಯವಾಗಿ ಅಭಿಮಾನಿಗಳು ಸ್ಟಾರ್ ಗಳ ಹೆಸರು ಹಾಗೂ ಭಾವಚಿತ್ರವನ್ನ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ದರ್ಶನ್ ಪತ್ನಿ ಈ ಬಾರಿಯ ಬರ್ತಡೇ ಸ್ಪೆಷಲ್ ಆಗಿ ಈ ರೀತಿಯಲ್ಲಿ ಡಿ ಬಾಸ್ ಅವರಿಗೆ ಉಡುಗೊರೆ ನೀಡುತ್ತಿದ್ದಾರೆ.

  ಒಂದೇ ಹಾದಿಯಲ್ಲಿ ದರ್ಶನ್ ಹಾಗೂ ಸುದೀಪ್ ಹೆಜ್ಜೆ ಒಂದೇ ಹಾದಿಯಲ್ಲಿ ದರ್ಶನ್ ಹಾಗೂ ಸುದೀಪ್ ಹೆಜ್ಜೆ

  ದರ್ಶನ್ ಅನ್ನುವ ಹೆಸರನ್ನ ತಮ್ಮ ಎಡಗೈ ಉಂಗುರದ ಬೆರಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ವಿಜಯಲಕ್ಷ್ಮಿ. ಅದರ ಜೊತೆಯಲ್ಲಿ ಒಂದು ಹಾರ್ಟ್ ಸಿಂಬಲ್ ಕೂಡ ಇದೆ ಅನ್ನುವುದು ಖುಷಿಯ ವಿಚಾರ.

  ಪರ್ಷಿಯನ್ ಬೆಕ್ಕನ್ನು ಹಿಡಿದುಕೊಂಡು ತೆಗೆಸಿರುವ ಫೋಟೋವನ್ನ ವಿಜಯಲಕ್ಷ್ಮಿ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ. ಈ ಫೋಟೋದಲ್ಲಿ ಹಚ್ಚೆ ಕಾಣಿಸುತ್ತಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  English summary
  Kannada actor Darshan' wife Vijayalakshmi tottooed her husband's name on her left Hand. This tattoo comes as a surprise gift to Challenging Star Darshan on his Birthday

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X