ಮಹಿಳೆಯರನ್ನ ಗೌರವಿಸಿ ಎಂದು 'ಎಚ್ಚರಿಕೆ' ನೀಡಿದ ದರ್ಶನ್ ಪತ್ನಿ
Recommended Video

ಚಿತ್ರರಂಗದಲ್ಲಿ ಮೀಟೂ ಅಭಿಯಾನ ದೊಡ್ಡ ಸದ್ದು ಮಾಡುತ್ತಿದೆ. ನಟಿ, ಕಲಾವಿದೆ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನಿತರ ಕೆಲಸ ಮಾಡುವ ಮಹಿಳೆಯರು ತಮ್ಮ ಮೇಲಾದ ದೌರ್ಜನ್ಯ ಮತ್ತು ಕಿರುಕುಳವನ್ನ ಬಹಿರಂಗಪಡಿಸುತ್ತಿದ್ದಾರೆ.
ಮತ್ತೊಂದೆಡೆ ಕೇರಳದ ಶಬರಿಮಲೆಗೆ ಮಹಿಳೆಯರು ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಹೀಗಿದ್ದರೂ, ಮಹಿಳೆಯ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಹೀಗೆ, ಮಹಿಳೆಯ ಮೇಲೆ ಕಿರುಕುಳ, ದೌರ್ಜನ್ಯ ನಡೆಯುತ್ತಿರುವ ಇಂತಹ ಸಮಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಟ್ವೀಟ್ ಮಾಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಶುಭಕೋರಿರುವ ವಿಜಯಲಕ್ಷ್ಮಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
'ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ'
''ಪ್ರತಿಯೊಬ್ಬ ಮಹಿಳೆಯೊಳಗೆ 'ದುರ್ಗ' ಇರ್ತಾಳೆ. ದೇಗುಲಕ್ಕೆ ಹೋಗಿ ದೇವಿಯ ಪೂಜಿಸುವ ಮೊದಲು ಮಹಿಳೆಯನ್ನ ಗೌರವಿಸುವುದನ್ನ ಕಲಿಯಿರಿ'' ಎಂದು ಟ್ವೀಟ್ ಮಾಡಿದ್ದಾರೆ.
ಇದು ಹಬ್ಬದ ಪ್ರಯುಕ್ತ ಶುಭಕೋರಿದ್ದರೂ, ಸದ್ಯದ ಬೆಳವಣಿಗಳಿಗೆ ಸೂಕ್ತವಾಗಿದೆ ಎನ್ನುವುದು ನೆಟ್ಟಿಗರ ಅಭಿಪ್ರಾಯ. ಇನ್ನು ದರ್ಶನ್ ಪತ್ನಿಯ ಈ ಟ್ವೀಟ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ನಿಜ ಎನ್ನುತ್ತಿದ್ದಾರೆ.


Click it and Unblock the Notifications











