For Quick Alerts
  ALLOW NOTIFICATIONS  
  For Daily Alerts

  ಮಗನ ಫೋಟೋ ಜೊತೆಗೆ ಸಂಕ್ರಾಂತಿ ಶುಭಾಶಯ ಕೋರಿದ ದರ್ಶನ್ ಪತ್ನಿ

  |
  ಫಾರ್ಮ್ ಹೌಸ್ ನಲ್ಲಿ ದರ್ಶನ್ ಸಂಕ್ರಾಂತಿ ಸಂಭ್ರಮ |FILMIBEAT KANNADA

  ಮಕರ ಸಂಕ್ರಾಂತಿಯ ಸಂಭ್ರಮ, ಸಡಗರ ಜೋರಾಗಿದೆ. ಎಲ್ಲರೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಿದ್ದಾರೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂದು ಹೇಳುತ್ತಿದ್ದಾರೆ. ಸಂಕ್ರಾಂತಿಯ ದಿನ ಸ್ಟಾರ್ ಗಳು ಏನ್ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಏನು ಸಂದೇಶ ನೀಡುತ್ತಾರೆ ಎನ್ನುವುದು ಕುತೂಹಲ ಅನೇಕರಲ್ಲಿ ಇರುತ್ತೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ವಿಜಯಲಕ್ಷ್ಮಿ "ಈ ಮಕರ ಸಂಕ್ರಾಂತಿ ನಿಮಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಸಂಪತ್ತನ್ನು ಕರುಣಿಸಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು" ಎಂದು ಹೇಳಿದ್ದಾರೆ.

  'ಕರ್ಮ' : ಮತ್ತೆ ಸುದ್ದಿ ಮಾಡುತ್ತಿದೆ ವಿಜಯಲಕ್ಷ್ಮಿ ದರ್ಶನ್ ಟ್ವೀಟ್'ಕರ್ಮ' : ಮತ್ತೆ ಸುದ್ದಿ ಮಾಡುತ್ತಿದೆ ವಿಜಯಲಕ್ಷ್ಮಿ ದರ್ಶನ್ ಟ್ವೀಟ್

  ವಿಶೇಷ ಅಂದರೆ ಶುಭಾಶಯದ ಜೊತೆಗೆ ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಪ್ಪನಂತೆ ಮಗ ವಿನೀಶ್ ಕೂಡ ಪ್ರಾಣಿ ಪ್ರೀಯಾ. ಆಗಾಗ ಅಪ್ಪನ ಜೊತೆ ಪ್ರೀತಿಯ ಪ್ರಾಣಿಗಳ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯಲಕ್ಷ್ಮಿ ವಿಶ್ ಗೆ ಡಿ ಬಾಸ್ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಜೊತೆಗೆ ಜ್ಯೂ ಡಿ ಬಾಸ್ ಎಂದು ಕರೆಯುತ್ತಿದ್ದಾರೆ.

  ಇಂದು ಸಂಕ್ರಾಂತಿಯ ಪ್ರಯುಕ್ತ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ರಾಬರ್ಟ ಚಿತ್ರದ ಎರಡನೆ ಲುಕ್ ರಿಲೀಸ್ ಆಗಿದ್ದು ದರ್ಶನ್ ನೋಡಿ ಫುಲ್ ಫದಾ ಆಗಿದ್ದಾರೆ. ಆಂಜನೇಯನ ಅವತಾರವೆತ್ತಿ ಬಂದ ಡಿ ಬಾಸ್ ಗೆ ಉಘೇ ಎನ್ನುತ್ತಿದ್ದಾರೆ ಅಭಿಮಾನಿಗಳು.

  English summary
  Kannada actor Darshan wife Vijayalakshmi wishes for Sankranti with her son photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X