ದರ್ಶನ್‌ಗೆ ಮತ್ತೊಂದು ಸಂಕಷ್ಟ: ಈ ಬಾರಿ ಪತಿ ಜೊತೆ ತೊಂದರೆಯಲ್ಲಿ ಸಿಕ್ಕಿಕೊಂಡ ವಿಜಯಲಕ್ಷ್ಮಿ !

By ಫಿಲ್ಮಿಬೀಟ್ ಡೆಸ್ಕ್

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಬೆನ್ನಲ್ಲೇ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿ ನಂ 2 ಆಗಿದ್ದಾರೆ. ಇದೇ ಪ್ರಕರಣದಲ್ಲಿ ಗೆಳತಿ ಪವಿತ್ರಾ ಗೌಡ ಮೊದಲನೇ ಆರೋಪಿ ಆಗಿದ್ದಾರೆ. ಈಗ ದರ್ಶನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಇದರಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೊದಲನೇ ಆರೋಪಿ ಆಗಿದ್ದಾರೆ.

ದರ್ಶನ್ ಈ ಬಾರಿ ಸರಿಯಾಗಿ ಲಾಕ್ ಆಗಿದ್ದಾರೆ ಅಂತ ಅನಿಸುತ್ತಿದೆ. ಅದರಲ್ಲೂ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿಬಂದಿದ್ದು, ಸದ್ಯ ಇದು ಮುಗಿಯುವ ಹಾಗೆ ಕಾಣುತ್ತಿಲ್ಲ. ಅಷ್ಟೇ ಮತ್ತೊಂದು ಸಂಕಷ್ಟ ಇವರನ್ನು ಹುಡುಕಿಕೊಂಡು ಬಂದಿದೆ. ಅಷ್ಟೇ ಅಲ್ಲ ಇವರ ತಪ್ಪಿಗೀಗ ಪತ್ನಿ ವಿಜಯಲಕ್ಷ್ಮಿ ಕೂಡ ತೊಂದರೆಗೆ ಸಿಕ್ಕಿಕೊಂಡಂತೆ ಆಗಿದೆ.

Darshan wife Vijaylakshmi is A 1 in another case filed by forest department

ದರ್ಶನ್ ತೋಟದಲ್ಲಿ ಕಾನೂನು ಬಾಹಿರವಾಗಿ ವಿಶಿಷ್ಟ ಜಾತಿಯ ಪಕ್ಷಿಯನ್ನು ಸಾಕಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದೂರನ್ನು ದಾಖಲಿಸಿತ್ತು. ವಿಶಿಷ್ಠ ಪಕ್ಷಿಯನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲು ಮಾಡಿಕೊಂಡಿತ್ತು. ಜೊತೆ ದರ್ಶನ್ ಹಾಗೂ ಸಂಬಂಧ ಪಟ್ಟವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ದರ್ಶನ್ ಅರಣ್ಯ ಇಲಾಖೆ ನೀಡಿದ ನೋಟಿಸ್‌ಗೆ ಕ್ಯಾರೆ ಅಂದಿರಲಿಲ್ಲ.

ದರ್ಶನ್ ಮೈಸೂರಿನ ಟಿ.ನರಸೀಪುರದ ತಮ್ಮ ತೋಟದಲ್ಲಿ ವಿಶಿಷ್ಠ ಪ್ರಭೇದದ ಬಾರ್‌ ಹೆಡೆಡ್ ಗೂಸ್ ಬಾತು ಕೋಳಿಯನ್ನು ಸಾಕಿದ್ದರು. ಇದು ಅರಣ್ಯ ಇಲಾಖೆಯ ನಿಯಮಾನುಸಾರ ಕಾನೂನು ಬಾಹಿರ. ಈ ಕಾರಣಕ್ಕೆ ದೂರನ್ನು ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಹಲವು ನೋಟಿಸ್ ನೀಡಿದ್ದರೂ, ದರ್ಶನ್ ಹಾಜರಾಗಿರಲಿಲ್ಲ. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ ಎಂದು ವರದಿಯಾಗಿದೆ.

ಮೈಸೂರಿನ ಟಿ.ನರಸೀಪುರದಲ್ಲಿರುವ ತೋಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿ ಇದೆ. ಈ ಕಾರಣಕ್ಕೆ ವಿಜಯಲಕ್ಷ್ಮಿ ಅವರನ್ನು ಮೊದಲನೇ ಆರೋಪಿಯನ್ನಾಗಿ ಮಾಡಲಾಗಿದೆ. ಹಾಗೇ ಈ ಪ್ರಾಪರ್ಟಿಯ ಮ್ಯಾನೇಜರ್ ಆಗಿರುವ ನಾಗರಾಜ್ ಅವರನ್ನು 2ನೇ ಆರೋಪಿ ಹಾಗೂ ದರ್ಶನ್ 3ನೇ ಆರೋಪಿಯನಾಗಿ ಮಾಡಿ ಅರಣ್ಯ ಇಲಾಖೆ ಚಾರ್ಜ್‌ಶೀಟ್ ಅನ್ನು ಸಲ್ಲಿಸುವುದಕ್ಕೆ ನಿರ್ಧರಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Darshan wife Vijaylakshmi is A 1 in another case filed by forest department

ರೇಣುಕಾಸ್ವಾಮಿ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡ ಬೆನ್ನಲ್ಲೇ ಇತ್ತ ಅರಣ್ಯ ಇಲಾಖೆ ಕೂಡ ಈ ಪ್ರಕರಣವನ್ನು ಚುರುಕು ಗೊಳಿಸಿದೆ. ಹೀಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ಪತಿ ದರ್ಶನ್‌ಗೆ ಜಾಮೀನು ಕೊಡಿಸುವುದಕ್ಕೆ ಓಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಈಗ ಅವರ ವಿರುದ್ಧವೇ ದೂರು ದಾಖಲಾಗಿದ್ದು, ಕಾನೂನು ಹೋರಾಟ ಮಾಡಬೇಕಾಗಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದರು ಅನ್ನುವ ಬಗ್ಗೆ ಹಲವು ಸಾಕ್ಷ್ಮಿಗಳು ಸಿಕ್ಕಿವೆ ಅಂತ ವರದಿಯಾಗಿವೆ. ಹೀಗಾಗಿ ಸದ್ಯಕ್ಕೆ ದರ್ಶನ್ ಈ ಪ್ರಕರಣದಿಂದ ಹೊರ ಬರುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಇನ್ನೂ ಮೂರು ದಿನದಲ್ಲಿ ಪೊಲೀಸ್ ಕಸ್ಟಡಿ ಅವಧಿ ಮುಗಿಯಲಿದೆ. ಅಷ್ಟರೊಳಗೆ ಪೊಲೀಸರ ಬಳಿಕ ಏನೆಲ್ಲ ಸಾಕ್ಷಿಗಳು ಇವೆ? ದರ್ಶನ್ ಅಪರಾಧಿನಾ ಅಲ್ವಾ? ಅನ್ನೋದು ಗೊತ್ತಾಗಲಿದೆ.

More from Filmibeat

English summary
Vijalakshmi A 1, property manager Nagaraj A 2 and Darshan in A 3 in case filed by forest department:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X