»   » 'ಕರಿಯ-2' ಚಿತ್ರದ ಆಡಿಯೋ ರಿಲೀಸ್ ಮಾಡಲಿರುವ ದರ್ಶನ್

'ಕರಿಯ-2' ಚಿತ್ರದ ಆಡಿಯೋ ರಿಲೀಸ್ ಮಾಡಲಿರುವ ದರ್ಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕರಿಯ-2' ಚಿತ್ರದ ಹಾಡುಗಳನ್ನು ರಿಲೀಸ್ ಮಾಡಲಿದ್ದಾರೆ. ಜುಲೈ 28 ರಂದು ಈ ಕಾರ್ಯಕ್ರಮ ನಡೆಯಲಿದ್ದು, ದರ್ಶನ್ ಆಡಿಯೋ ಬಿಡುಗಡೆ ಮಾಡಲಿದ್ದಾರೆ.

'ಕರಿಯ-2'ಗಾಗಿ ಗಾಯಕಿ ಆದ ನಟಿ ಮಯೂರಿ! ಟ್ರೈಲರ್ ಅತಿ ಶೀಘ್ರದಲ್ಲಿ

ದರ್ಶನ್ ಈ ಹಿಂದೆ 'ಕರಿಯ' ಸಿನಿಮಾದಲ್ಲಿ ನಟಿಸಿದ್ದರು. ಪ್ರೇಮ್ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನ ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು. ಈಗ 'ಕರಿಯ-2' ಚಿತ್ರವನ್ನ ಕೂಡ ಆನೇಕಲ್ ಬಾಲರಾಜ್ ಅವರೇ ನಿರ್ಮಾಣ ಮಾಡಿದ್ದು, ದರ್ಶನ್ ಅವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ.

Darshan Will Be Releasing 'Kariya 2' Movie Audio.

'ಕರಿಯ-2' ಸಿನಿಮಾವನ್ನು ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡಿದ್ದು, ಸಂತೋಷ್ ನಾಯಕನಾಗಿ ಅಭಿನಯಿಸಿದ್ದಾರೆ. ನಟಿ ಮಯೂರಿ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
English summary
Darshan Will Be Releasing 'Kariya 2' Movie Audio.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada