ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್; ದೇಶದ ಕಠಿಣ ಜೈಲಿನ ಇತಿಹಾಸವೇನು ಗೊತ್ತೇ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ವಾಸ ಯಾಕೋ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಒಂದಾದರ ಮೇಲೊಂದರಂತೆ ಕಷ್ಟಗಳನ್ನು ಅವರೇ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಸುಮಾರು ಎರಡು ತಿಂಗಳ ಬಳಿಕ ಜೈಲಿನೊಳಗಿನ ರೌಡಿಗಳ ಜೊತೆ ದರ್ಶನ್ ಇರುವ ಫೋಟೋ ವೈರಲ್ ಆಗಿತ್ತು.
ಇಲ್ಲಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ದರ್ಶನ್‌ಗೆ ಜೈಲಿನ ಒಳಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ಮುಜುಗರಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಸಂಗಡಿಗರನ್ನು ಬೇರೆ ಜೈಲ್‌ಗೆ ಶಿಫ್ಟ್ ಮಾಡುವ ನಿರ್ಧಾರಕ್ಕೆ ಬಂದಿತ್ತು. ಸುಮಾರು ಏಳು ಮಂದಿ ಕಾರಾಗೃಹದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿತ್ತು.

ದರ್ಶನ್‌ರನ್ನು ಬೆಳಗಾವಿಯ ಹಿಂಡಲಗ ಜೈಲು ಅಥವಾ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಆಲೋಚನೆ ನಡೆದಿತ್ತು. ಆದ್ರೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವುದಕ್ಕೆ ಮುಂದಾಗಿದ್ದರು. ಈ ಸಂಬಂಧ ಸಿಎಂ ಸಿದ್ಧರಾಮಯ್ಯ ಕೂಡ ಸೂಚನೆ ನೀಡಿದ್ದರು. ಈ ಕಾರಣಕ್ಕೆ ಪೊಲೀಸರು ಕೋರ್ಟ್ ಅರ್ಜಿಯನ್ನು ಸಲ್ಲಿಸಿದ್ದರು. ಈಗ ನ್ಯಾಯಾಲಯ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅಲ್ಲದೆ, ಉಳಿದ ಆರೋಪಿಗಳನ್ನು ಬಳ್ಳಾರಿ, ಧಾರವಾಡ, ಮೈಸೂರು, ಶಿವಮೊಗ್ಗ ಜೈಲ್‌ಗೆ ಶಿಫ್ಟ್ ಮಾಡಲಿದ್ದಾರೆ. ಹಾಗಿದ್ದರೆ, ದರ್ಶನ್ ಶಿಫ್ಟ್ ಆಗುತ್ತಿರುವ ಬಳ್ಳಾರಿ ಜೈಲಿನ ಇತಿಹಾಸವೇನು?
ಸಿನಿಮಾಗಳಲ್ಲಿ ಬಳ್ಳಾರಿ ಜೈಲನ್ನು ಉದಾಹರಣೆಯಾಗಿಟ್ಟುಕೊಂಡು ಅದೆಷ್ಟು ಡೈಲಾಗ್‌ಗಳು ಬಂದಿವೆಯೋ ಲೆಕ್ಕ ಹಾಕುವುದು ಕಷ್ಟ. ಬಳ್ಳಾರಿ ಜೈಲು ಅಂದರ ಅಷ್ಟು ಕಠಿಣ ಅನ್ನೋ ಭಾವನೆಯಿದೆ. ಬಳ್ಳಾರಿ ಜೈಲಿನಲ್ಲಿ ಹಿಂದೆ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡುವುದಕ್ಕೆ ಬಳಸುತ್ತಿದ್ದರು ಅನ್ನೋ ಮಾತಿದೆ. ಅಂದ್ಹಾಗೆ ಸ್ವಾತಂತ್ರ್ಯಪೂರ್ವ ಬ್ರಿಟಿಷರು ನಿರ್ಮಿಸಿದ ಭದ್ರವಾದ ಈ ಬಳ್ಳಾರಿ ಜೈಲು ಇಂದಿಗೂ ಬಳಕೆಯಲ್ಲಿದೆ.
ಕರ್ನಾಟಕದಲ್ಲಿರುವ ಕೆಲವೇ ಕೆಲವು ದೊಡ್ಡ ಜೈಲುಗಳ ಪೈಕಿ ಬಳ್ಳಾರಿ ಜೈಲು ಕೂಡ ಒಂದು. ಇಲ್ಲಿ ಸಾವಿರಕ್ಕೂ ಅಧಿಕ ಕೈದಿಗಳನ್ನು ಇರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ವಾತಂತ್ರ ಹೋರಾಟದ ಸಮಯದಲ್ಲಿ ಸಾವಿರ ಮಂದಿ ಹೋರಾಟಗಾರರನ್ನು ಬಂಧಿಸುವುದಕ್ಕೆ ಈ ಜೈಲನ್ನು ಬಳಕೆ ಮಾಡುತ್ತಿದ್ದರು ಎಂದು ವರದಿಯಾಗಿದೆ. ಇಂದಿಗೂ ಈ ಜೈಲು ಅಷ್ಟೇ ಭದ್ರವಾಗಿದೆ.

ಬಳ್ಳಾರಿ ಜೈಲಿನಲ್ಲಿ ಗಲ್ಲು ಶಿಕ್ಷೆಗೂ ವ್ಯವಸ್ಥೆಯಿದೆ. ದೇಶದಲ್ಲಿ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಇರುವ ಕೆಲವೇ ಕೆಲವು ಜೈಲುಗಳಲ್ಲಿ ಇದೂ ಕೂಡ ಒಂದು. ಇದೇ ಬಳ್ಳಾರಿ ಜೈಲ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಶಿಫ್ಟ್ ಮಾಡಲಾಗುತ್ತೆ. ಅಂದ್ಹಾಗೆ, ಈ ಜೈಲಿಗೆ ಜನಪ್ರಿಯರ ವ್ಯಕ್ತಿಗಳು ಭೇಟಿ ಕೊಟ್ಟಿದ್ದರು ಎಂದು ವರದಿಯಾಗಿವೆ.
ಈ ಬಳ್ಳಾರಿ ಜೈಲಿಗೆ ಸ್ವಾತಂತ್ರ್ಯ ಹೋರಾಟಗಾರರು ಭೇಟಿ ಕೊಟ್ಟಿದ್ದರು ಎನ್ನಲಾಗಿದೆ. ಮಹಾತ್ಮ ಗಾಂಧೀಜಿ ಎರಡು ಬಾರಿ ಈ ಜೈಲಿಗೆ ವಿಸಿಟ್ ಹಾಕಿದ್ದರಂತೆ. ಬಾಲ ಗಂಗಾಧರ ತಿಲಕ್, ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಭೇಟಿ ನೀಡಿದ್ದರು. ತುರ್ತು ಪರಿಸ್ಥಿತಿಯ ವೇಳೆ ದಿವಂಗತ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರನ್ನು ಬಳ್ಳಾರಿ ಜೈಲಿನಲ್ಲಿ ಇರಿಸಲಾಗುತ್ತು ಅಂತ ಹೇಳುವವರೂ ಇದ್ದಾರೆ. ಇದಕ್ಕೆ ಪುರಾವೆಗಳು ಇಲ್ಲ.
ಇದೇ ಬಳ್ಳಾರಿ ಜೈಲ್‌ಗೆ ದರ್ಶನ್‌ರನ್ನು ಶಿಫ್ಟ್ ಮಾಡಲಾಗುತ್ತಿದೆ. ಅಲ್ಲಿ ಇನ್ನೆಷ್ಟು ದಿನ ದರ್ಶನ್ ಇರಬೇಕಾಗಿ ಬರಬಹುದೋ ಗೊತ್ತಿಲ್ಲ. ಆದರೆ, ತನ್ನ ಸಂಗಡಿಗರಿಂದ ದರ್ಶನ್ ದೂರ ಆಗಬೇಕಾಗಿದೆ.


Click it and Unblock the Notifications











