'ಕರಿಯ 2' ಸಿನಿಮಾ ವೀಕ್ಷಿಸಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್
'ಕರಿಯ 2' ಸಿನಿಮಾ ನಿನ್ನೆ (ಅಕ್ಟೋಬರ್ 13) ರಿಲೀಸ್ ಆಗಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಇದೀಗ ಈ ಚಿತ್ರವನ್ನು ನಟ ದರ್ಶನ್ ವೀಕ್ಷಿಸಲಿದ್ದಾರೆ. ಸಿನಿಮಾ ನೋಡುವ ಬಯಕೆಯನ್ನು ದರ್ಶನ್ ವ್ಯಕ್ತಪಡಿಸಿದ್ದು, ಕರಿಯ 2 ತಂಡ ಸದ್ಯದಲ್ಲಿಯೇ ಚಿತ್ರವನ್ನು ಅವರಿಗೆ ತೋರಿಸಿಲಿದೆ.
ಈ ಹಿಂದೆ ನಟ ದರ್ಶನ್ 'ಕರಿಯ' ಸಿನಿಮಾ ಮಾಡಿದ್ದರು. ಸೂಪರ್ ಹಿಟ್ ಆಗಿದ್ದ ಈ ಚಿತ್ರದ ಟೈಟಲ್ ಅನ್ನೇ ಇಟ್ಟು ಈಗ ಈ ಸಿನಿಮಾ ಬಂದಿದೆ. ಜೊತೆಗೆ ದರ್ಶನ್ ಅವರೇ 'ಕರಿಯ 2' ಸಿನಿಮಾದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಿದ್ದರು.

ಅಂದಹಾಗೆ, ಸಂತೋಷ್ ಬಾಲರಾಜ್ ಹಾಗೂ ಮಯೂರಿ 'ಕರಿಯ 2' ಚಿತ್ರದಲ್ಲಿ ನಟಿಸಿದ್ದರು. ಲವ್, ಆಕ್ಷನ್, ಸೆಂಟಿಮೆಂಟ್, ಕಾಮಿಡಿ, ರೌಡಿಸಂ ಹೀಗೆ ಎಲ್ಲ ಅಂಶಗಳು ಇರುವ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿತ್ತು. ತೀರ ಅದ್ಭುತ ಅಲ್ಲದ.. ಇತ್ತ ಕಳಪೆಯೂ ಅಲ್ಲದ.. ಒಂದು ಉತ್ತಮ ಸಿನಿಮಾ 'ಕರಿಯ 2' ಅಂತ ಹೇಳಬಹುದು.
English summary
Actor Darshan Will Be watching 'Kariya 2' Movie.


Click it and Unblock the Notifications