For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಬರ್ತಿರೋ ಶಶಿ ಕುಮಾರ್ ಮಗನಿಗೆ ಸಿಕ್ಕಿದೆ ದರ್ಶನ್ ಬೆಂಬಲ

  By Naveen
  |
  ಮತ್ತೊಬ್ಬ ನಟನಿಗೆ ಸಿಕ್ತು ದರ್ಶನ್ ಬೆಂಬಲ..! | Filmibeat Kannada

  ನಟ ದರ್ಶನ್ ವಾರಕ್ಕೆ ಒಂದು ಸಿನಿಮಾಗಾದರೂ ಆಡಿಯೋ, ಟ್ರೇಲರ್ ಬಿಡುಗಡೆ ಮಾಡಿಕೊಡುವ ಮೂಲಕ ಹೊಸ ತಂಡಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಿನ್ನೆ ತಾನೇ 'ಇರುವುದೆಲ್ಲವ ಬಿಟ್ಟು' ಚಿತ್ರದ ಟ್ರೇಲರ್ ಲಾಂಚ್ ಮಾಡಿ ಕೊಟ್ಟ ಡಿ ಬಾಸ್ ಇದೀಗ ಅದೇ ರೀತಿ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ.

   ಚಿತ್ರರಂಗಕ್ಕೆ ಕಾಲಿಟ್ಟ ಶಶಿಕುಮಾರ್ ಮಗನಿಗೆ ಈಕೆಯೇ ಜೋಡಿ ಚಿತ್ರರಂಗಕ್ಕೆ ಕಾಲಿಟ್ಟ ಶಶಿಕುಮಾರ್ ಮಗನಿಗೆ ಈಕೆಯೇ ಜೋಡಿ

  ನಟ ಶಶಿಕುಮಾರ್ ಅವರ ಪುತ್ರ ಚಿತ್ರರಂಗಕ್ಕೆ ಬರುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ, ಇವರಿಗೆ ಈಗ ದರ್ಶನ್ ಸಾಥ್ ನೀಡುತ್ತಿದ್ದಾರೆ. ಸಿನಿಮಾರಂಗದಲ್ಲಿ ಅಪ್ಪನ ರೀತಿ ಹೆಸರು ಮಾಡಬೇಕು ಎಂಬ ಆಸೆ ಹೊಂದಿರುವ ಅವರು ಮುಂದಿನ ತಿಂಗಳು ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅವರ ಈ ಕೆಲಸಕ್ಕೆ ದರ್ಶನ್ ಬಲ ನೀಡಲಿದ್ದಾರೆ. ಮುಂದೆ ಓದಿ...

  ಸಿನಮಾಗೆ ಕ್ಲಾಪ್

  ಸಿನಮಾಗೆ ಕ್ಲಾಪ್

  ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಮೊದಲ ಸಿನಿಮಾದ ಮೂಹುರ್ತ ಸಪ್ಟೆಂಬರ್ 2 ರಂದು ನಡೆಯಲಿದೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅಥಿತಿಯಾಗಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲಿದ್ದಾರೆ.

   ಚಿತ್ರದ ಹೆಸರು ಫಿಕ್ಸ್

  ಚಿತ್ರದ ಹೆಸರು ಫಿಕ್ಸ್

  ಇನ್ನು ಶಶಿಕುಮಾರ್ ಮಗನ ಮೊದಲ ಸಿನಿಮಾದ ಹೆಸರು ಫಿಕ್ಸ್ ಆಗಿದ್ದು, ಚಿತ್ರಕ್ಕೆ 'ಮೊಡವೆ' ಎಂಬ ಹೆಸರನ್ನು ಇಡಲಾಗಿದೆ. ಹದಿಹರೆಯದ ಮನಸುಗಳ ಕಥೆ ಚಿತ್ರದಲ್ಲಿ ಇದ್ದು, ಈ ಟೈಟಲ್ ಸೂಕ್ತವಾಗಿರಲಿದೆಯಂತೆ. ಇದರಲ್ಲಿ ಯುವಕ ಯುವತಿಯರ ಮನಸ್ಸಿನ ತೊಳಲಾಟವನ್ನು ಹೇಳಲಿದ್ದಾರಂತೆ.

   ಫಸ್ಟ್ ಲುಕ್ ರಿಲೀಸ್

  ಫಸ್ಟ್ ಲುಕ್ ರಿಲೀಸ್

  ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎತ್ತಿನ ಗಾಡಿಯಲ್ಲಿ ಹಿಡಿದ ನಾಯಕ ನಾಯಕಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಹಿನ್ನಲೆಯಲ್ಲಿ ಸಿನಿಮಾದ ಕಥೆ ನಡೆಯಲಿದೆ. ಫಸ್ಟ್ ಲುಕ್ ಸರಳವಾಗಿದೆ.

   ಆದಿತ್ಯ ಜೊತೆ ಅಪೂರ್ವ

  ಆದಿತ್ಯ ಜೊತೆ ಅಪೂರ್ವ

  ನಟ ಆದಿತ್ಯ ಶಶಿಕುಮಾರ್ ಅವರಿಗೆ ಜೋಡಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. 'ಅಪೂರ್ವ' ಸಿನಿಮಾ ನಂತರ ಮರೆಯಾಗಿದ್ದ ಈ ನಟಿ 'ವಿಕ್ಟರಿ 2' ಸಿನಿಮಾಗೆ ಆಯ್ಕೆ ಆದರು. ಅದರ ಹಿಂದೆಯೇ ಈಗ 'ಮೊಡವೆ' ಸಿನಿಮಾದಲ್ಲಿ ಸಹ ಅವರು ನಟಿಸುತ್ತಿದ್ದಾರೆ.

   ಅಕ್ಟೋಬರ್ ನಲ್ಲಿ ಶೂಟಿಂಗ್

  ಅಕ್ಟೋಬರ್ ನಲ್ಲಿ ಶೂಟಿಂಗ್

  ಸಿನಿಮಾದ ಮುಹೂರ್ತ ಸಪ್ಟೆಂಬರ್ ನಲ್ಲಿ ನಡೆಯಲಿದ್ದು, ಅಕ್ಟೋಬರ್ ನಲ್ಲಿ ಶೂಟಿಂಗ್ ಶುರು ಆಗಲಿದೆ. ಬೀದರ್, ರಾಯಚೂರು, ಬಾದಮಿ, ಹಂಪಿ, ಗುಲ್ಬರ್ಗ ಸೇರಿದಂತೆ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.

   ಸಿದ್ಧಾರ್ಥ್ ಮಾರದೆಪ್ಪ ನಿರ್ದೇಶನ

  ಸಿದ್ಧಾರ್ಥ್ ಮಾರದೆಪ್ಪ ನಿರ್ದೇಶನ

  'ಮೊಡವೆ' ಸಿನಿಮಾವನ್ನು ಸಿದ್ಧಾರ್ಥ್ ಮಾರದೆಪ್ಪ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಚಿತ್ರವಾಗಿದೆ. ಬ್ರೌನ್ ಬುಲ್ ಸ್ಟೂಡಿಯೋಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಸಿನಿಮಾದಲ್ಲಿ ಇರಲಿದೆ.

  English summary
  Darshan will clap for Kannada actor Shashi Kumar son Adithya Shashi kumar's 'Modave' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X