»   » 'ಜಗ್ಗೇಶ್ ಕನ್ವೆನ್ಷನ್ ಹಾಲ್' ಉದ್ಘಾಟನೆ ಮಾಡಲಿರುವ 'ಚಕ್ರವರ್ತಿ'!

'ಜಗ್ಗೇಶ್ ಕನ್ವೆನ್ಷನ್ ಹಾಲ್' ಉದ್ಘಾಟನೆ ಮಾಡಲಿರುವ 'ಚಕ್ರವರ್ತಿ'!

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅವರು ಮೈಸೂರಿನಲ್ಲಿ ಹೊಸ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ ಎಂಬ ಸುದ್ದಿಯನ್ನ ನಾವೇ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ. ಇದೀಗ, ಈ ಕನ್ವೆನ್ಷನ್ ಹಾಲ್ ಉದ್ಘಾಟನೆ ಮಾಡಲು ಸ್ಯಾಂಡಲ್ ವುಡ್ ಸ್ಟಾರ್ ನಟರೊಬ್ಬರು ಅತಿಥಿಯಾಗಿ ಆಗಮಿಸುತ್ತಿದ್ದಾರಂತೆ.[ಜಗ್ಗೇಶ್ ಬಹುದಿನಗಳ ಕನಸು ಈಡೇರಿತು..!]

ಹೌದು, 'ಜಗ್ಗೇಶ್ ಕನ್ವೆನ್ಷನ್ ಹಾಲ್' ಉದ್ಘಾಟನೆಯನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಲಿದ್ದಾರೆ ಎಂದು ಸ್ವತಃ ನಟ ಜಗ್ಗೇಶ್ ಅವರೇ ಖಚಿತ ಪಡಿಸಿದ್ದು, ಈ ಬಗ್ಗೆ ಸಂತಸವನ್ನ ಕೂಡ ವ್ಯಕ್ತಪಡಿಸಿದ್ದಾರೆ.

Darshan will inaugurate to Jaggesh's Conventional Hall

ಟ್ವಿಟ್ಟರ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಜಗ್ಗೇಶ್, ''ದರ್ಶನ್. ಪ್ರೀತಿಯಿಂದ ನನ್ನ ಚೌಲ್ಟ್ರಿ ಉದ್ಟಾಟನೆಗೆ ಬರುತ್ತಿದ್ದಾನೆ. ಅವನ ಪ್ರೀತಿಗೆ ಧನ್ಯವಾದ. ಎಷ್ಟೇ ಬೆಳೆದರು ಆಂತರ್ಯದಲ್ಲಿ ಅವನು ಮಗುವಿನಂತೆ. ಅದೆ ಅವನ ಯಶಸ್ಸಿಗೆ ಕಾರಣ.'' ಎಂದು ಬರೆದುಕೊಂಡಿದ್ದಾರೆ.

Darshan will inaugurate to Jaggesh's Conventional Hall

ಅಂದ್ಹಾಗೆ, 'ಜಗ್ಗೇಶ್ ಕನ್ವೆನ್ಷನ್ ಹಾಲ್' ಅನ್ನ ಇದೇ ಜನವರಿ 29 ರಂದು ಉದ್ಘಾಟನೆಯಾಗಲಿದೆ. ಈ ಕನ್ವೆನ್ಷನಲ್ ಹಾಲ್ 500 ಜನ ಕೂರಲು ಬ್ಯಾಂಕ್ವೆಟ್ ಆಸನಗಳನ್ನು, 500 ಜನರು ಒಮ್ಮೆ ಊಟಕ್ಕೆ ಕೂರಬಹುದಾದ ಹಾಲ್ ಅನ್ನು ಹೊಂದಿದೆ. 2500 ಜನರಿಗೆ ಅಡುಗೆ ಮಾಡಲು ಸಾಮಗ್ರಿಗಳು, ವಿಶಾಲ ಅಡುಗೆ ಕೊಠಡಿ, 14 ಸುಸಜ್ಜಿತ ರೂಮ್‌ ಗಳು, ವಾಹನ ನಿಲುಗಡೆಗೆ 20,000 ಅಡಿ ಪಾರ್ಕಿಂಗ್ ವ್ಯವಸ್ಥೆ ಕೂಡ ಹೊಂದಿದೆ.

English summary
Challenging star darshan will inaugurate to the jaggesh Convention hall on January 29th. Kannada actor Jaggesh's Builded a Conventional Hall at Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada