ರಾಜಮೌಳಿ 'ಮಹಾಭಾರತ'ದಲ್ಲಿ ದರ್ಶನ್ 'ದುರ್ಯೋಧನ'.?
ಬಾಹುಬಲಿ, ಕೆಜಿಎಫ್ ನಂತರ ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಚಿತ್ರ ಕುರುಕ್ಷೇತ್ರ. ಪೌರಾಣಿಕ ಮತ್ತು 3ಡಿ ಯಲ್ಲಿ ತಯಾರಾಗುತ್ತಿದೆ ಎಂಬ ಕಾರಣಕ್ಕೆ ಇಡೀ ಚಿತ್ರರಂಗದ ಕಣ್ಣು ಈ ಚಿತ್ರದ ಮೇಲಿತ್ತು.
ದರ್ಶನ್ ದುರ್ಯೋಧನನ ಲುಕ್ ನೋಡಿದ ಸಿನಿಪ್ರೇಮಿಗಳು ತೆರೆಮೇಲೆ ಅದ್ಯಾವಾಗ ಡಿ ಬಾಸ್ ನೋಡ್ತಿನೋ ಎಂದು ಕಾಯುತ್ತಿದ್ದರು. ನಿರೀಕ್ಷೆಯಂತೆ ಶುಕ್ರವಾರ ಸಿನಿಮಾ ರಿಲೀಸ್ ಆಗಿದೆ. ಡಿ ಬಾಸ್ ಭಕ್ತಗಣ ದುರ್ಯೋಧನನ ಎಂಟ್ರಿ ನೋಡಿ ಫುಲ್ ಖುಷ್ ಆಗಿದ್ದಾರೆ.
ದರ್ಶನ್ ದುರ್ಯೋಧನನ ಪಾತ್ರ ಮಾಡಿದ್ದಾರೋ ಅಥವಾ ದುರ್ಯೋಧನ ದರ್ಶನ್ ಅವರಂತೆ ಇದ್ದನೋ ಎನ್ನುವಷ್ಟು ಮೆಚ್ಚಿಕೊಂಡಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಈಗೊಂದು ಚರ್ಚೆ ಅಭಿಮಾನಿ ವಲಯದಲ್ಲಿ ಸದ್ದು ಮಾಡ್ತಿದೆ. ರಾಜಮೌಳಿ ಮಹಾಭಾರತದಲ್ಲಿ ದರ್ಶನ್ 'ದುರ್ಯೋಧನ' ಫಿಕ್ಸ್ ಎನ್ನುತ್ತಿದ್ದಾರೆ. ಇದು ನಿಜನಾ? ಮುಂದೆ ಓದಿ....

ಮಹಾಭಾರತಕ್ಕೆ ಜೀವ ಕೊಡ್ತಾರಾ ರಾಜಮೌಳಿ?
'ಸದ್ಯಕ್ಕೆ ಮಹಾಭಾರತ ಸಿನಿಮಾ ಮಾಡುವ ಯೋಚನೆ ಇಲ್ಲ' ಎಂದಿದ್ದ ರಾಜಮೌಳಿ, ಕುರುಕ್ಷೇತ್ರ ನೋಡಿದ್ಮೇಲೆ ಆ ಪ್ರಾಜೆಕ್ಟ್ ಜೀವ ಕೊಡಬಹುದು. ಪೌರಾಣಿಕ ಚಿತ್ರಕ್ಕಾಗಿ ಜನರು ಇಷ್ಟು ಕಾತುರರಾಗಿದ್ದಾರಾ ಎಂದು ಆಸಕ್ತಿ ತೋರಬಹುದು. ಒಂದು ವೇಳೆ ರಾಜಮೌಳಿ ಮಹಾಭಾರತಕ್ಕೆ ಕೈ ಹಾಕಿದ್ರೆ ಅದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ಪುಟವಾಗಬಹುದು.

ಯಾರಿಗೆ ಅವಕಾಶ ಸಿಗುತ್ತೋ ಇಲ್ವೋ
ರಾಜಮೌಳಿ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಬಹುತೇಕ ಎಲ್ಲ ಇಂಡಸ್ಟ್ರಿ ಕಲಾವಿದರಲ್ಲಿ ಒಂದು ಸಣ್ಣ ಆಸೆ ಇರುತ್ತೆ. ಅಂತಹದ್ರಲ್ಲಿ ರಾಜಮೌಳಿ ಮಹಾಭಾರತ ಮಾಡ್ತಿದ್ದಾರೆ ಅಂದ್ರೆ ಅದರಲ್ಲಿ ನಮಗೂ ಒಂದು ಪಾತ್ರ ಸಿಗಲಿ ಅಂತ ಕಾಯ್ತಿರ್ತಾರೆ. ಪಾಂಡವರು, ಕೌರವರು, ಭೀಷ್ಮ, ದ್ರೋಣಾಚಾರ್ಯ, ಅಭಿಮನ್ಯು, ಹೀಗೆ ಪ್ರತಿಯೊಂದು ಪಾತ್ರಕ್ಕೂ ಯಾರು ಸೂಕ್ತ ಎಂಬ ಹುಡುಕಾಟ ಆರಂಭವಾಗುತ್ತೆ.

ದರ್ಶನ್ ಗೆ ದುರ್ಯೋಧನ ಫಿಕ್ಸ್.!
ರಾಜಮೌಳಿ ಮಹಾಭಾರತ ಮಾಡಿದ್ರೆ ದರ್ಶನ್ ದುರ್ಯೋಧನ ಪಾತ್ರಕ್ಕೆ ಫಿಕ್ಸ್ ಎಂಬುದು ಅಭಿಮಾನಿಗಳ ಈಗಿನ ಅಭಿಪ್ರಾಯ. ದುರ್ಯೋಧನ ಪಾತ್ರಕ್ಕಾಗಿ ರಾಜಮೌಳಿ ಹುಡುಕೋದೇ ಬೇಡ. ಅದಕ್ಕಾಗಿ ಡಿ-ಬಾಸ್ ಅವರನ್ನ ಈಗಲೇ ಫಿಕ್ಸ್ ಮಾಡಿಕೊಳ್ಳಲಿ ಎಂದು ಡಿ ಫ್ಯಾನ್ಸ್ ಹೇಳುತ್ತಿದ್ದಾರೆ. ಬಹುಶಃ ಕುರುಕ್ಷೇತ್ರ ನೋಡಿದ್ಮೇಲೆ ರಾಜಮೌಳಿ ಮನಸ್ಸಿನಲ್ಲಿ ದರ್ಶನ್ ಗಾಗಿ ಒಂದು ಪಾತ್ರ ಈಗಲೇ ರಿಸರ್ವ್ ಮಾಡಿಕೊಂಡರು ಅಚ್ಚರಿ ಇಲ್ಲ ಎಂಬ ಮಾತುಗಳು ಸದ್ದು ಮಾಡ್ತಿದೆ.

ಕನ್ನಡದ ಮೇಲೆ ರಾಜಮೌಳಿಗೂ ಗೌರವವಿದೆ
ಮೂಲತಃ ಕರ್ನಾಟಕದವರಾಗಿರುವ ರಾಜಮೌಳಿಯ ಚಿತ್ರಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಇರುತ್ತೆ. ಎಲ್ಲ ಭಾಷೆಯ ಕಲಾವಿದರಿಗೂ ಮಣೆ ಹಾಕುವ ಮೌಳಿ, ಒಂದು ವೇಳೆ ಮಹಾಭಾರತ ಕೈಗೆತ್ತಿಕೊಂಡರೇ ದರ್ಶನ್ ಅವರನ್ನ ಮಿಸ್ ಮಾಡಿಕೊಳ್ಳುವುದಿಲ್ಲ ಅನ್ಸುತ್ತೆ. ತೆಲುಗಿನಲ್ಲೂ ಕುರುಕ್ಷೇತ್ರ ಬಿಡುಗಡೆಯಾಗಿದ್ದು, ಅಲ್ಲಿಯೂ ಜನರ ಮೆಚ್ಚಿಕೊಂಡಿದ್ದಾರೆ. ದುರ್ಯೋಧನನಾಗಿ ಘರ್ಜಿಸಿರುವ ದರ್ಶನ್ ಗೆ ಆಫರ್ ಮಾಡಿದ್ರು ಅಚ್ಚರಿ ಇಲ್ಲ.

ಅಮೀರ್ ಖಾನ್ ಮಹಾಭಾರತಕ್ಕೂ ಜೀವ.!
ಬಾಲಿವುಡ್ ನಲ್ಲೂ ಅಮೀರ್ ಖಾನ್ ಮಹಾಭಾರತ ಸಿನಿಮಾ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ಆಮೇಲೆ ಮಾಡಲ್ಲ ಎಂದು ಕೈಬಿಟ್ಟಿದ್ದರು. ಕುರುಕ್ಷೇತ್ರ ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ. ಬಹುಶಃ ಈ ಸಿನಿಮಾ ನೋಡಿದ್ರೆ, ಅಮೀರ್ ಖಾನ್ ಕೂಡ ತಮ್ಮ ಮಹಾಭಾರತಕ್ಕೆ ಮತ್ತೆ ಜೀವ ಕೊಡಬಹುದು. ಅದರಲ್ಲಿ ಡಿ ಬಾಸ್ ಗೂ ಒಂದು ಪಾತ್ರ ಫಿಕ್ಸ್ ಮಾಡಬಹುದು. ಇದೆಲ್ಲ ಆಗುತ್ತೋ ಇಲ್ವೋ ಗೊತ್ತಿಲ್ಲ. ಬಟ್, ಕುರುಕ್ಷೇತ್ರ ಸಿನಿಮಾ ಹಾಗೂ ದರ್ಶನ್ ನಟನೆ ನೋಡಿ ಹೀಗೆಲ್ಲಾ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿರುವುದಂತು ಸತ್ಯ.


Click it and Unblock the Notifications











