'ಸಿಂಧೂರ ಲಕ್ಷ್ಮಣ'ನಾಗಿ ಅಬ್ಬರಿಸಲಿದ್ದಾರೆ ದರ್ಶನ್: ಮತ್ತೆ ಒಂದಾಗುತ್ತಿದೆ 'ರಾಬರ್ಟ್' ಟೀಂ

By ಫಿಲ್ಮ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

Recommended Video

Ambareesh memorial:ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಅಸ್ತು |Kanteerava Studio |Filmibeat Kannada

ರಾಬರ್ಟ್ ಮುಗಿಯುತ್ತಿದ್ದಂತೆ ದರ್ಶನ್ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಆದರೆ ಆಗಲೆ ಕೊರೊನಾ ವಕ್ಕರಿಸಿಕೊಂಡ ಪರಿಣಾಮ ಚಿತ್ರೀಕರಣ ಸಹ ಸ್ಥಗಿತಗೊಂಡಿದೆ. ಆದರೆ ಆಗಲೆ ದರ್ಶನ್ ಕಡೆಯಿಂದ ಮತ್ತೊಂದು ಸುದ್ದಿ ಜೋರಾಗಿ ಕೇಳಿಬರುತ್ತಿದೆ. ದರ್ಶನ್ ಮತ್ತೊಂದು ಐತಿಹಾಸಿಕ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದು ದರ್ಶನ್ ಅವರ ಕನಸಿನ ಸಿನಿಮಾ ಸಿನಿಮಾದ ಎಂದು ಹೇಳಲಾಗುತ್ತಿದೆ. ಅದೆ ಸಿಂಧೂರ ಲಕ್ಷ್ಣಣ ಸಿನಿಮಾ. ಮುಂದೆ ಓದಿ...

ಸಿಂಧೂರ ಲಕ್ಷ್ಮಣನಾಗಿ ಅಬ್ಬರಿಸಲಿದ್ದಾರೆ ದರ್ಶನ್

ಸಿಂಧೂರ ಲಕ್ಷ್ಮಣನಾಗಿ ಅಬ್ಬರಿಸಲಿದ್ದಾರೆ ದರ್ಶನ್

ದರ್ಶನ್, ಸ್ವತಂತ್ರ ಹೋರಾಟಗಾರ ಸಿಂಧೂರ ಲಕ್ಷ್ಮಣನಾಗಿ ತೆರೆಮೇಲೆ ಬರಲಿದ್ದಾರೆ. ಸಿಂಧೂರ ಲಕ್ಷ್ಮಣನ ಪಾತ್ರ ಮಾಡಬೇಕು ಎನ್ನುವುದು ದರ್ಶನ್ ಅವರ ದೊಡ್ಡ ಕನಸಂತೆ. ಅವರ ಆಸೆಯನ್ನು ನಿರ್ದೇಶಕ ತರುಣ್ ಸುಧೀರ್ ಬಳಿ ಹೇಳಿಕೊಂಡಿದ್ದಾರೆ. ದರ್ಶನ್ ಕನಸಿನ ಸಿನಿಮಾಗೆ ತರುಣ್ ಕೂಡ ಜೈ ಎಂದಿದ್ದಾರೆ.

ಮತ್ತೆ ಒಂದಾದ ರಾಬರ್ಟ್ ಟೀಂ

ಮತ್ತೆ ಒಂದಾದ ರಾಬರ್ಟ್ ಟೀಂ

ರಾಬರ್ಟ್ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸಿಂಧೂರ ಲಕ್ಷ್ಮಣ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಸಿನಿಮಾ ಮಾಡುವ ದರ್ಶನ್ ಆಸೆಗೆ ನಿರ್ಮಾಪಕ ಉಮಾಪತಿ ಸಹ ಸಾಥ್ ನೀಡಿದ್ದು, ಬಂಡವಾಳ ಹೂಡಲು ಸಜ್ಜಾಗಿದ್ದಾರೆ. ಈಗಾಗಲೆ ಸಿಂಧೂರ ಲಕ್ಷ್ಮಣ ಟೈಟಲ್ ಉಮಾಪತಿ ಅವರ ಬ್ಯಾನರ್ ನಡಿ ರಿಜಿಸ್ಟರ್ ಮಾಡಿಸಿದ್ದಾರೆ. ಅಲ್ಲದೆ ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಯಾರು ಸಿಂಧೂರ ಲಕ್ಷ್ಮಣ?

ಯಾರು ಸಿಂಧೂರ ಲಕ್ಷ್ಮಣ?

ಶೌರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದ್ದ ವೀರ ಸೇನಾನಿ ಸಿಂಧೂರ ಲಕ್ಷ್ಮಣನ ಬಗ್ಗೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದವರಿಗೆ ಚನ್ನಾಗಿ ಗೊತ್ತಿರುತ್ತೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗ ಸಿಂದೂರಿನಲ್ಲಿ ಜನಿಸಿದ ಸ್ವಾತಂತ್ರ ಹೋರಾಟಗಾರ ಲಕ್ಷ್ಮಣನ. ತನ್ನದೇ ಆದ ಒಂದು ತಂಡ ಕಟ್ಟಿಕೊಂಡು ಬ್ರಿಟಿಷ್ ಕಚೇರಿಗಳನ್ನು ಲೂಟಿ ಮಾಡಿ ಅದನ್ನು ಬಡವರಿಗೆ ಹಂಚುತ್ತಿದ್ದ. 1920ರಲ್ಲಿ ಅಸಹಕಾರ ಚಳುವಳಿ ಪ್ರಾರಂಭವಾದಾಗ ಲಕ್ಷ್ಮಣ ತನ್ನದೆ ಆದ ರೀತಿಯಲ್ಲಿ ಸ್ವತಂತ್ರ ಹೋರಾಟದಲ್ಲಿ ತೊಡಗಿಕೊಂಡಿದ್ದನಂತೆ. ಆದರೆ ಬ್ರಿಟಿಷರು ಹೊಂಚು ಹಾಕಿ ರಾತ್ರಿ ಊಟ ಮಾಡುವಾಗ ಮೋಸದಿಂದ ಲಕ್ಷ್ಮಣನನ್ನು ಕೊಂದರು. ಕೇವಲ 24 ನೆ ವಯಸ್ಸಿನಲ್ಲಿ ಮಡಿದ ಈ ಸ್ವಾತಂತ್ರ ಹೋರಾಟಗಾರನ ಕುರಿತು ಹಲವಾರು ನಾಟಕ ಮತ್ತು ಜಾನಪದ ಸಾಹಿತ್ಯಗಳು ಮೂಡಿ ಬಂದಿವೆ.

ಈಗಾಗಲೆ ಕನ್ನಡದಲ್ಲಿ ಬಂದಿದೆ ಸಿಂಧೂರ ಲಕ್ಷ್ಮಣ ಸಿನಿಮಾ

ಈಗಾಗಲೆ ಕನ್ನಡದಲ್ಲಿ ಬಂದಿದೆ ಸಿಂಧೂರ ಲಕ್ಷ್ಮಣ ಸಿನಿಮಾ

ವೀರ ಸಿಂಧೂರ ಲಕ್ಷ್ಮಣ ಎನ್ನುವ ಹೆಸರಿನಲ್ಲಿ ಈಗಾಗಲೆ ಕನ್ನಡದಲ್ಲಿ ಬಂದಿದೆ. 1977ರಲ್ಲಿ ಸಿನಿಮಾ ರಿಲೀಸ್ ಆಗಿದೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಸಿನಿಮಾದಲ್ಲಿ ವಜ್ರಮುನಿ, ಕೆ.ಎಸ್ ಅಶ್ವಥ್, ಮಂಜುಳ ಸೇರಿದ್ದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ವಿಶೇಷ ಅಂದರೆ ನಿರ್ದೇಶಕ ತರುಣ್ ಸುಧೀರ್ ತಂದೆ ಸುಧೀರ್ ಕೂಡ ಅಭಿನಯಿಸಿದ್ದಾರೆ.

ಯಾವಾಗ ಸೆಟ್ಟೇರಲಿದೆ ಸಿನಿಮಾ?

ಯಾವಾಗ ಸೆಟ್ಟೇರಲಿದೆ ಸಿನಿಮಾ?

ಸಂಗೋಳ್ಳಿ ರಾಯಣ್ಣ, ಮದಕರಿ ನಾಯಕ ಎರಡು ಸ್ವತಂತ್ರ ಹೋರಾಟಗಾರರ ಸಿನಿಮಾ ಮತ್ತು ಪೌರಾಣಿಕ ಕುರುಕ್ಷೇತ್ರ ಸಿನಿಮಾಗಳಲ್ಲಿ ಅಭಿನಯಿಸುವ ದರ್ಶನ್ ಮತ್ತೊಂದು ಪ್ರಯೋಗಿಕ ಸಿನಿಮಾ ಮಾಡಲು ಮುಂದಾಗಿರುವುದು ಅಭಿಮಾನಿಗಳ ಸಂತಸ ತಂದಿದೆ. ಸದ್ಯ ರಾಬರ್ಟ್ ರಿಲೀಸ್ ಮತ್ತು ರಾಜವೀರ ಮದಕರಿ ನಾಯಕ ಸಿನಿಮಾ ಸಾಲಿನಲ್ಲಿ ಇರುವುದರಿಂದ ಸಿಂಧೂರ ಲಕ್ಷ್ಮಣ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

More from Filmibeat

English summary
Actor Darshan will play Sindoora lakshmana role in his next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X