ಮತ್ತೊಬ್ಬ ಯುವ ನಿರ್ದೇಶಕನಿಗೆ ಸಾಥ್ ನೀಡಿದ ದರ್ಶನ್
ನಟ ದರ್ಶನ್ ತಾವು ಬೆಳೆಯುವುದರ ಜೊತೆಗ ಇತರರನ್ನು ಬೆಳೆಸುವ ಗುಣ ಇರುವ ವ್ಯಕ್ತಿ. ಅದು ಈಗಾಗಲೇ ಅನೇಕ ಬಾರಿ ಸಾಬೀತು ಆಗಿದೆ. ಇದೀಗ ದರ್ಶನ್ ಕನ್ನಡದ ಯುವ ನಿರ್ದೇಶಕನ ಸಿನಿಮಾಗೆ ಸಾಥ್ ನೀಡಿದ್ದಾರೆ.
ದರ್ಶನ್ ಈಗೀಗಾ ಹೊಸ ಸಿನಿಮಾಗಳಿಗೆ ತಮ್ಮ ಕೈನಲ್ಲಿ ಅದಷ್ಟು ಸಹಾಯ ಮಾಡುತ್ತಿದ್ದಾರೆ. ಸಿನಿಮಾದ ಟ್ರೇಲರ್, ಹಾಡುಗಳು, ಟೀಸರ್ ಬಿಡುಗಡೆ ಮಾಡಿ ಕೊಟ್ಟು ಚಿತ್ರವನ್ನು ಇನ್ನಷ್ಟು ಜನರಿಗೆ ತಲುಪುವ ರೀತಿ ಮಾಡುತ್ತಿದ್ದಾರೆ. ಈಗ ಅದೇ ರೀತಿ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ತಂಡಕ್ಕೆ ದಾಸ ಬಲ ನೀಡಿದ್ದಾರೆ.
'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಟ್ರೇಲರ್ ನಾಳೆ (ಆಗಸ್ಟ್ 27) ರಿಲೀಸ್ ಆಗಲಿದೆ. ಈ ಟ್ರೇಲರ್ ಅನ್ನು ಸ್ವತಃ ದರ್ಶನ್ ಅವರು ಲಾಂಚ್ ಮಾಡಲಿದ್ದಾರೆ. ಈ ಮೂಲಕ ಮತ್ತೊಂದು ಸಿನಿಮಾ ತಂಡಕ್ಕೆ ದರ್ಶನ್ ತಮ್ಮ ಪ್ರೋತ್ಸಾಹ ನೀಡುತ್ತಿದ್ದಾರೆ.

ಅಂದಹಾಗೆ, 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಚಿತ್ರ ನಿರ್ದೇಶಕ ಕಾಂತ ಕನ್ನಲಿ ಅವರ ಕನಸಿನ ಸಿನಿಮಾ. ಈ ಸಿನಿಮಾಗಾಗಿ ಬಹಳ ಶ್ರಮ ಪಟ್ಟಿರುವ ಅವರು ಈ ಸಿನಿಮಾದ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ.

ನಟಿ ಮೇಘನಾ ರಾಜ್ ಈ ಹಿಂದೆ ಕಾಣಿಸಿಕೊಂಡಿರದ ಪಾತ್ರದಲ್ಲಿ ನಟಿಸಿದ್ದಾರೆ. ತಿಲಕ್ ಹಾಗೂ ಶ್ರೀ ಮಹದೇವ್ ಚಿತ್ರದ ನಾಯಕನಾಗಿದ್ದಾರೆ.


Click it and Unblock the Notifications











