twitter
    For Quick Alerts
    ALLOW NOTIFICATIONS  
    For Daily Alerts

    ವಿನೋದ್ ಪ್ರಭಾಕರ್ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ದರ್ಶನ್

    |

    Recommended Video

    ಮಾರ್ಚ್ 16ಕ್ಕೆ ದರ್ಶನ್, ವಿನೋದ್‍ರಿಂದ ಸರ್ಪ್ರೈಸ್

    ಮರಿಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಎಲ್ಲ ಚಿತ್ರಗಳಿಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಯಹಸ್ತ ಇದ್ದೇ ಇರುತ್ತೆ. ವಿನೋದ್ ಹೊಸ ಚಿತ್ರಗಳಿಗೆ ಕ್ಲಾಪ್ ಮಾಡುವ ಮೂಲಕ ಶುಭಾರಂಭ ಮಾಡುವ ಡಿ ಬಾಸ್, ನಂತರ ಆ ಚಿತ್ರದುದ್ದಕ್ಕೂ ಜೊತೆಯಾಗಿ ನಿಲ್ತಾರೆ.

    ಹೌದು, ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ನಟ ದರ್ಶನ್. ವಿಶೇಷ ಅಂದ್ರೆ ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕೂಡ ಡಿ ಬಾಸ್. ಇದೀಗ, ಸಿನಿಮಾ ಶೂಟಿಂಗ್ ಮುಗಿದಿದ್ದು, ಟ್ರೈಲರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದಾರೆ.

    'ಮರಿ ಟೈಗರ್' ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡೋದರ ಗುಟ್ಟು ರಟ್ಟು 'ಮರಿ ಟೈಗರ್' ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡೋದರ ಗುಟ್ಟು ರಟ್ಟು

    ಇದೇ ಶನಿವಾರ ರಗಡ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಡಿ ಬಾಸ್ ಮುಖ್ಯ ಅತಿಥಿಯಾಗಲಿದ್ದಾರೆ. ಅದಕ್ಕೂ ಒಂದು ದಿನ ಮುಂಚೆ ಅಂದ್ರೆ ಶುಕ್ರವಾರ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರದ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ದರ್ಶನ್.

    Darshan will release ragad movie trailer

    ಆಪ್ತಮಿತ್ರರಿಗೆ 'ಆಪತ್ಬಾಂಧವ' ಈ 'ದಾಸ' ದರ್ಶನ್ ಆಪ್ತಮಿತ್ರರಿಗೆ 'ಆಪತ್ಬಾಂಧವ' ಈ 'ದಾಸ' ದರ್ಶನ್

    ಅಂದ್ಹಾಗೆ, ತನ್ನ ಚಿತ್ರಗಳಿಗೆ ಇಷ್ಟೊಂದು ಪ್ರಮೋಷನ್ ಮಾಡ್ತಾರೋ ಇಲ್ವೋ, ತಮ್ಮ ಸ್ನೇಹಿತರ ಆಪ್ತರ ಚಿತ್ರಗಳಿಗಾಗಿ ಎಷ್ಟು ಸಲ ಬೇಕಾದರೂ ಬರ್ತಾರೆ ದರ್ಶನ್ ಅನ್ನೋದಕ್ಕೆ ಇದು ಸಾಕ್ಷಿ.

    Darshan will release ragad movie trailer

    ಸ್ನೇಹಿತರಿಗಾಗಿ ಓಡೋಡಿ ಬಂದ ದಾಸ ದರ್ಶನ್ಸ್ನೇಹಿತರಿಗಾಗಿ ಓಡೋಡಿ ಬಂದ ದಾಸ ದರ್ಶನ್

    ಇನ್ನೂ ವಿಶೇಷ ಅಂದ್ರೆ, ವಿನೋದ್ ಪ್ರಭಾಕರ್ ಅಭಿನಯದ ಮೂರು ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡಿದ್ದರು. ಸಿಎಂ, ರಗಡ್, ಮತ್ತು ಫೈಟರ್ ಚಿತ್ರಕ್ಕೆ ಚಾಲನೆ ನೀಡಿದ್ದರು. ಈ ಚಿತ್ರಗಳ ಪೈಕಿ ಈಗ ರಗಡ್ ರೆಡಿಯಾಗಿದೆ. ಇನ್ನುಳಿದಂತೆ ಮಹೇಶ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅರುಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

    English summary
    Kannada actor, challenging star darshan will release vinod prabhakar's ragad movie trailer on march 16th.
    Friday, March 15, 2019, 10:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X