»   » ವೆನ್ನಿಲ್ಲಾ ರುಚಿ ಸವಿಯಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್

ವೆನ್ನಿಲ್ಲಾ ರುಚಿ ಸವಿಯಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರಿಗೆ ಸಹಾಯ ಮಾಡುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಅದಷ್ಟೇ ಅಲ್ಲದೆ ಚಿತ್ರರಂಗದಲ್ಲಿರುವ ನಿರ್ದೇಶಕರ ಸಿನಿಮಾಗಳಿಗೂ ದರ್ಶನ್ ಸಾಥ್ ನೀಡಿರುವ ಉದಾಹರಣೆಗಳು ಸಾಕಷ್ಟಿದೆ.

ಹೊಸ ಕಲಾವಿದರಿಗೆ ನಾವು ಸಹಾಯ ಮಾಡಿದರೆ ಅವರು ಕೂಡ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆ ಎಂದರೆ ಸಹಾಯ ಮಾಡಲು ನಾವು ಸದಾ ಸಿದ್ದ ಅನ್ನುವ ಮಾತನ್ನು ಬೆಳಸಿಕೊಂಡು ಬಂದಿದ್ದಾರೆ ದರ್ಶನ್.

ಮ್ಯೂಸಿಯಂ ಆಯ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಳೆ ಮನೆ ?

ಸದ್ಯ ಈಗ ದರ್ಶನ್ ವೆನಿಲ್ಲಾ ರುಚಿ ನೋಡಿ ಯಂಗ್ ಟ್ಯಾಲೆಂಟ್ಸ್ ಗಳಿಗೆ ಸಹಾಯ ಮಾಡಲು ಹೊರಟಿದ್ದಾರೆ. ಅರೆ ವೆನಿಲ್ಲಾ ರುಚಿಗೂ ಸಿನಿಮಾಗೂ ಏನಪ್ಪಾ ಸಂಬಂಧ ಅಂತ ಕನ್ಫೂಸ್ ಆಗಬೇಡಿ, ನಾವು ಹೇಳುತ್ತಿರುವುದು ವೆನಿಲ್ಲಾ ಸಿನಿಮಾದ ಬಗ್ಗೆ. ಡಿ ಬಾಸ್ ಈಗ ವೆನ್ನಿಲ್ಲಾ ಚಿತ್ರದ ಬೆನ್ನಿಗೆ ನಿಂತಿದ್ದಾರೆ. ಅದು ಹೇಗೆ ಅಂತೀರಾ? ಮುಂದೆ ಓದಿ

ವೆನ್ನಿಲ್ಲಾ ಚಿತ್ರಕ್ಕೆ ಡಿ ಬಾಸ್ ಸಾಥ್

ಜಯತೀರ್ಥ ನಿರ್ದೇಶನ ಮಾಡಿರುವ ವೆನ್ನಿಲ್ಲ ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಅನ್ನು ನಟ ದರ್ಶನ್ ಬಿಡುಗಡೆ ಮಾಡುತ್ತಿದ್ದಾರೆ. ಹೊಸ ಕಲಾವಿದರನ್ನ ಬಳಸಿಕೊಂಡು ವಿಭಿನ್ನ ರೀತಿಯ ಕಥೆಯನ್ನ ಹೊಂದಿರುವ ಸಿನಿಮಾ ವೆನ್ನಿಲ್ಲಾ.

ಮಲ್ಲಿಗೆ ನಗರಿ ಮೈಸೂರಿನಲ್ಲಿ ವೆನ್ನಿಲ್ಲಾ

ಜನವರಿ 16 ರಂದು ದರ್ಶನ್ ವೆನ್ನಿಲ್ಲಾ ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಲಿದ್ದಾರೆ. ಮಲ್ಲಿಗೆ ನಗರಿ ಮೈಸೂರಿನಲ್ಲಿ ಡಿ ಬಾಸ್ ಮೊಟ್ಟ ಮೊದಲ ಬಾರಿಗೆ ವೆನ್ನಿಲ್ಲಾ ರುಚಿ ನೋಡಲಿದ್ದಾರೆ.

ಬ್ಯೂಟಿಫುಲ್ ಮನಸ್ಸುಗಳು ಚಿತ್ರಕ್ಕೂ ಸಾಥ್

ಈ ಹಿಂದೆ ಜಯತೀರ್ಥ ನಿರ್ದೇಶನದ 'ಬ್ಯೂಟಿಫುಲ್ ಮನಸ್ಸುಗಳು' ಸಿನಿಮಾದ ಆಡಿಯೋ ಬಿಡುಗಡೆಯನ್ನ ದರ್ಶನ್ ಅವರೇ ಬಿಡುಗಡೆ ಮಾಡಿದ್ದರು. ಈಗ ವೆನ್ನಿಲ್ಲಾ ಚಿತ್ರದ ಧ್ವನಿಸುರಳಿ ಹಾಗೂ ಟ್ರೇಲರ್ ದರ್ಶನ್ ಅವರೇ ಬಿಡುಗಡೆ ಮಾಡುತ್ತಿರುವುದು ವಿಶೇಷ.

ಜಯತೀರ್ಥ ಅವರ ವೆನ್ನಿಲ್ಲಾ ಸಿನಿಮಾ

ವೆನ್ನಿಲ್ಲಾ ಸಿನಿಮಾದಲ್ಲಿ ಅವಿನಾಶ್ ಹಾಗೂ ಸ್ವಾತಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಬಿ ಜೆ ಭರತ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

English summary
Kannada actor challenging star Darshan will release the audio and trailer of Vennilla movie. newcommer Avinash and Swathi act in the film.'Vennilla' Jayatirtha directed film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X