For Quick Alerts
  ALLOW NOTIFICATIONS  
  For Daily Alerts

  ಹರಿಕೃಷ್ಣ ಹುಟ್ಟುಹಬ್ಬ: ಡಿ-ಬಾಸ್ ಮತ್ತು ಸೆಲೆಬ್ರಿಟಿಗಳಿಂದ ಶುಭಾಶಯ

  |

  ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹರಿಕೃಷ್ಣ ಸ್ಯಾಂಡಲ್ ವುಡ್ ಮ್ಯೂಸಿಕ್ ಕಿಂಗ್.

  ಸಂಗೀತ ನಿರ್ದೇಶನ ಮಾತ್ರವಲ್ಲದೆ, ಅನೇಕ ಹಾಡುಗಳನ್ನ ಕೂಡ ಹರಿಕೃಷ್ಣ ಹಾಡಿದ್ದಾರೆ. ಇವರು ಹಾಡಿರುವ ಬಹುತೇಕ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ.

  ದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ ಹರಿಕೃಷ್ಣದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ ಹರಿಕೃಷ್ಣ

  ಸ್ಟಾರ್ ನಟರಿಗೆ ಹರಿಕೃಷ್ಣ ನೆಚ್ಚಿನ ಸಂಗೀತ ನಿರ್ದೇಶಕ. ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದರೆ ಆ ಸಿನಿಮಾ ಮ್ಯೂಸಿಕಲ್ ಆಗಿ ಹಿಟ್ ಆಗೋದು ಪಕ್ಕಾ ಎಂಬ ಟ್ರೆಂಡ್ ಇಂಡಸ್ಟ್ರಿಯಲ್ಲಿದೆ. ಇಂತಹ ಸಂಗೀತ ನಿರ್ದೇಶಕನಿಗೆ ಸ್ಯಾಂಡಲ್ ವುಡ್ ತಾರೆಯರು ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ....

  ಡಿ ಬಾಸ್ ಶುಭಾಶಯ

  ಡಿ ಬಾಸ್ ಶುಭಾಶಯ

  ದರ್ಶನ್ ಅವರ ಆಪ್ತ ಸ್ನೇಹಿತ, ನೆಚ್ಚಿನ ಸಂಗೀತ ನಿರ್ದೇಶಕ ಹರಿಕೃಷ್ಣ. ದರ್ಶನ್ ನಟನೆ 50ಕ್ಕೂ ಅಧಿಕ ಚಿತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಿನಿಮಾಗಳಿಗೆ ಇವರದ್ದೇ ಸಂಗೀತ. ನಿರೀಕ್ಷೆಯಂತೆ ಹರಿಕೃಷ್ಣ ಅವರಿಗೆ ಡಿ ಬಾಸ್ ವಿಶ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಹರಿಕೃಷ್ಣ ''ಧನ್ಯವಾದ ಅಣ್ಣ'' ಎಂದಿದ್ದಾರೆ.

  ಶೈಲಜಾ ನಾಗ್ ಶುಭಾಶಯ

  ಶೈಲಜಾ ನಾಗ್ ಶುಭಾಶಯ

  'ಯಜಮಾನ' ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರು ಹರಿಕೃಷ್ಣಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಯಜಮಾನ ಚಿತ್ರದ ಹಾಡುಗಳು ಬಹುದೊಡ್ಡ ದಾಖಲೆ ಬರೆದಿತ್ತು.

  ಸಂತೋಷ್ ಆನಂದ್ ರಾಮ್

  ಸಂತೋಷ್ ಆನಂದ್ ರಾಮ್

  ರಾಜಕುಮಾರ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರಗಳ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಕೂಡ, ಹರಿಕೃಷ್ಣ ಅವರ ಜನುಮದಿನಕ್ಕೆ ಶುಭಕೋರಿದ್ದಾರೆ.

  ತರುಣ್ ಸುಧೀರ್ ವಿಶ್

  ತರುಣ್ ಸುಧೀರ್ ವಿಶ್

  ಅದ್ಭುತ ಸಂಗೀತ ನಿರ್ದೇಶಕ, ಅತ್ಯದ್ಭುತ ತಂತ್ರಜ್ಞ ಹರಿಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿದ್ದಾರೆ.

  ರಘುರಾಮ್ ಶುಭಾಶಯ

  ರಘುರಾಮ್ ಶುಭಾಶಯ

  ''ಹರಿಯ ನಾದಗಳನ್ನ, ಕೃಷ್ಣನನ ವೇದಗಳನ್ನ, ತನ್ನ ಸಂಗೀತದಲ್ಲಿ ಬೆರೆಸಿ ಅವರ ಅಭಿಮಾನಿಗಳಿಗೆ ಸಂಗೀತಾಮೃತವನ್ನು ಬಡಿಸುತ್ತಿರುವ, ಸ್ವರಗಳ ಮಾಂತ್ರಿಕ ಯಜಮಾನ ಚಿತ್ರದ ನಿರ್ದೇಶಕ ವಿ.ಹರಿಕೃಷ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು'' ಎಂದು ನಿರ್ದೇಶಕ, ನಟ ರಘುರಾಮ್ ವಿಶ್ ಮಾಡಿದ್ದಾರೆ.

  English summary
  Kannada Top Music director V Harikrishna celebrating his birthday today. darshan has sent birthday wishes to Harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X