ಪುನೀತ್ ಬರ್ತಡೇಗೆ ಶುಭ ಕೋರಿದ ದಾಸ ದರ್ಶನ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಒಂದೇ ಸಮಕಾಲಿನ ನಟರು. ಬಹುತೇಕ ಒಂದೇ ಸಮಯದಲ್ಲಿ ಇಬ್ಬರು ನಾಯಕರಾಗಿ ಬೆಳ್ಳಿತೆರೆಗೆ ಪರಿಚಯವಾದವರು. ಆ ಸ್ನೇಹ, ಬಾಂಧವ್ಯ ಇಬ್ಬರ ನಡುವೆ ಈಗಲೂ ಮುಂದುವರೆದಿದೆ.
ಹೌದು, ಅಪ್ಪು ಹುಟ್ಟುಹಬ್ಬಕ್ಕೆ ಡಿ ಬಾಸ್ ದರ್ಶನ್ ವಿಶ್ ಮಾಡಿದ್ದಾರೆ. ತಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಬರ್ತಡೇ ಶುಭಕೋರಿರುವ ದಾಸ, ''ಹ್ಯಾಪಿ ಬರ್ತಡೇ ಪುನೀತ್ ಚಿಯರ್ಸ್'' ಎಂದಿದ್ದಾರೆ.

ವಿಶೇಷ ಅಂದ್ರೆ ದರ್ಶನ್ ಅವರ ಹುಟ್ಟುಹಬ್ಬಕ್ಕೂ ಪುನೀತ್ ರಾಜ್ ಕುಮಾರ್ ಅವರು ವಿಶ್ ಮಾಡಿದ್ದರು. ಅಪ್ಪು ಮತ್ತು ದಚ್ಚು ಇಬ್ಬರ ಗೆಳೆತನ ಬಗ್ಗೆ ಹೇಳುವುದಾರೇ ದರ್ಶನ್ ಅಭಿನಯದ ಕೆಲವು ಚಿತ್ರಗಳ ಮುಹೂರ್ತ ಕಾರ್ಯಕ್ರಮಕ್ಕೆ ಪುನೀತ್ ಬಂದಿದ್ದಾರೆ.

ಪುನೀತ್ ಚಿತ್ರಗಳಿಗೆ ದರ್ಶನ್ ಅತಿಥಿಯಾಗಿ ಬಂದಿದ್ದಾರೆ. ಆ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುನೀತ್ ಅಭಿನಯದ 'ಅರಸು' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರವನ್ನ ನಿರ್ವಹಿಸಿದ್ದಾರೆ.
More from Filmibeat
English summary
Kannada actor, challenging star darshan has taken his twitter account to wish power star puneeth rajkumar.


Click it and Unblock the Notifications











