ದರ್ಶನ್ ವಿಶ್ ಮಾಡಿಲ್ಲ ಅಂದ್ರೆ ಸುಮಲತಾ ಬರ್ತಡೇ ಪೂರ್ಣವಾಗಲ್ವಂತೆ

By Bharath Kumar

Recommended Video

ದರ್ಶನ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದೇನು..? | Filmibeat Kannada

ದಕ್ಷಿಣ ಭಾರತದ ಚೆಂದದ ಗೊಂಬೆ, ಈಗಲೂ ಸ್ವೀಟ್-16 ಯವತಿಯಂತೆ ಕಂಗೊಳಿಸುವ ಎವರ್ ಗ್ರೀನ್ ಬ್ಯೂಟಿ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ನಟಿ ಸುಮಲತಾ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.

ಸುಮಲತಾ ಅವರ ಬರ್ತಡೇ ಪ್ರಯುಕ್ತ ಸ್ಯಾಂಡಲ್ ವುಡ್ ತಾರೆಯರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ಮೂಲಕ ಶುಭಕೋರುತ್ತಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಹಲವು ನಟ-ನಟಿಯರು ಸುಮಲತಾ ಅವರಿಗೆ ವಿಶ್ ಮಾಡಿದ್ದಾರೆ.

ಎಲ್ಲಗೂ ಸುಮಲತಾ ಅವರು ಪ್ರತಿಕ್ರಿಯಿಸಿದ್ದು, ತುಂಬಾ ಹೃದಯದ ಧನ್ಯವಾದಗಳನ್ನ ತಿಳಿಸಿದ್ದಾರೆ. ಇವರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸುಮಲತಾ ಅವರಿಗೆ ಶುಭಕೋರಿದ್ದು, ದಾಸ ವಿಶ್ ಮಾಡದೇ, ನನ್ನ ಬರ್ತಡೇ ಸಂಪೂರ್ಣವಾಗಲ್ಲ ಎಂದಿದ್ದಾರೆ ಸುಮಲತಾ. ಮುಂದೆ ಓದಿ....

ಸುಮಲತಾ ಜನುಮದಿನಕ್ಕೆ ಶುಭಕೋರಿದ ದಾಸ

ಸುಮಲತಾ ಜನುಮದಿನಕ್ಕೆ ಶುಭಕೋರಿದ ದಾಸ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಿರಿಯ ನಟಿ ಸುಮಲತಾ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ''ನನ್ನ ನೆಚ್ಚಿನ ಮದರ್ ಇಂಡಿಯಾಗೆ ಹುಟ್ಟುಹಬ್ಬದ ಶುಭಾಶಯಗಳು. ಇನ್ನೊಂದು ವರ್ಷವನ್ನ ಆಚರಿಸಿಕೊಳ್ಳುತ್ತಿದ್ದೀರಾ. ನೀವು ನನ್ನ ಪಾಲಿಗೆ ಸದಾ ಅದ್ಭುತವೆನಿಸುವ ವ್ಯಕ್ತಿ ಎನ್ನುವುದು ನಿಮಗೆ ಗೊತ್ತಿದೆ. ನಿಮ್ಮ ಎಲ್ಲ ಆಸೆಗಳು ಈಡೇರಲಿ'' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ನೀನು ವಿಶ್ ಮಾಡಿಲ್ಲ ಬರ್ತಡೇ ಪೂರ್ಣವಾಗಲ್ಲ

ನೀನು ವಿಶ್ ಮಾಡಿಲ್ಲ ಬರ್ತಡೇ ಪೂರ್ಣವಾಗಲ್ಲ

ದಾಸನ ಶುಭಾಶಯಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ಅವರು ''ಥ್ಯಾಂಕ್ ಯೂ ಮೈ ಡಾರ್ಲಿಂಗ್ ದರ್ಶನ್. ನಿನ್ನ ವಿಶ್ ಇಲ್ಲದೇ ನನ್ನ ಹುಟ್ಟುಹಬ್ಬ ಯವಾಗಲೂ ಪೂರ್ಣವಾಗಲ್ಲ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಿಶ್ ಮಾಡಿದ ಸುದೀಪ್

ವಿಶ್ ಮಾಡಿದ ಸುದೀಪ್

ಸುಮಲತಾ ಅವರ ಹುಟ್ಟುಹಬ್ಬ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ವಿಶ್ ಮಾಡಿದ್ದು, ''ಅದ್ಬುತ ವ್ಯಕ್ತಿ ಸುಮಲತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ನಗು ನಮಗೆ ಎಂದಿಗೂ ಸ್ಫೂರ್ತಿ ನೀಡುತ್ತದೆ. ಜೀವನದ ಒತ್ತಡವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ನಿಮ್ಮಿಂದ ಕಲಿತಿದ್ದೇವೆ. ನನ್ನ ಜೀವನದ ಭಾಗ ಆಗಿರುವುದಕ್ಕೆ ಧನ್ಯವಾದ ಅಕ್ಕ. ಈ ವರ್ಷ ನಿಮಗೆ ಹರ್ಷದಾಯಕವಾಗಿರಲಿ'' ಎಂದಿದ್ದಾರೆ.

ಎರಡು ಸಿನಿಮಾದಲ್ಲಿ ನಟನೆ

ಎರಡು ಸಿನಿಮಾದಲ್ಲಿ ನಟನೆ

'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಅಜಯ್ ರಾವ್ ತಾಯಿಯ ಪಾತ್ರದಲ್ಲಿ ಹಾಗೂ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದಲ್ಲಿ ಹರಿಪ್ರಿಯಾ ಅವರ ಅಮ್ಮನಾಗಿ ಸುಮಲತಾ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Challenging star darshan and kiccha sudeep wish to sumalatha ambareesh birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X