ಪ್ರೀತಿಯ ತಮ್ಮನ ಹುಟ್ಟುಹಬ್ಬಕ್ಕೆ ಡಿ ಬಾಸ್ ದರ್ಶನ್ ಶುಭ ಕೋರಿದ್ದು ಹೀಗೆ

ಸ್ಯಾಂಡಲ್ ವುಡ್ ನಟ, ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 27ನೇ ವಸಂತಕ್ಕೆ ಕಾಲಿಟ್ಟಿರುವ ಅಭಿಷೇಕ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಹಾವಳಿಯ ಪರಿಣಾಮ ಸಿಂಪಲ್ ಆಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದಾರೆ.

ಯಂಗ್ ರೆಬಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿವೆ. ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಂದ್ಹಾಗೆ ಅಭಿಷೇಕ್ ಗೆ ಪ್ರೀತಿಯ ಅಣ್ಣ ದರ್ಶನ್ ಕಡೆಯಿಂದ ವಿಶೇಷ ಶುಭಹಾರೈಕೆ ಸಿಕ್ಕಿದೆ. ದರ್ಶನ್ ಜೊತೆಗೆ ಡಿ ಬಾಸ್ ಅಭಿಮಾನಿಗಳು ಸಹ ವಿಶ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಮುಂದೆ ಓದಿ..

ಪ್ರೀತಿಯ ತಮ್ಮನಿಗೆ ದರ್ಶನ್ ವಿಶ್

ಪ್ರೀತಿಯ ತಮ್ಮನಿಗೆ ದರ್ಶನ್ ವಿಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ರನ್ನ ತನ್ನ ತಮ್ಮ ಅಂತನೆ ಹೇಳುವುದೆಂದು ಎಲ್ಲರಿಗೂ ಗೊತ್ತಿದೆ. ತಮ್ಮನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಯ ಶುಭಹಾರೈಕೆ ಕಳುಹಿಸಿದ್ದಾರೆ. "ನನ್ನ ಪ್ರೀತಿಯ ತಮ್ಮ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ. ಬೆಸ್ಟ್ ಆಫ್ ಲಕ್ ಫಾರ್ ಬ್ಯಾಡ್ ಮ್ಯಾನರ್ಸ್" ಎಂದು ಹೇಳಿದ್ದಾರೆ.

'ಅಮರ್' ಸಿನಿಮಾದಲ್ಲಿ ತಮ್ಮನಿಗಾಗಿ ನಟಿಸಿದ್ದ ದರ್ಶನ್

'ಅಮರ್' ಸಿನಿಮಾದಲ್ಲಿ ತಮ್ಮನಿಗಾಗಿ ನಟಿಸಿದ್ದ ದರ್ಶನ್

ವಿಶ್ ಜೊತೆಗೆ ತಮ್ಮನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ದರ್ಶನ್, ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಒಂದು ಫೋಟೋವನ್ನು ದರ್ಶನ್ ಹಂಚಿಕೊಂಡಿದ್ದಾರೆ. ಪ್ರೀತಿಯ ತಮ್ಮನಿಗೆ ಸದಾ ಆಸರೆಯಾಗಿರುವ ದರ್ಶನ್ ಅಭಿಷೇಕ್ ಮುಂದಿನ ಸಿನಿಮಾಗೂ ವಿಶ್ ಮಾಡಿದ್ದಾರೆ.

'ಬ್ಯಾಡ್ ಮ್ಯಾನರ್ಸ್' ಪ್ರೋಮೋ ರಿಲೀಸ್

'ಬ್ಯಾಡ್ ಮ್ಯಾನರ್ಸ್' ಪ್ರೋಮೋ ರಿಲೀಸ್

ಈ ವರ್ಷದ ಹುಟ್ಟುಹಬ್ಬದ ವಿಶೇಷಗಳಲ್ಲಿ 'ಬ್ಯಾಡ್ ಮ್ಯಾನರ್ಸ್' ಕೂಡ ಒಂದು. ಹುಟ್ಟುಹಬ್ಬದ ಪ್ರಯುಕ್ತ ಅಭಿಷೇಕ್ 'ಬ್ಯಾಡ್ ಮ್ಯಾನರ್ಸ್' ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ಅಭಿನಯದ ಬಹುನಿರೀಕ್ಷೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಪ್ರೋಮೋ ರಿಲೀಸ್ ಮಾಡಲಾಗಿದೆ.

Recommended Video

Abhishek Ambarish ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ದುನಿಯಾ ಸೂರಿ | Bad Manners | Oneindia Kannada
ಚಿತ್ರಕ್ಕೆ ಸೂರಿ ನಿರ್ದೇಶನ

ಚಿತ್ರಕ್ಕೆ ಸೂರಿ ನಿರ್ದೇಶನ

ಅಭಿಷೇಕ್ ವಿಭಿನ್ನ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದ್ಹಾಗೆ 'ಬ್ಯಾಡ್ ಮ್ಯಾನರ್ಸ್' ನಿರ್ದೇಶಕ ಸುಕ್ಕಾ ಸೂರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಬಳಿಕ ಸೂರಿ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಅಭಿಷೇಕ್ ಮತ್ತು ಸೂರಿ ಕಾಂಬಿನೇಷನ್ ನ 'ಬ್ಯಾಡ್ ಮ್ಯಾನರ್ಸ್' ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

More from Filmibeat

English summary
Challenging Star Darshan Wishes his brother Abhishek Ambareesh on His Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X