ನವರಸನಾಯಕ ಜಗ್ಗೇಶ್‌ಗೆ ಡಿ ಬಾಸ್ ದರ್ಶನ್ ಶುಭಕೋರಿದ್ದು ಹೀಗೆ

ಸ್ಯಾಂಡಲ್ ವುಡ್ ನಲ್ಲಿ ಇವತ್ತು (ಮಾರ್ಚ್ 17) ಇಬ್ಬರು ಸ್ಟಾರ್ ನಟರ ಹುಟ್ಟುಹಬ್ಬ. ನವರಸನಾಯಕ ಜಗ್ಗೇಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಇಬ್ಬರೂ ನಟರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Recommended Video

ಜಗ್ಗೇಶ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಿ ಬಾಸ್ | Filmibeat Kannada

ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಸಹ ವಿಶ್ ಮಾಡುತ್ತಿದ್ದಾರೆ. ನವರಸನಾಯಕನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಜಗ್ಗೇಶ್ ಅಣ್ಣ' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗೆ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ದೊಡ್ಡ ವಿವಾದವೇ ಭುಗಿಲೆದ್ದಿತ್ತು. ಇದಾದ ಬಳಿಕ ದರ್ಶನ್ , ಹಿರಿಯ ನಟ ಜಗ್ಗೇಶ್‌ಗೆ ಕ್ಷಮೆ ಕೂಡ ಕೇಳಿದ್ದರು. ದರ್ಶನ್ ಕ್ಷಮೆಯಿಂದ ದೊಡ್ಡ ವಿವಾದ ಅಷ್ಟೆ ವೇಗವಾಗಿ ತಣ್ಣಗಾಗಿತ್ತು.

Darshan Wishes Actor Jaggesh On His Birthday

ಎಲ್ಲವನ್ನು ಮರೆತು ದರ್ಶನ್ ಇವತ್ತು ಜಗ್ಗೇಶ್‌ಗೆ ವಿಶ್ ಮಾಡಿದ್ದಾರೆ. ದರ್ಶನ್ ಶುಭಕೋರಿದ ಟ್ವೀಟ್ ಅನ್ನು ಜಗ್ಗೇಶ್ ರೀ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಜಗ್ಗೇಶ್ ಪ್ರತಿವರ್ಷ ತನ್ನ ಹುಟ್ಟುಹಬ್ಬವನ್ನು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಆಚರಣೆ ಮಾಡುತ್ತಿದ್ದರು. ಈ ವರ್ಷ ಮನೆಯಲ್ಲೇ ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ತೋತಾಪುರಿ ಸಿನಿಮಾ ರಿಲೀಸ್‌ಗೆ ತಯಾರಿ ನಡೆಯುತ್ತಿದೆ. ಈ ಸಿನಿಮಾ ಎರಡು ಭಾಗದಲ್ಲಿ ತೆರೆಗೆ ಬರುತ್ತಿದೆ. ಇನ್ನು ರಂಗನಾಯಕ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಬೇಕಿದೆ.

More from Filmibeat

English summary
Challenging star Darshan Wishes Actor Jaggesh On His Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X