ಪ್ರೀತಿಯ ತಮ್ಮನನ್ನು ಬೆಳೆಸಿ ಎಂದು ಕೇಳಿಕೊಂಡ ದರ್ಶನ್
Recommended Video

ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ 'ಅಮರ್' ಟೀಸರ್ ನಾಳೆ ಬಿಡುಗಡೆಯಾಗುತ್ತಿದೆ. ಈ ಶುಭ ಸಮಯದಲ್ಲಿ ನಟ ದರ್ಶನ್ ಶುಭಾಶಯ ತಿಳಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ''ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ 'ಅಮರ್' ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ'' ಎಂದು ಬರೆದುಕೊಂಡಿದ್ದಾರೆ.

ತಮ್ಮ ಟ್ವಿಟ್ಟರ್ ನಲ್ಲಿ ನಾಲ್ಕು ಸಾಲು ಬರೆಯುವ ಮೂಲಕ ಪ್ರೀತಿಯ ತಮ್ಮ ಅಭಿಷೇಕ್ ನನ್ನು ಬೆಳೆಸಿ ಎಂದು ದರ್ಶನ್ ಕೇಳಿಕೊಂಡಿದ್ದಾರೆ. ನಾಳೆ ಪ್ರೇಮಿಗಳ ದಿನ ವಿಶೇಷವಾಗಿ 'ಅಮರ್' ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ದರ್ಶನ್ ಸಹ ನಟಿಸಿದ್ದಾರೆ.
'ಅಮರ್' ಸಿನಿಮಾದ ಮೂಲಕ ಅಭಿಷೇಕ್ ಅಂಬರೀಶ್ ಲಾಂಚ್ ಆಗುತ್ತಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಜೋಡಿಯಾಗಿ 'ಯಜಮಾನ' ಚಿತ್ರದ ಬಸಣ್ಣಿ ತಾನ್ಯ ಹೂಪೆ ನಟಿಸಿದ್ದಾರೆ. ನಾಯಕ ನಾಯಕಿ ಇಬ್ಬರು ಬೈಕ್ ರೇಸರ್ ಪಾತ್ರ ಮಾಡುತ್ತಿದ್ದಾರೆ. ನಾಗಶೇಖರ್ ನಿರ್ದೇಶನ ಹಾಗೂ ಸಂದೇಶ್ ನಾಗರಾಜ್ ನಿರ್ಮಾಣ ಚಿತ್ರಕ್ಕಿದೆ.


Click it and Unblock the Notifications











