'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
ಜನವರಿ 26 ರಂದು ಗಣರಾಜ್ಯೋತ್ಸವ ಸಂಭ್ರಮ. ಈ ಕಡೆ ರಾಬರ್ಟ್ ನಟಿ ಐಶ್ವರ್ಯ ಪ್ರಸಾದ್‌ಗೆ ಜನುಮದಿನದ ಸಂಭ್ರಮ. ಈ ವಿಶೇಷವಾಗಿ ಐಶ್ವರ್ಯ ಅವರಿಗೆ ನಟ ದರ್ಶನ್ ಶುಭಾಶಯ ಕೋರಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ನಟಿ ಐಶ್ವರ್ಯ ಪ್ರಸಾದ್ ಅವರ ರಾಬರ್ಟ್ ಪೋಸ್ಟರ್ ಹಂಚಿಕೊಂಡು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ತರುಣ್ ಸುಧೀರ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಡಿ ಬಾಸ್ ''ಹ್ಯಾಪಿ ಬರ್ತಡೇ ಐಶ್ವರ್ಯ, ನಿಮಗೆ ಒಳ್ಳೆಯದಾಗಲಿ'' ಎಂದು ಶುಭಕೋರಿದ್ದಾರೆ.
ಅಂದ್ಹಾಗೆ, ರಾಬರ್ಟ್ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಐಶ್ವರ್ಯ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಪಾತ್ರ ಯಾವುದು ಎನ್ನುವುದರ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೂ, ಐಶ್ವರ್ಯ ಅವರ ಪಾತ್ರದ ಮೇಲೆ ನಿರೀಕ್ಷೆ ಇದೆ.

ತರುಣ್ ಸುಧೀರ್ ನಿರ್ದೇಶಿಸಿರುವ ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಇನ್ನು ಜಗಪತಿ ಬಾಬು, ಹಿರಿಯ ನಟ ದೇವರಾಜ್, ರವಿ ಕಿಶನ್, ರವಿ ಶಂಕರ್, ವಿನೋದ್ ಪ್ರಭಾಕರ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ತೇಜಸ್ವಿ ಪ್ರಕಾಶ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











