'ಕೊರೊನಾ ದೂರವಾಗಿ ಎಲ್ಲರ ಬಾಳಲ್ಲೂ ಹೊಸ ಹುರುಪು, ಉತ್ಸಾಹ ಮೂಡಲಿ'

ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ಯಾಂಡಲ್‌ವುಡ್ ಬಹಳ ಖುಷಿಯಿಂದ ಸ್ವಾಗತಿಸಿದೆ. ಕಳೆದ ಒಂದು ವರ್ಷದಿಂದ ಸಿನಿಮಾ, ಕೆಲಸವಿಲ್ಲದೇ ಕೈಕಟ್ಟಿ ಕುಳಿತಿದ್ದ ಚಿತ್ರರಂಗ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೊರೊನಾದಿಂದ ಹೊರಬಂದು ಮತ್ತೆ ಮೊದಲಿನಂತೆ ಜೀವನ ನಡೆಸಲು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಸಾವು-ನೋವುಗಳಿಂದ ಕೂಡಿದ್ದ 2020ಕ್ಕೆ ಗುಡ್ ಬೈ ಹೇಳಿ 2021ನೇ ವರ್ಷ ಎಲ್ಲರ ಬಾಳಲ್ಲೂ ಹೊಸ ಹುರುಪು, ಉತ್ಸಾಹ ಮೂಡಲಿ ಎಂಬ ಆಶಯದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ.

ಈಗ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮ. ಕಳೆದ ವರ್ಷದ ನೋವುಗಳನ್ನು ಮರೆತು ಹೊಸ ಹುರುಪು, ಉತ್ಸಾಹದೊಂದಿಗೆ ಜೀವನ ಮುಂದುವರಿಸಬೇಕು ಎಂದ ನಟ ದರ್ಶನ್ ಶುಭಕೋರಿದ್ದಾರೆ.

Darshan Wishes To Sankranti Festival

ಸಂಕ್ರಾಂತಿ ಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿರುವ ನಟ ದರ್ಶನ್ ''2021ರ ಮೊದಲನೆಯ ಹಬ್ಬ ಸಂಕ್ರಾಂತಿ ಸಮೃದ್ಧಿಯ ಸಂಕೇತ. ಎಲ್ಲರ ಮನೆ-ಮನೆಗೂ ಎಳ್ಳು ಬೆಲ್ಲ ಬೀರಿ ಸಂತಸ ಹಂಚಿಕೊಳ್ಳುವ ಸಮಯ. ಕಳೆದ ವರ್ಷದ ಸಂಭ್ರಮಗಳನ್ನು ಕಸಿದುಕೊಂಡಿದ್ದ ಕೊರೊನಾ ದೂರವಾಗಿ ಸಂಕ್ರಾಂತಿಯಿಂದ ಎಲ್ಲರ ಬಾಳಲ್ಲೂ ಹೊಸ ಹುರುಪು, ಉತ್ಸಾಹ ಮೂಡಲಿ ಎಂದು ಆಶಿಸುತ್ತೇನೆ. ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು'' ಎಂದಿದ್ದಾರೆ.

ದರ್ಶನ್ ಅವರ ಶುಭಾಶಯಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ತಮಗೂ ಈ ವರ್ಷ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.

ಇತ್ತೀಚಿಗಷ್ಟೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ್ದ ದರ್ಶನ್, 'ಈ ಸಲ ನನ್ನ ಹುಟ್ಟುಹಬ್ಬಕ್ಕೆ ಯಾರೂ ಬರಬೇಡಿ, ಎಲ್ಲರೂ ಸಂಕಷ್ಟದಲ್ಲಿದ್ದೀರ, ನನಗಾಗಿ ಖರ್ಚು ಮಾಡುವ ಹಣವನ್ನು ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಬಳಸಿ'' ಎಂದು ವಿನಂತಿಸಿದ್ದರು.

ಹಾಗಯೇ ದರ್ಶನ್ ನಟನೆಯಲ್ಲಿ ತಯಾರಾಗಿರುವ ರಾಬರ್ಟ್ ಸಿನಿಮಾದ ಬಿಡುಗಡೆ ಕುರಿತು ಮಾಹಿತಿ ನೀಡಿದ್ದರು. ರಾಬರ್ಟ್ ಸಿನಿಮಾ ಮಹಾಶಿವರಾತ್ರಿ ಹಬ್ಬದ ವಿಶೇಷವಾಗಿ ಮಾರ್ಚ್ 11ಕ್ಕೆ ತೆರೆಗೆ ಬರಲಿದೆ ಎಂದು ಹೇಳಿದ್ದರು.

More from Filmibeat

English summary
Challenging star Darshan wishes to sankranti festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X