ಶರಣ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಚಾಲೆಜಿಂಗ್ ಸ್ಟಾರ್ ದರ್ಶನ್

ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡದ ಅವತಾರ ಪುರುಷನ ಜನುಮದಿನದ ವಿಶೇಷವಾಗಿ ಅಭಿಮಾನಿಗಳು ಹಾಗೂ ಹಲವು ಸೆಲೆಬ್ರಿಟಿಗಳು ಶುಭಕೋರಿದ್ದಾರೆ.

ಶರಣ್ ಬರ್ತಡೇ ಪ್ರಯುಕ್ತ ಗುರುಶಿಷ್ಯರು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೋಷನ್ ಪೋಸ್ಟರ್ ನೋಡಿ ಮೆಚ್ಚಿಕೊಂಡ ನಟ ದರ್ಶನ್, ಶರಣ್ ಅವರ ಜನುಮದಿನಕ್ಕೆ ವಿಶ್ ಮಾಡಿದ್ದಾರೆ.

''ಶರಣ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಎಲ್ಲಾ ಕನಸುಗಳು ನನಸಾಗಲಿ ಎಂದು ಆಶಿಸುತ್ತೇನೆ'' ಎಂದು ಟ್ವೀಟ್ ಮಾಡಿರುವ ದಾಸ, ಗುರುಶಿಷ್ಯರು ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ.

Darshan wishes to sharans Birthday

ದರ್ಶನ್ ಮಾತ್ರವಲ್ಲ ಶರಣ್ ಅವರ ಹುಟ್ಟುಹಬ್ಬಕ್ಕೆ ಜಯಣ್ಣ ಫಿಲಂಸ್, ಪುಷ್ಕರ್ ಫಿಲಂಸ್, ಸೃಜನ್ ಲೋಕೇಶ್, ಸೋನು ಗೌಡ, ಅರ್ಜುನ್ ಜನ್ಯ, ನಿರ್ದೇಶಕ ರಘುರಾಮ್, ತರುಣ್ ಸುಧೀರ್, ನಿರ್ಮಾಪಕ ಕಾರ್ತಿಕ್ ಗೌಡ, ಸಿಂಪಲ್ ಸುನಿ, ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

''ತಾನು ಖುಷಿಯಾಗಿದ್ದು...

ತನ್ನ ಸುತ್ತಮುತ್ತಲಿನವರನ್ನು ಖುಷಿಯಾಗಿಸೋ..

ಸದಾ ಲವಲವಿಕೆಯಲ್ಲಿರುವ ಅವತಾರಪುರುಷ ಶರಣ್ ರವರಿಗೆ

ಹುಟ್ಟುಹಬ್ಬದ ಶುಭಾಶಯಗಳು ...'' - ಸಿಂಪಲ್ ಸುನಿ

''ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ ಶರಣ್. ಸದಾ ನಗುತ್ತಾ, ಎಲ್ಲರನ್ನು ನಗಿಸುತ್ತಾ ಇರು.'' - ತರುಣ್ ಸುಧೀರ್

''ಹಾಸ್ಯಲೋಕಕ್ಕೆ ಅಧ್ಯಕ್ಷ..ನಿಮ್ಮ ಚಿತ್ರಗಳು ನೋಡಿದಾಗ ಎಲ್ಲರ ಮೊಗದಲ್ಲಿ ನಗು ಪ್ರತ್ಯಕ್ಷ.. ಇಂದು ನಿಮ್ಮ 'ಹುಟ್ಟು ಹಬ್ಬ'.. ಆಶೀರ್ವದಿಸಲಿ ಆ ದೇವರು ನಿಮಗೆ ಕೊಟ್ಟು ನೂರ್ಕಾಲ ಒಳ್ಳೆ ಅರೋಗ್ಯ, ನೆಮ್ಮದಿ ಹಾಗು ಹರುಷ.. Happy Birthday to "ಅವತಾರ ಪುರುಷ".. '' - ರಘುರಾಮ್, ನಿರ್ದೇಶಕ

ಅವತಾರ ಪುರುಷ ಸಿನಿಮಾ ತೆರೆಕಾಣಲು ಸಜ್ಜಾಗಿದ್ದು, ಗುರುಶಿಷ್ಯರು ಸಿನಿಮಾ ಹೊಸದಾಗಿ ಆರಂಭವಾಗಿದೆ.

More from Filmibeat

English summary
Kannada actor, challenging star darshan has wish to actor sharan's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X