ಬೆಂಗಳೂರಿನ 40 ಚಿತ್ರಮಂದಿರದಲ್ಲಿ ಬೆಳ್ಳಂಬೆಳಗ್ಗೆ ಬರ್ತಾವ್ನೆ 'ಯಜಮಾನ'
ಒಂದೂವರೆ ವರ್ಷದಿಂದ ದರ್ಶನ್ ಸಿನಿಮಾಗಳಿಲ್ಲದೇ ಸ್ಯಾಂಡಲ್ ವುಡ್ ಹಾಗೂ ಡಿ ಬಾಸ್ ಅಭಿಮಾನಿಗಳು ಭಾರಿ ನಿರಾಸೆಯಲ್ಲಿದ್ದರು. ಇಂತಹ ಸಮಯದಲ್ಲಿ ಹಲವು ವಿಶೇಷತೆಗಳೊಂದಿಗೆ, ಹಲವು ದಾಖಲೆಗಳನ್ನ ಉಡೀಸ್ ಮಾಡಿ ಬರ್ತಿರುವ ಯಜಮಾನ ಚಿತ್ರವನ್ನ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಯಜಮಾನ ಚಿತ್ರದ ವರ್ಲ್ಡ್ ವೈಡ್ ಕನ್ನಡ ಭಾಷೆಯಲ್ಲಿ ತೆರೆಕಾಣುತ್ತಿದೆ. ಕರ್ನಾಟಕ ಹೊರತುಪಡಿಸಿ, ನೆರೆರಾಜ್ಯ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲೂ ರಿಲೀಸ್ ಆಗ್ತಿದೆ.
ಕೇವಲ ಬೆಂಗಳೂರಿನಲ್ಲೇ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ, ಸುಮಾರು 40 ಥಿಯೇಟರ್ ಗಳಲ್ಲಿ ಬೆಳ್ಳಂಬೆಳಗ್ಗೆಯೇ ಯಜಮಾನ ಬರ್ತಿದೆ. ಎಲ್ಲೆಲ್ಲಿ? ಮುಂದೆ ಓದಿ....

ಆರು, ಏಳು, ಏಂಟು ಗಂಟೆಗೆ ಫಸ್ಟ್ ಶೋ
ಸಾಮಾನ್ಯವಾಗಿ ದರ್ಶನ್ ಸಿನಿಮಾಗಳು ಅಂದ್ರೆ ಮಧ್ಯರಾತ್ರಿಯೇ ಶೋ ಆಗಿರುವುದು ಈ ಹಿಂದೆ ನೋಡಿದ್ದೀವಿ. ಅದ್ಯಾಕೋ ಯಜಮಾನ ಚಿತ್ರವನ್ನ ಮಿಡ್ ನೈಟ್ ಶೋ ಮಾಡಲು ಚಿತ್ರತಂಡ ಒಪ್ಪಲಿಲ್ಲ. ಸ್ವತಃ ದರ್ಶನ್ ಅವರೇ ಹೇಳಿದಂತೆ ಬೆಳಿಗ್ಗೆ 7 ಗಂಟೆಗೆ ಫಸ್ಟ್ ಶೋ ಆರಂಭವಾಗುತ್ತೆ ಎಂದಿದ್ದರು. ಬಹುತೇಕ ಥಿಯೇಟರ್ ಗಳಲ್ಲಿ ಆರು, ಏಳು, ಏಂಟು ಗಂಟೆಗೆ ಫಸ್ಟ್ ಶೋ ನಡೆಯಲಿದೆ.

ಬೆಂಗಳೂರಿನ 40 ಸೆಂಟರ್ ನಲ್ಲಿ ಮಾರ್ನಿಂಗ್ ಶೋ
ಬೆಳಿಗ್ಗೆ 10 ಗಂಟೆಯ ಮೇಲೆ ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಮೊದಲ ಶೋ ಆರಂಭವಾಗುವುದು ಟ್ರೆಂಡ್. ಆದ್ರೆ, ಯಜಮಾನ ಸಿನಿಮಾ ಕೇವಲ ಬೆಂಗಳೂರಿನಲ್ಲಿ ಮಾತ್ರ ಸುಮಾರು 40 ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋ (6, 7, 8 ಗಂಟೆ)ಗಳು ಪ್ರದರ್ಶನವಾಗಲಿದೆ.

ಎಲ್ಲೆಲ್ಲಿ ಎಂದು ನೋಡುವುದಾದರೇ....
ಆ 40 ಚಿತ್ರಗಳು ಯಾವುದು ಎಂದು ನೋಡುವುದಾರೇ ನರ್ತಕಿ, ವೀರೇಶ್, ವೆಂಕಟೇಶ್ವರ, ಸವೀತಾ, ಕೃಷ್ಣ, ಭಾರತಿ, ವಿಜಯಲಕ್ಷ್ಮಿ, ವೈಷ್ಣವಿ, ವೈಭವಿ, ತಿರುಮಲ, ನವರಂಗ್, ವಿನಾಯಕ, ಸಿದ್ದಲಿಂಗೇಶ್ವರ, ಕಾವೇರಿ, ತುಳಸಿ, ರವಿ, ನರಸಿಂಹ, ವಜ್ರಶ್ವೇರಿ, ಮೋಹನ್, ಕಿನೋ ಸಿನಿಮಾಸ್, ಚಂದ್ರೋದಯ, ಶ್ರೀಕೃಷ್ಣ, ರಾಧಾಕೃಷ್ಣ, ವೈನಿಧಿ, ವೆಂಕಟೇಶ್ವರ, ಸಂಧ್ಯಾ, ಮಾನಸ, ಅಶೋಕ, ರಾಜಮುರಳಿ, ರೇಣುಕ, ಪೃಥ್ವಿ, ಶಾರದ, ಮಾಹದೇಶ್ವರ, ಎಚ್.ಎಂ.ಟಿ ಸಿನಿಮಾಸ್ ಸೇರಿದಂತೆ ಇನ್ನು ಇತರೆ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6, 7, 8 ಗಂಟೆ ಶೋಗಳು ಆರಂಭವಾಗಲಿದೆ.

ಮೊದಲ ದಿನದ ಮೇಲೆ ಇಂಡಸ್ಟ್ರಿ ಕಣ್ಣು
ಯಜಮಾನ ಚಿತ್ರದ ಹವಾ ನೋಡ್ತಿದ್ರೆ ಕಲೆಕ್ಷನ್ ನಲ್ಲಿ ಅದೇನ್ ಕಮಾಲ್ ಮಾಡುತ್ತೋ ಗೊತ್ತಿಲ್ಲ. ಸದ್ಯಕ್ಕೆ ಮೊದಲ ಶೋ ಮುಗಿಲಿ ಅಂತಾ ಇಂಡಸ್ಟ್ರಿಯವರು ಕಾಯ್ತಿದ್ದಾರೆ. ಯಾಕಂದ್ರೆ, ಸಿನಿಮಾ ಹೇಗಿದೆ ಎಂಬ ರೆಸ್ಪಾನ್ಸ್ ಸಿಕ್ಕ ಕೂಡಲೇ ಚಿತ್ರದ ಭವಿಷ್ಯ ನಿರ್ಧಾರವಾಗುತ್ತೆ. ಫಸ್ಟ್ ಶೋ ಆಗಿದ್ದ ತಕ್ಷಣ ದಾಖಲೆ, ಕಲೆಕ್ಷನ್, ಹವಾ ಎಲ್ಲವೂ ಪಕ್ಕಾ ಆಗುತ್ತೆ.


Click it and Unblock the Notifications











