'ಯಜಮಾನ' ಚಿತ್ರದ ಯಾವ ಹಾಡು ಎಷ್ಟನೇ ಸ್ಥಾನದಲ್ಲಿದೆ?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ತೆರೆಕಾಣುತ್ತಿದೆ. ಮುಖ್ಯ ಚಿತ್ರಮಂದಿರ ನರ್ತಕಿ ಸೇರಿದಂತೆ ರಾಜ್ಯದ ಬಹುತೇಕ ಥಿಯೇಟರ್ ಗಳ ಬಳಿ ಯಜಮಾನ ಕಟೌಟ್ ರಾರಾಜಿಸುತ್ತಿದೆ.
ದರ್ಶನ್ ಕಟೌಟ್ ಗೆ ಹಾಲಾಭಿಷೇಕ ಮಾಡಿ ಭರ್ಜರಿಯಾಗಿ ಸ್ವಾಗತಿಸುತ್ತಿದ್ದಾರೆ. ಇನ್ನು ಕೆಲವು ಚಿತ್ರಮಂದಿರಗಳಲ್ಲಂತೂ ಬರಿ ಪೋಸ್ಟರ್ ಗಳಿಂದ ಶೃಂಗಾರಗೊಳಿಸಿ, ಇದು ಥಿಯೇಟರ್ ಅಲ್ಲ ಅನ್ನೋ ರೀತಿ ಮಾಡಿರುವ ಕ್ರೇಜ್ ಕಾಣಬಹುದು.
ಸಿನಿಮಾ ಬಗ್ಗೆ ಇಷ್ಟೊಂದು ಹೈಪ್, ಕ್ರೇಜ್ ಹುಟ್ಟಿಕೊಳ್ಳಲು ಕಾರಣ ಯಜಮಾನ ಚಿತ್ರದ ಹಾಡುಗಳು ಹಾಗೂ ಟ್ರೈಲರ್. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಹೊಸ ದಾಖಲೆಗಳನ್ನ ಬರೆದಿರುವ ಯಜಮಾನ ಹಾಡುಗಳು, ಈಗ ಅಂದ್ರೆ ರಿಲೀಸ್ ಗೂ ಎರಡು ದಿನ ಮುಂಚೆ ಎಷ್ಟು ವೀಕ್ಷಣೆ ಪಡೆದುಕೊಂಡಿದೆ ಎಂಬುದರ ಬಗ್ಗೆ ನೋಡೋಣ. ಮುಂದೆ ಓದಿ...

ಶಿವನಂದಿ ಅಬ್ಬರ
ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು ಶಿವನಂದಿ ಯಜಮಾನ ಚಿತ್ರದ ಮೊದಲ ಹಾಡು. ಜನವರಿ 14 ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಹಾಡು ಈಗ 8.7 (8,771,229) ಮಿಲಿಯನ್ ವೀಕ್ಷಣ ಪಡೆದಿದೆ.

ಒಂದು ಮುಂಜಾನೆಯ ಗುಂಗು
ಕವಿರಾಜ್ ಸಾಹಿತ್ಯ ಬರೆದಿರುವ ಒಂದು ಮುಂಜಾನೆ ಹಾಡು ಯಜಮಾನ ಚಿತ್ರದ ರೋಮ್ಯಾಂಟಿಕ್ ಸಾಂಗ್. ಜನವರಿ 18 ರಂದು ಬಿಡುಗಡೆಯಾದ ಈ ಹಾಡು ಇಲ್ಲಿಯವರೆಗೂ 7.9 (7,962,650) ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಬಸಣ್ಣಿ ಬಾ ಸೂಪರ್
ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿರುವ ಬಸಣ್ಣಿ ಬಾ ಅತಿ ದೊಡ್ಡ ಹಿಟ್ ಬಾರಿಸಿದೆ. ಯಜಮಾನ ಚಿತ್ರದ ಹಾಡುಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿರುವ ಹಾಡು ಇದಾಗಿದೆ. ಜನವರಿ 25 ರಂದು ಬಂದಿದ್ದ ಈ ಹಾಡು ಇಲ್ಲಿಯವರೆಗೂ 9 (9,064,263) ಮಿಲಿಯನ್ ವೀವ್ಸ್ ಪಡೆದಿದೆ.

ನಿಂತ ನೋಡೋ ಯಜಮಾನ
ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿರುವ ನಿಂತ ನೋಡೋ ಯಜಮಾನ ಟೈಟಲ್ ಹಾಡು ಭಾರಿ ಪ್ರಶಂಸೆ ಪಡೆದುಕೊಂಡಿದೆ. ಫೆಬ್ರವರಿ 5 ರಂದು ರಿಲೀಸ್ ಆಗಿದ್ದ ಈ ಹಾಡು ಇಲ್ಲಿಯವರೆಗೂ 7.4 (7,466,507) ಮಿಲಿಯನ್ ವೀಕ್ಷಣೆ ಕಂಡಿದೆ.

ಹತ್ತು ರೂಪಾಯಿ ಹಾಡು
ಯಜಮಾನ ಚಿತ್ರದಲ್ಲಿ ಯೋಗರಾಜ್ ಭಟ್ ಅವರು ಬರೆದಿರುವ ಇನ್ನೊಂದು ಹಾಡು ಹತ್ತು ರೂಪಾಯಿಗೊಂದು. ಈ ಹಾಡು ಫೆಬ್ರವರಿ 25 ರಂದು ರಿಲೀಸ್ ಆಗಿದ್ದು, ಎರಡೇ ದಿನಕ್ಕೆ 1.5 (1,510,432) ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಟ್ರೈಲರ್ ದಾಖಲೆ
ಇನ್ನು ಯಜಮಾನ ಚಿತ್ರದ ಟ್ರೈಲರ್ ಗೆ ಭಾರಿ ರೆಸ್ಪಾನ್ಸ್ ಸಿಕ್ಕಿದ್ದು, ಅತಿ ಹೆಚ್ಚು ವೀಕ್ಷಣೆ ಕನ್ನಡ ಚಿತ್ರರಂಗದ ಎರಡನೇ ಟ್ರೈಲರ್ ಇದಾಗಿದೆ. ಫೆಬ್ರವರಿ 9 ರಂದು ತೆರೆಕಂಡಿದ್ದ ಟ್ರೈಲರ್ ಇಲ್ಲಿಯವರೆಗೂ 17.5 ಮಿಲಿಯನ್ ವೀಕ್ಷಣೆ ಕಂಡಿದೆ. ಇದಕ್ಕೂ ಮೊದಲು ಕೆಜಿಎಫ್ ಟ್ರೈಲರ್ 18.3 ಮಿಲಿಯನ್ ವೀಕ್ಷಣೆ ಕಂಡಿದೆ.


Click it and Unblock the Notifications











