For Quick Alerts
  ALLOW NOTIFICATIONS  
  For Daily Alerts

  ಫೋಟೋಗಳು: ಸುಮಲತಾ ಅಂಬರೀಶ್ ಬರ್ತಡೇ ಸಂಭ್ರಮದಲ್ಲಿ ದರ್ಶನ್, ಯಶ್, ಉಪೇಂದ್ರ

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ಹಿರಿಯ ನಟಿ, ರಾಜಕಾರಣಿ ಸುಮಲತಾ ಅಂಬರೀಶ್ ಇತ್ತೀಚಿಗಷ್ಟೆ 59ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಪಂಚಭಾಷಾ ತಾರೆಯಾಗಿ ಮಿಂಚಿರುವ ಸುಮಲತಾ ಅಂಬರೀಶ್ ಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುವ ಸುಮಲತಾ ಅಂಬರೀಶ್, ಸ್ಯಾಂಡಲ್ ವುಡ್ ಆಪ್ತರಿಗೆ ಆಹ್ವಾನ ನೀಡಿದ್ದರು. ಸಂಸದೆ ಸುಮಲತಾ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಜೋಡೆತ್ತುಗಳೆಂದೇ ಖ್ಯಾತಿಗಳಿಸಿರುವ ದರ್ಶನ್ ಮತ್ತು ಯಶ್ ಭಾಗಿಯಾಗಿದ್ದರು. ಅನೇಕ ತಿಂಗಳ ಬಳಿಕ ದರ್ಶನ್ ಮತ್ತು ಯಶ್ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ. ಮುಂದೆ ಓದಿ...

  ಹುಟ್ಟುಹಬ್ಬದ ಸಂಭ್ರಮದಲ್ಲಿ ಯಶ್-ದರ್ಶನ್

  ಹುಟ್ಟುಹಬ್ಬದ ಸಂಭ್ರಮದಲ್ಲಿ ಯಶ್-ದರ್ಶನ್

  ಯಶ್ ಜೊತೆಗೆ ಪತ್ನಿ ರಾಧಿಕಾ ಕೂಡ ಸುಮಲತಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಯಶ್, ದರ್ಶನ್ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ, ಗುರುಕಿರಣ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಮಂದಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸಂಭ್ರಮಾಚರಣೆಯ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

  ಜನ್ಮದ ದಿನದ ಪಾರ್ಟಿಯಲ್ಲಿ ಯಶ್-ದರ್ಶನ್ ಹೈಲೆಟ್

  ಜನ್ಮದ ದಿನದ ಪಾರ್ಟಿಯಲ್ಲಿ ಯಶ್-ದರ್ಶನ್ ಹೈಲೆಟ್

  ಸುಮಲತಾ ಅಕ್ಕಪಕ್ಕದಲ್ಲಿ ಯಶ್ ಮತ್ತು ದರ್ಶನ್ ಇಬ್ಬರೂ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಮಲತಾ ಕುಟುಂಬದ ಜೊತೆ ಯಶ್ ಜೊತೆ ಸಂತೋಷದ ಸಮಯ ಕಳೆದ ಫೋಟೋಗಳು ಸಹ ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿವೆ. ಕೋವಿಡ್ ನಂತರ ಚಿತ್ರರಂಗದ ಆಪ್ತರೆಲ್ಲರೂ ಒಟ್ಟಿಗೆ ಸೇರಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವುದು ತೀರ ಕಡಿಮೆಯಾಗಿದೆ. ಆದರೀಗ ಅನೇಕ ಸಮಯದ ಬಳಿಕ ದರ್ಶನ್, ಯಶ್, ರಿಯಲ್ ಸ್ಟಾರ್ ಉಪೇಂದ್ರ ಎಲ್ಲಾ ಒಟ್ಟಿಗೆ ಸೇರಿ ಪಾರ್ಟಿಯಲ್ಲಿ ಭಾಗಿ ಎಂಜಾಯ್ ಮಾಡಿದ್ದಾರೆ.

  ಅನೇಕ ತಿಂಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜೋಡೆತ್ತು

  ಅನೇಕ ತಿಂಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜೋಡೆತ್ತು

  ದರ್ಶನ್ ಮತ್ತು ಯಶ್ ಇಬ್ಬರೂ ಸುಮಲತಾ ಅವರಿಗೆ ತುಂಬಾ ಆಪ್ತರು ಎನ್ನುವ ವಿಚಾರ ಗೊತ್ತಿದೆ. ದರ್ಶನ್ ಅವರನ್ನು ಸುಮಲತಾ ತನ್ನ ಮೊದಲ ಮಗ ಎಂದೇ ಕರೆಯುತ್ತಾರೆ. ಯಶ್ ಅವರನ್ನು ಸಹ ಮಗನ ಹಾಗೆಯೇ ನೋಡಿಕೊಳ್ಳುತ್ತಾರೆ. ಸುಮಲತಾ ಅವರಿಗೆ ಬೆಂಬಲವಾಗಿ ನಿಂತು ಯಶ್ ಮತ್ತು ದರ್ಶನ್ ಇಬ್ಬರೂ ಮಂಡ್ಯ ಚುನಾವಣಾ ಪ್ರಚಾರ ಮಾಡಿದ ರೀತಿ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಇದೀಗ ಮತ್ತೆ ಇಬ್ಬರು ಸ್ಟಾರ್ ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿರುವುದು ಇಬ್ಬರು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

  ಸುಮಲತಾ ಅಂಬರೀಶ್ ಬಗ್ಗೆ

  ಸುಮಲತಾ ಅಂಬರೀಶ್ ಬಗ್ಗೆ

  ಆಗಸ್ಟ್ 27, 1962ರಂದು ಮದ್ರಾಸ್ ನಲ್ಲಿ ಜನಿಸಿದ ಸುಮಲತಾ ಅಂಬರೀಶ್ ಗುಂಟೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಚಿಕ್ಕ ವಯಸ್ಸಿನಲ್ಲೇ ಅಂದರೆ 15 ವರ್ಷದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಮಲತಾ ಅಂಬರೀಶ್ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ಬಳಿಕ ತಮಿಳು, ಕನ್ನಡ, ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಮಿಂಚುವ ಮೂಲಕ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡರು. 90ರ ದಶಕದ ಬಹಬೇಡಿಕೆಯ ನಟಿಯಾಗಿದ್ದ ಸುಮಲತಾ ದಕ್ಷಿಣ ಭಾರತೀಯ ಸಿನಿಮಾರಂಗ ಬಹುತೇಕ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ.

  1991ಲ್ಲಿ ಅಂಬರೀಶ್ ಜೊತೆ ಮದುವೆ

  1991ಲ್ಲಿ ಅಂಬರೀಶ್ ಜೊತೆ ಮದುವೆ

  ಸಿನಿಮಾರಂಗದ ಉತ್ತಂಗದಲ್ಲಿರುವಾಗಲೇ ಸುಮಲತಾ 1991ರಲ್ಲಿ ಕನ್ನಡದ ಸ್ಟಾರ್ ನಟ, ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕರ್ನಾಟಕದ ಸೊಸೆಯಾದರು. ಸುಮಲತಾ ಮತ್ತು ಅಂಬರೀಶ್ ದಂಪತಿಗೆ ಅಭಿಷೇಕ್ ಮಗ ಇದ್ದಾರೆ. ಅಭಿಷೇಕ್ ಕೂಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಮರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ಇದೀಗ ಎರಡನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Actor Darshan, Yash, Upendra and other stars in Sumalatha Ambareesh's birthday party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X