Puneeth Rajkumar Birthday: ಪುನೀತ್‌ ರಾಜ್‌ಕುಮಾರ್‌ ನೆನೆದ ಯಶ್, ಉಪೇಂದ್ರ, ದರ್ಶನ್!

ಮಾರ್ಚ್ 17- 2022, ಇದು ಕರ್ನಾಟಕದ ಜನರ ಪಾಲಿಗೆ ಅಪ್ಪು ಹಬ್ಬ. ಈ ದಿನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಮಾತ್ರ ಅಲ್ಲ, 'ಜೇಮ್ಸ್' ಸಿನಿಮಾ ಜಾತ್ರೆ ಕೂಡ ನಡೆಯುತ್ತಿದೆ. ಸಿನಿಮಾ ನೋಡಿ ಎಲ್ಲರೂ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಇನ್ನು ಇದು ಅಭಿಮಾನಿಗಳ ಪಾಲಿನ ಹಬ್ಬ ಮಾತ್ರ ಅಲ್ಲ. ಸಿನಿಮಾ ಮಂದಿ ಕೂಡ ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬ ಮತ್ತು 'ಜೇಮ್ಸ್' ಸಿನಿಮಾ ನೋಡಿ ಈ ಬಗ್ಗೆ ಮಾತನಾಡುತ್ತಿದ್ದಾರೆ.

Recommended Video

James Craze | ದೇವರ ಜಾಗವನ್ನು ಆಕ್ರಮಿಸಿಕೂಂಡ ಅಪ್ಪು, ಇದು ಅಭಿಮಾನಿಗಳ ಪ್ರೀತಿ | Puneeth Rajkumar

ಇನ್ನು ಕನ್ನಡ ತಾರೆಯರು ಮಾತ್ರವಲ್ಲ ಪುನೀತ್ ರಾಜ್‌ಕುಮಾರ್‌ಗೆ ಪರಭಾಷಾ ತಾರೆಯರು ಕೂಡ ಅಪ್ಪುಗೆ ಶುಭಕೋರಿದ್ದಾರೆ. ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್, ದರ್ಶನ್, ಉಪೇಂದ್ರ ಸೇರಿದಂತೆ ಹಲವು ತಾರೆಯರು ಪುನೀತ್‌ ರಾಜ್‌ಕುಮಾರ್ ನೆನೆದು ಶುಭಕೋರಿದ್ದು, ಭಾವುಕರಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಬಗ್ಗೆ ನಟ ಉಪೇಂದ್ರ ಟ್ವೀಟ್ ಮಾಡಿ, ಅಪ್ಪು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಪುನೀತ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಉಪೇಂದ್ರ 'ಈ ಅಪ್ಪುಗೆಯ ಸವಿ ನೆನಪು ನೂರು ಜನ್ಮ ಕಳೆದರೂ ಜೀವಂತವಾಗೇ ಇರುತ್ತದೆ. ಜನುಮ ದಿನದ ಹಾರ್ದಿಕ ಶುಭಾಶಯಗಳು ದೇವರ ಮಗ ಅಪ್ಪು' ಎಂದು ಬರೆದುಕೊಂಡಿದ್ದಾರೆ.

ಪುನೀತ್‌ಗೆ ರಾಕಿಂಗ್ ಸ್ಟಾರ್ ಶುಭಾಶಯ!

ನಟ ಯಶ್ ಪುನೀತ್‌ ರಾಜ್‌ಕುಮಾರ್ ಜೊತೆಗೆ ಇರುವ ಫೋಟೊ ಒಂದನ್ನು ಹಂಚಿಕೊಂಡು, ಅಪ್ಪು ಬಗ್ಗೆ ವರ್ಣನೆ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. 'ಎಂದೂ ಮರೆಯಾಗದ ನಗು, ಯಾರೊಂದಿಗೂ ಹೋಲಿಸಲಾಗದ ವ್ಯಕ್ತಿತ್ವ, ಎಂದಿಗೂ ನಿಲ್ಲಿಸಲಾಗದ ಶಕ್ತಿ, ಎಂದಿಗೂ ಕಸಿದುಕೊಳ್ಳಲಾಗದ ಶಕ್ತಿ, ಅವರು ಎಂದಿಗೂ ಜೀವಂತ, ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಸರ್.' ಎಂದು ಯಶ್ ಬರೆದುಕೊಂಡಿದ್ದಾರೆ.

ಅಪ್ಪು ನಮ್ಮೊಂದಿಗೆ ಇದ್ದಾರೆ ಎಂದ ನಟ ದರ್ಶನ್!

ನಟ ದರ್ಶನ್ ಕೂಡ ಪುನೀತ್ ರಾಜ್‌ಕುಮಾರ್‌ ಅವರಿಗೆ ಶುಭಕೋರಿ, 'ಜೇಮ್ಸ್' ಚಿತ್ರವನ್ನು ಥಿಯೇಟರ್‌ನಲ್ಲೇ ನೋಡುವಂತೆ ಟ್ವೀಟ್ ಮಾಡಿದ್ದಾರೆ. 'ದೈಹಿಕವಾಗಿ ಇಂದು ನಮ್ಮೊಡನೆ ಇರದಿದ್ದರೂ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿ ನೆಲೆಮಾಡಿರುವ ಪುನೀತ್ ರಾಜ್‌ಕುಮಾರ್‌ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮತ್ತೆ ಕರುನಾಡಲ್ಲೇ ಹುಟ್ಟಿ ಬನ್ನಿ. 'ಜೇಮ್ಸ್' ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ.' ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಮನದಾಳ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ!

ನಟ ರಕ್ಷಿತ್ ಶೆಟ್ಟಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಪುನೀತ್‌ ರಾಜ್‌ಕುಮಾರ್ ಬಗ್ಗೆ ಬರೆದುಕೊಂಡಿದ್ದಾರೆ. 'ಅವರ ವ್ಯಕ್ತಿತ್ವವು ಅವರ ಹೆಸರನ್ನು ಪ್ರತಿಬಿಂಬಿಸುತ್ತದೆ. ಡಾ.ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ನಮ್ಮ ಪ್ರೀತಿಯ ಅಪ್ಪು ಸರ್ ಅವರನ್ನು ಸ್ಮರಿಸುತ್ತಿದ್ದೇವೆ. 'ಜೇಮ್ಸ್' ಚಿತ್ರ ಅವರಂತೆಯೇ ಪ್ರೀತಿ ಪಾತ್ರವಾಗಿದೆ ಎಂದು ನಾನು ಭಾವಿಸುತ್ತೇನೆ. ತಂಡಕ್ಕೆ ನನ್ನ ಶುಭಾಶಯಗಳು' ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

ಅಪ್ಪು ಮತ್ತೆ ಹುಟ್ಟಿ ಬನ್ನಿ ಎಂದ ನಿರ್ದೇಶಕ!

ಇನ್ನು ನಿರ್ದೇಶಕ ಪ್ರೇಮ್ ಅಪ್ಪು ಫೋಟೊ ಹಂಚಿಕೊಂಡು 'ಹ್ಯಾಪಿ ಬರ್ತ್ ಡೇ ಬಾಸ್, ಲವ್ ಯು' ಎಂದು ಬರೆದು ಹೃದಯದ ಚಿನ್ಹೆಗಳನ್ನು ಹಾಕಿದ್ದಾರೆ. ಹಾಗೆ ನಿರ್ದೇಶಕ ತರುಣ್ ಸುಧೀರ್ ಕೂಡ ಟ್ವೀಟ್ ಮಾಡಿದ್ದು 'ಚಿನ್ನದಂತಹ ನುಗುವಿನ ವ್ಯಕ್ತಿ ಪುನೀತ್‌ ರಾಜ್‌ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್.' ಎಂದು ಬರೆದುಕೊಂಡಿದ್ದಾರೆ.

English summary
Darshan, Yash, Upendra, Rakshit Shetty Remember Puneeth Rajkumar on his birth anniversary, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X