ದರ್ಶನ್ ಅಭಿನಯದ ಚಿತ್ರದ ಟೈಟಲ್ 'ಒಡೆಯರ್' ಅಲ್ಲ, ಮತ್ತೇನು?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮತ್ತೊಂದು ಹೊಸ ಸಿನಿಮಾ 'ಒಡೆಯರ್' ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ಆದರೆ, 'ಒಡೆಯರ್' ಸಿನಿಮಾ ಮುಹೂರ್ತ ಆಗುತ್ತೆ ಎನ್ನುವ ವಿಚಾರ ತಿಳಿದ ತಕ್ಷಣವೇ ಮೈಸೂರಿನಲ್ಲಿ ಸಂಘಟನೆಗಳು ಚಿತ್ರತಂಡದ ವಿರುದ್ಧ ಹೋರಾಟ ಆರಂಭಿಸಿದ್ದರು.
ದರ್ಶನ್ ಬರ್ತಡೇ ದಿನ 'ಒಡೆಯರ್' ಸಿನಿಮಾ ಜಾಹೀರಾತು ನೋಡಿ ಮೈಸೂರಿನ ಕ್ರಾಂತಿದಳ ಸಂಘಟನೆಯವರು 'ಒಡೆಯರ್' ಹೆಸರಿನಲ್ಲಿ ಸಿನಿಮಾ ಮಾಡಲು ಬಿಡುವುದಿಲ್ಲ, ಹಾಗೇನಾದರೂ ಸಿನಿಮಾ ಮಾಡಲು ಮುಂದಾದರೆ ಚಿತ್ರೀಕರಣದ ಸೆಟ್ ಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದರು.
ಕ್ರಾಂತಿದಳ ಸಂಘಟನೆ ಇನ್ನು ಒಂದು ಹೆಜ್ಜೆ ಮುಂದು ಹೋಗಿ ಕಳೆದ ವಾರ ಚಿತ್ರತಂಡದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು. ಇವೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದ ಸಿನಿಮಾತಂಡ, ಒಂದೇ ದಿನದಲ್ಲಿ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದೆ. 'ಒಡೆಯರ್' ಎನ್ನುವ ಶೀರ್ಷಿಕೆಯನ್ನು ನಾವು ಉಪಯೋಗಿಸುತ್ತಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದೆ. ಹಾಗಾದರೆ, ದರ್ಶನ್ ಅಭಿನಯದ ಮುಂದಿನ ಚಿತ್ರದ ಹೆಸರೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

'ಒಡೆಯರ್' ದರ್ಶನ್ ಸಿನಿಮಾ ಟೈಟಲ್ ಅಲ್ಲ
'ಯಜಮಾನ' ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ 'ಒಡೆಯರ್' ಎನ್ನುವುದು ಎಲ್ಲೆಡೆ ಸುದ್ದಿ ಆಗಿತ್ತು. ಇನ್ನು ವಿಶೇಷ ಎಂದರೆ ಚಿತ್ರ ಸೆಟ್ಟೇರುವ ಮುನ್ನವೇ ವಿವಾದವನ್ನು ಸೃಷ್ಟಿ ಮಾಡಿತ್ತು. ಆದರೆ, ಚಿತ್ರತಂಡ ನಾವು ಸಿನಿಮಾಗೆ 'ಒಡೆಯರ್' ಎನ್ನುವ ಟೈಟಲ್ ಆಯ್ಕೆ ಮಾಡಿಕೊಂಡಿಲ್ಲ ಎನ್ನುವುದನ್ನು ಖಚಿತ ಪಡಿಸಿದೆ.

'ಒಡೆಯರ್' ಅಲ್ಲ ಮತ್ತೇನು?
'ಒಡೆಯರ್' ಎನ್ನುವ ಟೈಟಲ್ ದರ್ಶನ್ ಸಿನಿಮಾಗೆ ಫಿಕ್ಸ್ ಆಗಿತ್ತು ಎಂದುಕೊಳ್ಳುತ್ತಿದ್ದ ಹಾಗೆಯೇ ಚಿತ್ರತಂಡ ಹೊಸ ಸುದ್ದಿಯನ್ನು ಹೊರಹಾಕಿದೆ. ಸಿನಿಮಾ ನಿರ್ಮಾಪಕರು ಚಿತ್ರಕ್ಕೆ ಶೀರ್ಷಿಕೆ ನೊಂದಣಿ ಮಾಡಿರುವುದು 'ಒಡೆಯ' ಎಂದು. ಆದ್ದರಿಂದ ದರ್ಶನ್ ಅಭಿನಯದ ಚಿತ್ರಕ್ಕೆ 'ಒಡೆಯ' ಎನ್ನುವ ಟೈಟಲ್ ಫಿಕ್ಸ್ ಆಗಲಿದೆ.

ಐದು ವರ್ಷದ ಹಿಂದೆಯೇ ನೊಂದಣಿ
ದರ್ಶನ್ ಅಭಿನಯದ 'ಒಡೆಯ' ಸಿನಿಮಾ ಟೈಟಲ್ ಐದು ವರ್ಷದ ಹಿಂದೆಯೇ ನೊಂದಣಿ ಆಗಿತ್ತಂತೆ. ಸಂದೇಶ್ ನಾಗರಾಜ್ ಅವರ ಬ್ಯಾನರ್ ಅಡಿಯಲ್ಲಿ ಈ ಶೀರ್ಷಿಕೆ ರಿಜಿಸ್ಟರ್ ಆಗಿದೆ.

ನಿರ್ಮಾಪಕರ ಹುಟ್ಟುಹಬ್ಬಕ್ಕೆ ಮುಹೂರ್ತ
'ಒಡೆಯ' ಸಿನಿಮಾ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದಂದು ಸೆಟ್ಟೇರಲಿದೆ. ಎಂ ಡಿ ಶ್ರೀಧರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಮೈಸೂರಿನಲ್ಲಿ ಮುಹೂರ್ತ ಸಮಾರಂಭಕ್ಕೆ ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಲಾಗಿದೆ.


Click it and Unblock the Notifications











