ದರ್ಶನ್-ತರುಣ್ ಚಿತ್ರದ ಟೈಟಲ್ 'ರಾಬರ್ಟ್'
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಅಂತಿಮವಾಗಿದ್ದು, ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಅಧಿಕೃತವಾಗಿ ಘೋಷಣೆಯಾಗಿದೆ.
ಈ ಹಿಂದೆ ಕೇಳಿಬರುತ್ತಿದ್ದ ಸುದ್ದಿಯಂತೆ ದರ್ಶನ್ 53ನೇ ಚಿತ್ರಕ್ಕೆ 'ರಾಬರ್ಟ್' ಎಂದು ಹೆಸರಿಡಲಾಗಿದೆ. ಸದ್ಯ, ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ಹನುಮಂತನ ಹೆಗಲ ಮೇಲೆ ರಾಮ ಕೂತು, ಬಾಣ ಬಿಡುತ್ತಿರುವ ಫೋಟೋ ಈಗ ಚರ್ಚೆಗೆ ಕಾರಣವಾಗಿದೆ.
ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ಸೂಪರ್ ಸಿನಿಮಾ 'ಚೌಕ'ದಲ್ಲಿ ದರ್ಶನ್ ರಾಬರ್ಟ್ ಎಂಬ ಪಾತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅದೇ ಪಾತ್ರವನ್ನಿಟ್ಟು ಈಗ ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಸ್ಕ್ರೀಪ್ಟ್ ಕೆಲಸ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ಆರಂಭದಿಂದ ಶೂಟಿಂಗ್ ಮಾಡಲು ನಿರ್ಧರಿಸಿದೆ. ಇನ್ನುಳಿದಂತೆ ಈ ಚಿತ್ರವನ್ನ ಹೆಬ್ಬುಲಿ ಖ್ಯಾತಿಯ ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡ್ತಿದ್ದಾರೆ.
ಯಜಮಾನ ಮುಗಿಸಿರುವ ದರ್ಶನ್ ಈಗ ಒಡೆಯ ಚಿತ್ರವನ್ನ ಆರಂಭಿಸಿದ್ದಾರೆ. ಅದಾದ ಬಳಿಕ ತರುಣ್ ಚಿತ್ರವನ್ನ ಟೇಕ್ ಆನ್ ಮಾಡಲಿದ್ದಾರೆ. ನಂತರ 'ಗಂಡುಗಲಿ ವೀರಮದಕರಿ' ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ.


Click it and Unblock the Notifications











