ಕ್ರಿಸ್ಮಸ್ ಹಬ್ಬಕ್ಕೆ ದರ್ಶನ್-ತರುಣ್ ಟೀಂ ಕೊಡ್ತಿದೆ ಬಂಪರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಜೋಡಿಯಲ್ಲಿ ಮೂಡಿಬರಲಿರುವ ಚಿತ್ರದ ಟೈಟಲ್ ಏನು ಎಂಬುದು ನಾಳೆ ಬಹಿರಂಗವಾಗಲಿದೆ. ಈಗಾಗಲೇ ಸ್ಕ್ರೀಪ್ಟ್ ಕೆಲಸ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ಆರಂಭದಿಂದ ಶೂಟಿಂಗ್ ಮಾಡಲು ನಿರ್ಧರಿಸಿದೆ.
ಇದೀಗ, D-53 ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದ್ದು, ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರ ಬೆಳಿಗ್ಗೆ 10.05ಕ್ಕೆ ಘೋಷಿಸಲಿದ್ದಾರೆ.
ಸದ್ಯಕ್ಕೆ ಚಿತ್ರದ ಟೈಟಲ್ ಏನು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ, 'ರಾಬರ್ಟ್' ಅಥವಾ 'ಕಾಟೇರಾ' ಎಂಬ ಎರಡು ಶೀರ್ಷಿಕೆ ನಿರ್ದೇಶಕರ ಬಳಿ ಇದೆ. ಅದರಲ್ಲಿ ಯಾವುದಾದರೂ ಒಂದು ಫೈನಲ್ ಆಗಬಹುದು ಎನ್ನಲಾಗುತ್ತಿದೆ.

ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ಸೂಪರ್ ಸಿನಿಮಾ 'ಚೌಕ'ದಲ್ಲಿ ದರ್ಶನ್ ರಾಬರ್ಟ್ ಎಂಬ ಪಾತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅದೇ ಪಾತ್ರವನ್ನಿಟ್ಟು ಈಗ ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನುಳಿದಂತೆ ಈ ಚಿತ್ರವನ್ನ ಹೆಬ್ಬುಲಿ ಖ್ಯಾತಿಯ ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡ್ತಿದ್ದಾರೆ. ಯಜಮಾನ ಮುಗಿಸಿರುವ ದರ್ಶನ್ ಈಗ ಒಡೆಯ ಚಿತ್ರವನ್ನ ಆರಂಭಿಸಿದ್ದಾರೆ. ಅದಾದ ಬಳಿಕ 'ಗಂಡುಗಲಿ ವೀರಮದಕರಿ' ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಈ ಮಧ್ಯೆ ತರುಣ್ ಚಿತ್ರವನ್ನ ಟೇಕ್ ಆನ್ ಮಾಡಲಿದ್ದಾರೆ.


Click it and Unblock the Notifications











