ನಟ ದರ್ಶನ್ ಬರ್ತ್‌ಡೇ ಸಿಡಿಪಿ ರಿಲೀಸ್; ಡಿಸೈನ್ ಮಾಡಿದ್ಯಾರು, ಏನಿದರ ಅರ್ಥ?

ನಟ ದರ್ಶನ್ ಹುಟ್ಟುಹಬ್ಬ ಸಂಭ್ರಮ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಬಾರಿ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಲ್ಲ ಎಂದು ದರ್ಶನ್ ಹೇಳಿದ್ದಾರೆ. ಈ ಬಗ್ಗೆ ಮನವಿಯನ್ನು ಸಹ ಮಾಡಿದ್ದಾರೆ. ಸದ್ಯ ದರ್ಶನ್ ಬರ್ತ್‌ಡೇ ಕಾಮನ್ ಡಿಪಿ ಡಿಸೈನ್ ಮಾಡಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ದರ್ಶನ್ ಆಪ್ತ, ನಟ ಧನ್ವೀರ್ ಗೌಡ ಈ ಕಾಮನ್ ಡಿಪಿ ಲಾಂಚ್ ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಸೇರಿದಂತೆ ದರ್ಶನ್ ಆಪ್ತರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್‌ನಲ್ಲಿ ಡಿಪಿ ಹಾಕಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಇದು ಸಖತ್ ವೈರಲ್ ಆಗುತ್ತಿದೆ. ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕಾಮನ್ ಡಿಪಿ ಡಿಸೈನ್ ಮಾಡಿ ವೈರಲ್ ಮಾಡುವುದು ಹೊಸದೇನು ಅಲ್ಲ.

Darshan s Birthday Dhanveer Gowda Reveals The Common DP

ದರ್ಶನ್ ಅಭಿಮಾನಿಗಳು ಈ ಹಿಂದೆ ಭಿನ್ನ ವಿಭಿನ್ನ ಕಾನ್ಸೆಪ್ಟ್‌ನಲ್ಲಿ ದರ್ಶನ್ ಬರ್ತ್‌ಡೇ ಡಿಪಿ ಕ್ರಿಯೇಟ್ ಮಾಡಿದ್ದರು. ಈ ಹಿಂದೆ ಕೂಡ ದರ್ಶನ್ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಪರಿವರ್ತನ್ ವಿಭಿನ್ನ ಕಾನ್ಸೆಪ್ಟ್‌ನಲ್ಲಿ ಡಿಪಿಗಳನ್ನು ಡಿಸೈನ್ ಮಾಡಿದ್ದರು. ಅದಕ್ಕೆಲ್ಲಾ ಮೆಚ್ಚುಗೆ ಸಿಕ್ಕಿತ್ತು. ಈ ಬಾರಿ ಕೂಡ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಹಾಗಾಗಿ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ನಿರಾಕರಿಸಿದ್ದಾರೆ. ಆದರೆ ಸಂಭ್ರಮ ಹೆಚ್ಚಿಸಲು 'ಡೆವಿಲ್' ಚಿತ್ರದ ಟೀಸರ್ ಬರ್ತಿದೆ.

ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಬೇಕಿದೆ. ವರ್ಷದ ಹಿಂದೆ ಒಂದು ವಾರದ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಬಳಿಕ ದರ್ಶನ್ ಕೈಗೆ ಪೆಟ್ಟಾಗಿ ಚಿತ್ರೀಕರಣ ನಿಂತಿತ್ತು. ಚೇತರಿಸಿಕೊಂಡು ಮತ್ತೆ ಶೂಟಿಂಗ್ ಆರಂಭಿಸುವ ವೇಳೆಗೆ ರೇಣುಕಾಸ್ವಾಮಿ ಪ್ರಕರಣ ಬಯಲಾಗಿತ್ತು.

ಸಾಕಷ್ಟು ಸಿನಿಮಾಗಳನ್ನು ದರ್ಶನ್ ಒಪ್ಪಿಕೊಂಡಿದ್ದಾರೆ. 'ಡೆವಿಲ್' ಸಿನಿಮಾ ಬಳಿಕ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಬಳಿಕ 'ಸಿಂಧೂರ ಲಕ್ಷ್ಮಣ' ಸಿನಿಮಾ ಲೈನಪ್ ಆಗಿದೆ. ತೆಲುಗು ನಿರ್ಮಾಪಕರ ಒಂದು ಚಿತ್ರಕ್ಕೂ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸೂರಪ್ಪ ಬಾಬು ಜೊತೆಗೂ ಒಂದು ಸಿನಿಮಾ ಮಾಡಲು ಅಡ್ವಾನ್ಸ್ ಪಡೆದಿದ್ದರು. ಆದರೆ ಅದನ್ನು ವಾಪಸ್ ಕೊಟ್ಟಿದ್ದಾರೆ. D58 ಚಿತ್ರದಿಂದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಹೊರ ಬರುವುದು ಬಹುತೇಕ ಖಚಿತವಾಗಿದೆ.

More from Filmibeat

English summary
Actor Darshan's Birthday 2025 Common DP goes viral
Read more about: darshan sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X