ವಿನಯದ ಪರ್ವತ ಅಭಿಮಾನಿಗಳ ಯಜಮಾನ ದರ್ಶನ್

By Pavithra

ದರ್ಶನ್ ಅಭಿನಯಿಸುತ್ತಿರುವ 52ನೇ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ದರ್ಶನ್ ಇನ್ನು ಮುಂದೆ ಅಭಿಮಾನಿಗಳ ಬಾಯಲ್ಲಿ ಯಜಮಾನ ಎಂದು ಕರೆಸಿಕೊಳ್ಳಲಿದ್ದಾರೆ. ಅದಕ್ಕೆ ಕಾರಣ ಅವರ ಮುಂದಿನ ಸಿನಿಮಾದ ಹೆಸರು ಯಜಮಾನ. ಶೈಲಾಜ ನಾಗ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರದ ಟೈಟಲ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ.

ಶೀರ್ಷಿಕೆ ಜೊತೆಯಲ್ಲಿ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಿರುವ ನಿರ್ಮಾಪಕರು ಟೀಸರ್ ನಲ್ಲಿ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನ ಅಭಿಮಾನಿಗಳಿಗಾಗಿ ಹೊತ್ತು ತಂದಿದ್ದಾರೆ. ಚಿಕ್ಕದೊಂದು ಟೀಸರ್ ಮತ್ತು ದರ್ಶನ್ ಅವರ ಒಂದು ಸ್ಟಿಲ್ ಯಜಮಾನನ ವ್ಯಕ್ತಿತ್ವ ಹೇಳುತ್ತಿದೆ.

ಟೈಟಲ್ ಟೀಸರ್ ನಲ್ಲಿ ಕನ್ನಡದ ಸ್ಟಾರ್ ನಟರೊಬ್ಬರ ಧ್ವನಿ ಕೂಡ ಇದೆ. ಹಾಗಾದ್ರೆ ಟೀಸರ್ ನ ವಿಶೇಷತೆಗಳೇನು? ಯಜಮಾನನ ಬಗ್ಗೆ ಅಭಿಮಾನಿಗಳಿಗೆ ತಿಳಿಸಿಕೊಡಲು ಬಂದ ಆ ನಟ ಯಾರು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಯಜಮಾನ ಟೈಟಲ್ ಟೀಸರ್ ಬಿಡುಗಡೆ

ಯಜಮಾನ ಟೈಟಲ್ ಟೀಸರ್ ಬಿಡುಗಡೆ

ದರ್ಶನ್ ಅಭಿನಯದ ಮುಂದಿನ ಚಿತ್ರ ಯಜಮಾನ ಚಿತ್ರತಂಡದ ಕಡೆಯಿಂದ ಹುಟ್ಟುಹಬ್ಬದ ವಿಶೇಷವಾಗಿ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಫೆ. 18 ರಿಂದ ಯಜಮಾನ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

ನಂಬಿಕೆಯ ಇನ್ನೊಂದು ಹೆಸರು ಯಜಮಾನ

ನಂಬಿಕೆಯ ಇನ್ನೊಂದು ಹೆಸರು ಯಜಮಾನ

ಶೈಲಜಾ ನಾಗ್ ನಿರ್ಮಾಣದ ಯಜಮಾನ ಸಿನಿಮಾದ ಟೈಟಲ್ ಟೀಸರ್ ನಲ್ಲಿ ಯಜಮಾನ ಎಂದರೆ ಏನು? ಎನ್ನುವುದನ್ನ ಪದಗಳಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ಅದರಲ್ಲಿ ಮೊದಲಿಗೆ ಬರುವುದು 'ನಂಬಿಕೆಯ ಇನ್ನೊಂದು ಹೆಸರು'

ಯಜಮಾನ ಎಂದರೆ ವಿನಯದ ಪರ್ವತ

ಯಜಮಾನ ಎಂದರೆ ವಿನಯದ ಪರ್ವತ

ತೆರೆ ಮೇಲಿನ ಯಜಮಾನ ವಿನಯದ ದಿಂದ ನಡೆದುಕೊಳ್ಳುವಂತಹ ಪಾತ್ರವಾಗಿರುತ್ತದೆ ಎನ್ನುವುದನ್ನು ಚಿತ್ರತಂಡ ಈ ಮೂಲಕ ತಿಳಿಸುತ್ತಿದೆ. ಹಾಗಾಗಿ ವಿನಯದ ಪರ್ವತ ಎನ್ನುವ ಹೆಸರನ್ನ ಬಳಸಲಾಗಿದೆ.

ಅಭಿಮಾನಿಗಳ ಆಸ್ತಿ ಯಜಮಾನ

ಅಭಿಮಾನಿಗಳ ಆಸ್ತಿ ಯಜಮಾನ

ಸಿನಿಮಾದಲ್ಲಿ ಹಾಗೂ ನಿಜ ಜೀವನದಲ್ಲಿ ದರ್ಶನ್ ಸ್ನೇಹದ ಸಾಮ್ರಾಟ ಅವರ ಸುತ್ತಾ-ಮುತ್ತಾ ಸಾಕಷ್ಟು ಸ್ನೇಹಿತರು ಸದಾ ಇರುತ್ತಾರೆ. ಅದರ ಜೊತೆಯಲ್ಲಿ ಕೋಟ್ಯಾಂತರ ಅಭಿಮಾನಿಗಳು ದರ್ಶನ್ ಅವರಿಗಿದ್ದಾರೆ.

ದರ್ಶನ್ ಶತಕೋಟಿಗೊಬ್ಬ

ದರ್ಶನ್ ಶತಕೋಟಿಗೊಬ್ಬ

ಯಜಮಾನ ಟೈಟಲ್ ಟೀಸರ್ ಸಿನಿಮಾ ಹಾಗೂ ದರ್ಶನ್ ಅವರ ಬದುಕು ಎರಡಕ್ಕೂ ಹೋಲಿಕೆ ಮಾಡುವಂತಿದೆ. ದರ್ಶನ್ ಜೀವನದಲ್ಲಿ ಬದುಕುತ್ತಿರುವ ರೀತಿಯೂ ಟೀಸರ್ ನಲ್ಲಿ ಹೇಳಿರುವಂತೆಯೇ ಇದೆ.

ಯಜಮಾನನಿಗೆ ಶುಭಾಶಯ ಕೋರಿದ ಆಕ್ಷನ್ ಪ್ರಿನ್ಸ್

ಯಜಮಾನನಿಗೆ ಶುಭಾಶಯ ಕೋರಿದ ಆಕ್ಷನ್ ಪ್ರಿನ್ಸ್

ದರ್ಶನ್ ಅಭಿನಯದ ಯಜಮಾನ ಸಿನಿಮಾದ ಟೀಸರ್ ವಿಭಿನ್ನವಾಗಿದೆ. ಬಳಕೆಯಾಗಿರುವ ಪದಗಳು ಮನಸ್ಸಿಗೆ ಮುಟ್ಟುವಂತಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ಗೆ ಹಿನ್ನಲೆ ಧ್ವನಿ ನೀಡಿ ಶುಭಾಶಯ ಕೋರಿದ್ದಾರೆ.

More from Filmibeat

English summary
Darshan's birthday special Yajamana movie title teaser has been released. Actor Dhruv Sarja has given background voice for Yajamana title teaser. The film is directed by P Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X