ಮಳವಳ್ಳಿಯಲ್ಲಿ ದರ್ಶನ್ 'ಡೆವಿಲ್' ಡೈಲಾಗ್ ಹವಾ; ವೀಡಿಯೋ ಫುಲ್‌ ವೈರಲ್

ನಟ ದರ್ಶನ್ ಮತ್ತೆ ಸಹಜ ಜೀವನಕ್ಕೆ ಮರಳಿದ್ದಾರೆ. ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವುದು ಮಾತ್ರವಲ್ಲ ಆಪ್ತರ ಕಾರ್ಯಕ್ರಮಗಳಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇನ್ನು ಕಾಣಿಸಿಕೊಳ್ಳುತ್ತಿಲ್ಲ. ಸದ್ಯ 'ಡೆವಿಲ್' ಸಿನಿಮಾ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.

ಮಿಲನಾ ಪ್ರಕಾಶ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಡೆವಿಲ್'. ಈ ವರ್ಷವೇ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ ಟಾಕಿ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳು ಹಾಗೂ ಆಕ್ಷನ್ ಸೀಕ್ವೆನ್ಸ್ ಸೆರೆಹಿಡಿಯಬೇಕಿದೆ. ಹಾಡುಗಳ ಚಿತ್ರೀಕರಣಕ್ಕಾಗಿ ಮುಂದಿನ ತಿಂಗಳು ಚಿತ್ರತಂಡ ವಿದೇಶಕ್ಕೆ ಹಾರಲಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಇತ್ತೀಚೆಗೆ ವಿದೇಶಕ್ಕೆ ತೆರಳಲು ಅನುಮತಿ ಕೋರಿ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ನಟ ದರ್ಶನ್ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸಹ ಅನುಮತಿ ನೀಡಿದೆ.

Darshan s Comeback with Devil Creates Buzz Iconic Dialogue Steals Spotlight

ಕಳೆದ ವರ್ಷ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಮಳವಳ್ಳಿ ಸೇರಿ ಸಾಕಷ್ಟು ಕಡೆಗಳಲ್ಲಿ ಸುತ್ತಾಡಿ ಮತ ಯಾಚಿಸಿದ್ದರು. ಈ ವೇಳೆ ಅಭಿಮಾನಿಗಳ ಕೋರಿಕೆ ಮೇರೆಗೆ 'ಡೆವಿಲ್' ಚಿತ್ರದ ಖಡಕ್ ಡೈಲಾಗ್ ಹೇಳಿ ರಂಜಿಸಿದ್ದರು. ಆ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಒಂದೂವರೆ ವರ್ಷದ ಹಿಂದೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಡೆವಿಲ್' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಅದರಲ್ಲಿದ್ದ ಡೈಲಾಗ್ ಅಭಿಮಾನಿಗಳ ಗಮನ ಸೆಳೆದಿತ್ತು. ಅದೇ ಡೈಲಾಗ್ ಅನ್ನು ದರ್ಶನ್ ಅಂದು ಹೇಳಿದ್ದರು.

"ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು, ಫೋಟೋ ತೆಗೆಯಲು ಅದಕ್ಕೆ ಬಲು ಕೋಪ ಬರುವುದು, ಫೋಟೋ ತೆಗೆದ ಕೈಯ ಪಾಪು ಮುರಿದು ಬಿಡುವುದು, ಸರಸು.... ಪಾಪು ಹೆಸರು ಕೇಳಿಲ್ವಾ.. ಹಹ್ಹಹ".. ಎನ್ನುವ ಡೈಲಾಗ್ ಸಖತ್ ಟ್ರೆಂಡ್‌ ಹುಟ್ಟಾಕ್ಕಿತ್ತು. ಅದೇ ಡೈಲಾಗ್ ಅನ್ನು ಇದೀಗ ಅಭಿಮಾನಿಗಳು ಮತ್ತೆ ಕೇಳಿ ಎಂಜಾಯ್ ಮಾಡುತ್ತಿದ್ದಾರೆ. ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ. 'ಡೆವಿಲ್' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತದೆ ಎನ್ನುತ್ತಿದ್ದಾರೆ.

ರಚನಾ ರೈ 'ಡೆವಿಲ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಮಹೇಶ್ ಮಂಜ್ರೇಕರ್, ಅಚ್ಯುತ್‌ಕುಮಾರ್ ಸೇರಿ ದೊಡ್ಡ ತಾರಾಗಣವಿದೆ. ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಇನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಾಗಾಗಿ ಆಕ್ಷನ್ ಸನ್ನಿವೇಶಗಳನ್ನು ನಿಧಾನವಾಗಿ ಸೆರೆಹಿಡಿಯಲು ತೀರ್ಮಾನಿಸಲಾಗಿದೆ. ಅದನ್ನು ಮುನ್ನ ಡಬ್ಬಿಂಗ್ ಮುಗಿಸಿ ಸಾಂಗ್ಸ್ ಶೂಟ್ ಮಾಡಲು ಮುಂದಾಗಿದೆ.

'ಡೆವಿಲ್' ಸಿನಿಮಾ ತಡವಾಗಿ ದರ್ಶನ್ ಮುಂದೆ ನಟಿಸಬೇಕಿರುವ ಸಿನಿಮಾಗಳು ಮುಂದಕ್ಕೆ ಹೋಗುವಂತಾಗಿದೆ. ಈ ಸಿನಿಮಾ ಬೆನ್ನಲ್ಲೇ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಕೆವಿಎನ್ ಸಂಸ್ಥೆ ಆ ಚಿತ್ರವನ್ನು ನಿರ್ಮಾಣ ಮಾಡಲಿದೆ. ಬಳಿಕ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಬೇಕಿದೆ. ತರುಣ್ ಸುಧೀರ್ ನಿರ್ದೇಶನದ ಆ ಚಿತ್ರಕ್ಕೆ ಶೈಲಜಾ ನಾಗ್ ಬಂಡವಾಳ ಹೂಡಲಿದ್ದಾರೆ. ಇನ್ನು ಕೆಲ ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ಸಿನಿಮಾ ಮಾಡಲು ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಡೆವಿಲ್' ಸಿನಿಮಾ ಗೆಲುವು ನಟ ದರ್ಶನ್‌ಗೆ ಬಹಳ ಮುಖ್ಯ ಎನ್ನವಂತಾಗಿದೆ..

More from Filmibeat

English summary
Devil film Dialogue Creates Social Media Buzz as Darshan Gets Back to Work;
Read more about: darshan devil sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X