Devil Making: 'ಡೆವಿಲ್' ಚಿತ್ರದಲ್ಲಿ ದರ್ಶನ್ ಪುತ್ರ ವಿನೀಶ್?; ಆ ಸೀನ್ ನೋಡಿ ಫ್ಯಾನ್ಸ್ ಫಿದಾ

ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಎರಡು ಹಾಡುಗಳನ್ನು ಮಾತ್ರ ಸೆರೆ ಹಿಡಿಯಬೇಕಿದೆ. ಶೀಘ್ರದಲ್ಲೇ ಚಿತ್ರತಂಡ ವಿದೇಶಕ್ಕೆ ಹೊರಡಲಿದೆ. ಇದೆಲ್ಲದರ ನಡುವೆ ಚಿತ್ರದ ಜಬರ್ದಸ್ತ್ ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ.

ಮಾರ್ಚ್ ಕೊನೆ ವಾರದಲ್ಲಿ 'ಡೆವಿಲ್' ಚಿತ್ರತಂಡ ರಾಜಸ್ಥಾನಕ್ಕೆ ತೆರಳಿತ್ತು. ಉದಯಪುರ ರಾಫೆಲ್ಸ್‌ ಹೋಟೆಲ್‌ನಲ್ಲಿ 10 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಆ ಮೇಕಿಂಗ್ ಝಲಕ್ ಈಗ ರಿಲೀಸ್ ಆಗಿದೆ. ಬಹಳ ಅದ್ಧೂರಿಯಾಗಿ ಚಿತ್ರೀಕರಣ ನಡೆದಿರುವುದು ಗೊತ್ತಾಗುತ್ತಿದೆ. ದರ್ಶನ್ ಜೊತೆಗೆ ರಚನಾ ರೈ, ಮಹೇಶ್ ಮಂಜ್ರೆಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಂಡ್ರೆ ಮತ್ತು ಚಂದನ್ ಗೌಡ ಆ ಶೆಡ್ಯೂಲ್‌ನಲ್ಲಿ ಭಾಗಿ ಆಗಿ ನಟಿಸಿದ್ದರು. ಮೇಕಿಂಗ್ ವೀಡಿಯೋದಲ್ಲಿ ಅದನ್ನು ನೋಡಬಹುದು.

Darshan s Devil Nears Completion Stunning Making Video Goes Viral

ಪಕ್ಕಾ ಕಮರ್ಷಿಯಲ್ ಸಿನಿಮಾ 'ಡೆವಿಲ್' ಎನ್ನುವುದು ಗೊತ್ತಾಗುತ್ತಿದೆ. ಇದು ನಿರ್ದೇಶಕ ಪ್ರಕಾಶ್ ಅವರ ಶೈಲಿಯ ಸಿನಿಮಾ. ಜೊತೆಗೆ ದರ್ಶನ್ ಅಭಿಮಾನಿಗಳು ಕೇಳುವ ಕಮರ್ಷಿಯಲ್ ಅಂಶಗಳು ಇರಲಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಬಹಳ ಸದ್ದು ಮಾಡ್ತಿದೆ. ಸೆಪ್ಟೆಂಬರ್ ಕೊನೆ ವಾರದಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.

'ಡೆವಿಲ್' ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಸ್ವತಃ ನಿರ್ದೇಶಕ ಪ್ರಕಾಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟಾಕಿ ಭಾಗದ ಚಿತ್ರೀಕರಣ ಮುಗಿದಿರುವ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಿದೆ. ಹಾಡುಗಳ ಜೊತೆಗೆ ಆಕ್ಷನ್ ಸನ್ನಿವೇಶವನ್ನು ಕೂಡ ಸೆರೆ ಹಿಡಿಯಬೇಕಿದೆ. ಉದಯಪುರ ಶೆಡ್ಯೂಲ್‌ನಲ್ಲಿ ಸಣ್ಣದೊಂದು ಆಕ್ಷನ್ ಸೀಕ್ವೆನ್ಸ್ ಶೂಟ್ ಮಾಡಿರುವುದು ಮೇಕಿಂಗ್ ವೀಡಿಯೋದಲ್ಲಿ ಗೊತ್ತಾಗುತ್ತಿದೆ.

ವಿನೋದ್ ಮಾಸ್ಟರ್ ನಿರ್ದೇಶನದಲ್ಲಿ ಸಣ್ಣ ಮಟ್ಟದ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಲಾಗಿದೆ. ಕಾಮಿಡಿ, ಆಕ್ಷನ್ ಜೊತೆಗೆ ಚಿತ್ರದ ಬಹುಮುಖ ಸನ್ನಿವೇಶಗಳನ್ನು ಅಲ್ಲೇ ಸೆರೆಹಿಡಿದಿದ್ದಾರೆ. ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ದರ್ಶನ್ ಶವರ್ ಕೆಳಗೆ ಸ್ನಾನ ಮಾಡುತ್ತಾ ನಿಂತಿರುವ ಫ್ರೇಮ್ ಒಂದು ಅಭಿಮಾನಿಗಳ ಗಮನ ಸೆಳೆದಿದೆ. ಅದರ ಸ್ಕ್ರೀನ್‌ ಶಾಟ್ ತೆಗೆದು ವೈರಲ್ ಮಾಡುತ್ತಿದ್ದಾರೆ. ಇನ್ನು ದರ್ಶನ್ ಪುತ್ರ ವಿನೀಶ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನ ಮೂಡಿದೆ.

ವಿನೀಶ್ ಮೇಕಪ್ ಮಾಡಿಕೊಳ್ಳುತ್ತಾ ಹೇರ್‌ಸ್ಟೈಲ್ ಸರಿ ಮಾಡಿಕೊಳ್ಳುತ್ತಿರುವುದನ್ನು ಕೂಡ 'ಡೆವಿಲ್' ಮೇಕಿಂಗ್ ಝಲಕ್‌ನಲ್ಲಿ ನೋಡಬಹುದು. ಈ ಹಿಂದೆ 'ಐರಾವತ' ಹಾಗೂ 'ಯಜಮಾನ' ಚಿತ್ರದಲ್ಲಿ ತಂದೆ ಜೊತೆ ವಿನೀಶ್ ಮಿಂಚಿದ್ದು ಗೊತ್ತೇಯಿದೆ. ಈಗ 'ಡೆವಿಲ್' ಚಿತ್ರದಲ್ಲೂ ನಟಿಸಿದ್ದಾನಾ ಎನ್ನುವುದನ್ನು ಕಾದು ನೋಡಬೇಕಿದೆ. ಯಾವ ಪಾತ್ರ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಇನ್ನು ಉದಯಪುರ ಶೆಡ್ಯೂಲ್‌ಗೆ ತಂಡದ ಜೊತೆ ವಿಜಯಲಕ್ಷ್ಮಿ ದರ್ಶನ್ ಕೂಡ ತೆರಳಿದ್ದರು. ಮೇಕಿಂಗ್‌ ವೀಡಿಯೋದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಪೋಸ್ಟರ್‌, ಟೀಸರ್‌ ಬಳಿಕ ಇದೀಗ ಮೇಕಿಂಗ್ ವೀಡಿಯೋ ಮೂಲಕ 'ಡೆವಿಲ್' ಸಿನಿಮಾ ಸದ್ದು ಮಾಡ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸರ್‌ಪ್ರೈಸ್‌ಗಳು ಕಾದಿದೆ. ಸಾಂಗ್ಸ್ ಜೊತೆಗೆ ಟ್ರೈಲರ್ ಕೂಡ ರಿಲೀಸ್ ಆಗಬೇಕಿದೆ. 'ಡೆವಿಲ್' ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿತ್ರದ ಓಟಿಟಿ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆಯಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮನಸ್ಸು ಮಾಡಿದೆ. ಸಾಕಷ್ಟು ಸಿಜಿ ವರ್ಕ್ ಇರುವುದರಿಂದ ಸಿನಿಮಾ ತಡವಾಗುತ್ತಿದೆ.

More from Filmibeat

English summary
Darshan devil A jaw-dropping making video from the Udaipur schedule
Read more about: darshan devil sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X