ತನ್ನ ತಪ್ಪಿಗೆ ಕೈ ಮುಗಿದು ಕ್ಷಮೆ ಕೇಳಿದ ದರ್ಶನ್ ಅಭಿಮಾನಿ

By ಫಿಲ್ಮಿಬೀಟ್ ಡೆಸ್ಕ್

ಸ್ಟಾರ್ ನಟರ ಅಭಿಮಾನಿಗಳ ನಡುವೆ ಕಿರಿಕ್, ಕೆಸರೆರಚಾಟ ಹೊಸದೇನು ಅಲ್ಲ. ತಮ್ಮ ನಟ ಗ್ರೇಟ್ ಎಂದು ಕೊಚ್ಚಿಕೊಳ್ಳುವ ಭರದಲ್ಲಿ ಮತ್ತೊಬ್ಬರನ್ನು ನಿಂದಿಸುವ ಕೆಲಸ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಇತ್ತೀಚೆಗೆ ಫ್ಯಾನ್ಸ್ ವಾರ್ ಹೆಚ್ಚಾಗಿಬಿಟ್ಟಿದೆ. ಇನ್ನು ಬಾಯಿಗೆ ಬಂದಂತೆ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಬಹಿರಂಗವಾಗಿ ಮಾಧ್ಯಮಗಳ ಮುಂದೆಯೇ ಪುಂಡಾಟ ಪ್ರದರ್ಶಿಸುತ್ತಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆ ನಡೆಸಿತ್ತು. ಈ ವೇಳೆ ಕೆಲ ಅಭಿಮಾನಿಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ರಾದ್ಧಾಂತ ಮಾಡಿದ್ದರು. ಈ ಬಗ್ಗೆ ನಟ ಪ್ರಥಮ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೂಡ ದರ್ಶನ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಹಾಗಾಗಿ ಚೇತನ್ ಎಂಬ ದರ್ಶನ್ ಅಭಿಮಾನಿ ಇಬ್ಬರನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

Darshan s fan apologizes to Umapathy srinivas and Pratham for his bad comments

ತಮಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ಪ್ರಥಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೆಲ ಅಂಧಾಭಿಮಾನಿಗಳು ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದರು. "ಇನ್ಮೇಲೆ ನನಗೆ ಬರೋ ಕಾಲ್ msg ಅಥವಾ social media warning ಎಲ್ಲವೂ ಪೋಲೀಸರು ನೋಡಿಕೊಳ್ತಾರೆ" ಎಂದು ಪ್ರಥಮ್ ಪೋಸ್ಟ್ ಮಾಡಿದ್ದರು.

ಇದೀಗ ಪ್ರಥಮ್, ಉಮಾಪತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಚೇತನ್ ಎಂಬಾತನನ್ನು ಬಸವೇಶ್ವರ ನಗ ಪೊಲೀಸರು ವಶಕ್ಕೆ ಪಡೆದು ತಕ್ಕ ಪಾಠ ಕಲಿಸಿದ್ದಾರೆ. ಅಭಿಮಾನಿಗಳನ್ನು ಪ್ರಚೋದಿಸಿದ ಆರೋಪ ಆತನ ಮೇಲಿದೆ. ಆತ ಕ್ಷಮೆ ಕೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ಹಂಚಿಕೊಂಡು ಪ್ರಥಮ್ ಹೊಸದಾಗಿ ಮತ್ತೆ ಪೋಸ್ಟ್ ಮಾಡಿದ್ದಾರೆ.

"ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ. ನಮ್ಮ ಫೋನ್ ಪೊಲೀಸ್ ವಶಪಡಿಸಿಕೊಂಡು ಎಲ್ಲಾ ಕಾಮೆಂಟ್ಸ್, ಮೆಸೇಜ್‌ನ ಗಮನಿಸುತ್ತಿದ್ದಾರೆ. ಯಾರಿಗೋಸ್ಕರವೋ ದಯವಿಟ್ಟು ನಿಮ್ಮ‌ಲೈಫ್‌ನ ಹಾಳುಮಾಡಿಕೊಳ್ಳಬೇಡಿ; ಕನ್ನಡಕ್ಕಾಗಿ, ಕಾವೇರಿಗಾಗಿ ಬೇಕಿದ್ರೆ ಜೈಲಿಗೆ ಹೋಗಿ. ಪುಂಡಾಟ ಆಡ್ಕೊಂಡು ನಿಮ್ ಕುಟುಂಬ ಬೀದಿಗೆ ತರಬೇಡಿ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ" ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

"ನನ್ನ ಹೆಸರು ಚೇತನ್. ನಾನು ದರ್ಶನ್ ಅಭಿಮಾನಿ. ಅವತ್ತು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಬಳಿ ಹೋಗಿದ್ದೆ. ಉಮಾಪತಿ ಹಾಗೂ ಪ್ರಥಮ್ ಅವರ ಬಗ್ಗೆ ಮಾತನಾಡಿದ್ದೆ. ಕಾನೂನು ಪ್ರಕಾರ ಏನಿದೆ, ನಾನು ಅವರಿಗೆ ತಲೆ ಬಾಗುತ್ತೇನೆ. ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿಬಿಡಿ" ಎಂದು ಕೇಳಿಕೊಂಡಿದ್ದಾರೆ.

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಸುತ್ತಾ ದರ್ಶನ್ ಅಭಿಮಾನಿಗಳು ಜಮಾಯಿಸಿ ಜೈಕಾರ ಹಾಕಿದ್ದರಿಂದ ಸಾಕಷ್ಟು ಸಮಸ್ಯೆ ಆಗಿತ್ತು. ಕೆಲವರು ಮಾಧ್ಯಮದವರ ಮೇಲೆ ಕೂಡ ಹಲ್ಲೆ ಮಾಡಲು ಯತ್ನಿಸಿದರು. ಪೊಲೀಸರು ಲಘು ಲಾಠಿ ಪ್ರಹಾರ ಸಹ ಮಾಡಿದ್ದರು. ಬಳಿಕ ಇದೇ ಕಾರಣಕ್ಕೆ ಠಾಣೆಯ ಸುತ್ತಾ ಶಾಮಿಯಾನ ಹಾಕಿ ವಿಚಾರಣೆ ನಡೆಸುವಂತಾಗಿತ್ತು.

More from Filmibeat

English summary
Darshan's fan Apologizes over Using Abusive Words about pratham and umapathy
Read more about: darshan pratham umapathy srinivas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X