ಫಾರ್ಮ್‌ಹೌಸ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು; ದರ್ಶನ್‌ಗೆ ಕಾದಿದ್ಯಾ ಸಂಕಷ್ಟ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗುತ್ತಿದ್ದಂತೆ ಅವರ ವಿರುದ್ಧ ಇನ್ನು ಹಲವು ಆರೋಪಗಳು ಕೇಳಿ ಬರ್ತಿದೆ. ದರ್ಶನ್ ಅಂಡ್ ಗ್ಯಾಂಗ್‌ನಿಂದ ತಮಗಾದ ಸಮಸ್ಯೆಗಳ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಇದೀಗ ದರ್ಶನ್ ಒಡೆತನದ ದುರ್ಗಾ ಫಾರ್ಮ್‌ಹೌಸ್ ರೈಟರ್ ಶ್ರೀಧರ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಈಗ ಚರ್ಚೆ ಶುರುವಾಗಿದೆ.
ಮೈಸೂರಿನ ಟೀ. ನರಸೀಪುರ ರಸ್ತೆಯಲ್ಲಿ ದರ್ಶನ್ ಫಾರ್ಮ್ ಹೌಸ್ ಇರೋದು ಗೊತ್ತೇಯಿದೆ. ಆದರೆ ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ಬಗ್ಗನದೊಡ್ಡಿಯಲ್ಲಿ ಮತ್ತೊಂದು ಫಾರ್ಮ್‌ಹೌಸ್ ನಿರ್ಮಾಣ ಮಾಡಿಸುತ್ತಿದ್ದಾರೆ ದರ್ಶನ್ ಎಂದು ವರದಿಯಾಗಿದೆ. ಈ ದುರ್ಗಾ ಫಾರ್ಮ್ ಹೌಸ್‌ನಲ್ಲೇ ರೈಟರ್ ಆಗಿದ್ದ ಶ್ರೀಧರ್ (35) ವಿಷ ಸೇವಿಸಿ ಏಪ್ರಿಲ್ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆ ರೀತಿ ಕಂಡುಬಂದರೂ ಸಾಕಷ್ಟು ಶಂಕೆ ಮೂಡಿತ್ತು ಎಂದು ಕೆಲವರು ಹೇಳಿದ್ದರು.

ಸಾಯುವ ಮುನ್ನ ಶ್ರೀಧರ್ ಬರೆದಿಟ್ಟಿರುವ ಡೆತ್ ನೋಟ್ ಕೂಡ ಪತ್ತೆಯಾಗಿತ್ತು. 2 ಎಕರೆ 36 ಗುಂಟೆ ಪ್ರದೇಶದಲ್ಲಿ ಫಾರ್ಮ್‌ಹೌಸ್ ನಿರ್ಮಾಣ ಕೆಲಸ ನಡೆಯುತ್ತಿದೆ. ಜಾಗದ ಸುತ್ತಾ ದೊಡ್ಡ ಕಾಂಪೌಂಡ್ ಹಾಕಲಾಗಿದೆ. ಒಳಗೆ ಒಂದು ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿತ್ತು. ಶ್ರೀಧರ್ ನಿಧನದ ಬಳಿಕ ಆ ಕೆಲಸ ನಿಂತಿದೆ. ಫಾರ್ಮ್ ಹೌಸ್ ಪಕ್ಕದಲ್ಲಿ ಶ್ರೀಧರ್ ರಕ್ತಕಾರಿ ಪ್ರಾಣಬಿಟ್ಟಿದ್ದನಂತೆ. ಆತನ ಮೃತದೇಹ ಕಲ್ಲು ಬಂಡೆ ಮೇಲೆ ಪತ್ತೆಯಾಗಿತ್ತು. ಆತನ ಸ್ನೇಹಿತ ಶ್ರೀಧರ್ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನಂತೆ.
ಇನ್ನು ಶ್ರೀಧರ್ ಸೆಲ್ಫಿ ವೀಡಿಯೋ ಮಾಡಿ "ನನ್ನ ವೈಯುಕ್ತಿಕ ಕಾರಣದಿಂದ ಅಂದ್ರೆ, ಒಂಟಿತನದಿಂದ ಬೇಸತ್ತು ನಾನು ಇವತ್ತು ಸಾಯುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ, ದಯವಿಟ್ಟು ಯಾರಿಗೂ ತೊಂದರೆ ಕೊಡಬೇಡಿ. ಮನೆಯವರು ಪೊಲೀಸರಿಗೆ ದೂರು ನೀಡಿದರೂ ಯಾರಿಗೂ ತೊಂದರೆ ಕೊಡಬೇಡಿ. ಅವರ ಜೊತೆ ಹೋಗಿದ್ದ, ಇವರ ಜೊತೆ ಹೋಗಿದ್ದ, ಕೊನೆಯ ಬಾರಿಗೆ ಅವರಿಗೆ ಕಾಲ್ ಮಾಡಿದ್ದ ಅಂತ ಎಲ್ಲಾ ತನಿಖೆ ಮಾಡೋದು ಬೇಡ. ಮನೆಯವರಿಗೆ, ನನ್ನ ಸ್ನೇಹಿತರಿಗೂ ಹೇಳ್ತಿದ್ದೀನಿ, ಬಹಳ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಹೇಳಿದ್ದ ವೀಡಿಯೋ ವೈರಲ್ ಆಗುತ್ತಿದೆ.
ಕಳೆದ ಒಂದು ವರ್ಷದಿಂದ ದುರ್ಗಾ ಫಾರ್ಮ್‌ಹೌಸ್‌ನಲ್ಲಿ ಶ್ರೀಧರ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಆತ ಕಗ್ಗಲೀಪುರದವನು. ಅಲ್ಲಿ ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದ. ಪ್ರಕರಣದ ತನಿಖೆ ನಡೆಯುತ್ತಿದೆ. ಮೇಲ್ನೋಟಕ್ಕೆ ಅದು ಆತ್ಮಹತ್ಯೆ ಎಂದು ಗೊತ್ತಾಗಿದೆ. ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದೇವೆ. ಅದು ಬಂದ ಮೇಲೆ ಬೇರೆ ಏನಾದರೂ ಕಾರಣ ಇದ್ಯಾ? ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ."
"ಕಿರಣ್ ಎಂಬುವವರು ಆ ಜಾಗದ ಜಿಪಿ ಹೋಲ್ಡರ್ ಆಗಿದ್ದಾರೆ. ಈಗ ದರ್ಶನ್ ಅವರಿಗೆ ಸೇರಿದ್ದು ಎಂದು ಅಕ್ಕ ಪಕ್ಕದವರು ಹೇಳುತ್ತಿದ್ದಾರೆ. ಆದರೆ ದರ್ಶನ್ ಅಲ್ಲಿಗೆ ಬಂದು ಹೋದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಕರಣ ಸಂಬಂಧ ದರ್ಶನ್ ಅವರನ್ನು ಪ್ರಶ್ನಿಸಿಲ್ಲ. ಇನ್ನಿತರೆ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ" ಎಂದು ಬೆಂಗಳೂರು ಗ್ರಾಮಾಂತರ ಎಸ್‌ಪಿ ಎಸ್‌ಪಿ ಮಲ್ಲಿಕಾರ್ಜುನ್ ಹೇಳಿದ್ದಾರೆ.


Click it and Unblock the Notifications










