ಹೊಸ ಚಿತ್ರದಲ್ಲಿ ಮಿಂಚಲಿದೆ ಚಾಲೆಂಜಿಂಗ್ ಸ್ಟಾರ್ ಕುದುರೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯರು ಎನ್ನುವುದು ಗೊತ್ತಿರುವ ವಿಚಾರ. ಮೈಸೂರಿನಲ್ಲಿ ಫಾರ್ಮ್ ಹೌಸ್ ನಡೆಸುತ್ತಿರುವ ಡಿ-ಬಾಸ್ ಗೆ ಕುದುರೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.
ಇದೀಗ, ದಾಸನ ಕುದುರೆ ಸಿನಿಮಾವೊಂರದಲ್ಲಿ ನಟಿಸುತ್ತಿದೆ. ಯುವ ಕಲಾವಿದರ ತಂಡವೊಂದು ತಯಾರಿಸುತ್ತಿರುವ 'ಬಾದಲ್' ಚಿತ್ರದಲ್ಲಿ ದರ್ಶನ್ ಕುದುರೆ ಅಭಿನಯಿಸುತ್ತಿದೆ.

'ಬಾದಲ್' ಚಿತ್ರದಲ್ಲಿ ಕುದುರೆಗೆ ಪ್ರಮುಖ ಪಾತ್ರವಿದ್ದು, ಇಡೀ ಕಥೆ ಕುದುರೆ ಸುತ್ತಾ ನಡೆಯಲಿದೆಯಂತೆ. ಕಾರ್ತಿಕ್ ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಫಸ್ಟ್ ಲವ್ ಖ್ಯಾತಿಯ ಸ್ನೇಹಾ ನಾಯರ್ ಚಿತ್ರದ ನಾಯಕಿಯಾಗಿದ್ದಾರೆ. ಇನ್ನು ಅಗಸ್ತನ್ ಎಂಬ ಯುವ ನಟ 'ಬಾದಲ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.

ಈಗಾಗಲೇ 'ಬಾದಲ್' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವರ ಕುದುರೆ ಅಭಿನಯಿಸಲು ಅನುಮತಿ ಪಡೆದುಕೊಂಡಿದ್ದು, ಕುದುರೆಗೆ ಎಲ್ಲ ರೀತಿಯ ತಯಾರಿ ನೀಡಲಾಗುತ್ತಿದೆ.


Click it and Unblock the Notifications











