For Quick Alerts
  ALLOW NOTIFICATIONS  
  For Daily Alerts

  ದಸರಾ ಹಬ್ಬಕ್ಕೆ ದರ್ಶನ್ 'ಕ್ರಾಂತಿ' ಚಿತ್ರದ ಮುಹೂರ್ತ

  |

  'ರಾಬರ್ಟ್' ಸಿನಿಮಾದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಚಿತ್ರ ಕೈಗೆತ್ತಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿತ್ತು. 'ಯಜಮಾನ' ನಿರ್ಮಾಪಕಿ ಶೈಲಾಜ ನಾಗ್ 'ಕ್ರಾಂತಿ' ಚಿತ್ರ ನಿರ್ಮಿಸುತ್ತಿದ್ದು, ಇದು ದರ್ಶನ್ ಅವರ 55ನೇ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೃಷ್ಟಿಸಿತ್ತು.

  ಈಗ ಕ್ರಾಂತಿ ಸಿನಿಮಾದ ಮುಹೂರ್ತಕ್ಕೆ ದಿನ ನಿಗದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 15ಕ್ಕೆ ಕ್ರಾಂತಿ ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ನಿರ್ಧರಿಸಿದೆ.

  ದರ್ಶನ್ ಹೊಸ 'ಪ್ಯಾನ್ ಇಂಡಿಯಾ' ಸಿನಿಮಾದ ಹೆಸರು ಘೋಷಣೆದರ್ಶನ್ ಹೊಸ 'ಪ್ಯಾನ್ ಇಂಡಿಯಾ' ಸಿನಿಮಾದ ಹೆಸರು ಘೋಷಣೆ

  'ಯಜಮಾನ' ಸಿನಿಮಾ ನಿರ್ದೇಶಿಸಿದ್ದ ವಿ ಹರಿಕೃಷ್ಣ ಅವರೇ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದು, ಶೈಲಾಜ್ ನಾಗ್ ಜೊತೆ ಎರಡನೇ ಪ್ರಾಜೆಕ್ಟ್. ಕನ್ನಡದಲ್ಲಿ ತಯಾರಾಗಲಿರುವ ಈ ಚಿತ್ರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಡಬ್ ಆಗಲಿದೆ.

  ದರ್ಶನ್, ಶೈಲಾಜ್ ನಾಗ್, ಹರಿಕೃಷ್ಣ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದ ಯಜಮಾನ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬಿಸಿನೆಸ್ ಮಾಡಿತ್ತು. ಪ್ರೇಕ್ಷಕರಿಂದಲೂ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಯಜಮಾನ ಮೂಲಕ ಹಿಟ್ ಬಾರಿಸಿದ ಈ ಜೋಡಿಯಿಂದ ಕ್ರಾಂತಿ ಘೋಷಣೆ ಆದ್ಮೇಲೆ ಅದಕ್ಕೆ ಹೆಚ್ಚು ನಿರೀಕ್ಷೆ ಈ ಪ್ರಾಜೆಕ್ಟ್ ಮೇಲಿದೆ.

  ಕ್ರಾಂತಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಸದ್ಯಕ್ಕಿಲ್ಲ. ದರ್ಶನ್‌ಗೆ ಯಾರು ನಾಯಕಿ, ಉಳಿದ ಪ್ರಮುಖ ಕಲಾವಿದರು ಯಾರೆಲ್ಲಾ ಇರ್ತಾರೆ ಎನ್ನುವ ಬಗ್ಗೆ ಗೌಪ್ಯವಾಗಿಡಲಾಗಿದೆ. ಮುಂದಿನ ದಿನದಲ್ಲಿ ಕ್ರಾಂತಿ ಚಿತ್ರದ ಬಗ್ಗೆ ಒಂದೊಂದೆ ವಿಷಯಗಳು ಹೊರಬೀಳಲಿದೆ.

  ಡಿ ಬಾಸ್ ಕೈ ಸೇರಿತು ಸೈಮಾ ಪ್ರಶಸ್ತಿ: ಇದು ಮೂರನೇ ಅವಾರ್ಡ್ಡಿ ಬಾಸ್ ಕೈ ಸೇರಿತು ಸೈಮಾ ಪ್ರಶಸ್ತಿ: ಇದು ಮೂರನೇ ಅವಾರ್ಡ್

  ಇನ್ನು ರಾಬರ್ಟ್ ಚಿತ್ರದ ನಂತರ ದರ್ಶನ್ ಆರಂಭಿಸಿದ್ದ 'ರಾಜವೀರ ಮದಕರಿ ನಾಯಕ' ಚಿತ್ರೀಕರಣ ಕೊರೊನಾ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಗುಜರಾತ್, ರಾಜಸ್ಥಾನದಲ್ಲಿ ಶೂಟಿಂಗ್ ಪ್ಲಾನ್ ಇದ್ದ ಕಾರಣ ಸದ್ಯಕ್ಕೆ ಬ್ರೇಕ್ ಹಾಕಲಾಗಿದೆ. ಪರಿಸ್ಥಿತಿ ಎಲ್ಲವೂ ಮೊದಲಿನಂತೆ ಆದ ತಕ್ಷಣದ ಮದಕರಿ ನಾಯಕ ಮುಂದುವರಿಯಲಿದೆ. ಈ ಸಿನಿಮಾವನ್ನು ಹಿರಿಯ ನಿರ್ದೇಶಕ ರಾಜೇಂದ್ರ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳವನ್ನು ಹಿರಿಯ ನಿರ್ಮಾಪಕ ರಾಕ್‌ಲೈವ್ ವೆಂಕಟೇಶ್ ಹೂಡಿದ್ದಾರೆ. ಈ ನಡುವೆ ದರ್ಶನ್ ಕ್ರಾಂತಿ ಆರಂಭವಾಗಲಿದೆ.

  2019ನೇ ಸಾಲಿನ ಸೈಮಾ ಪ್ರಶಸ್ತಿ ಕಳೆದ ತಿಂಗಳು ಪ್ರಕಟವಾಗಿದ್ದ ದರ್ಶನ್ ನಟನೆಯ ಯಜಮಾನ ಚಿತ್ರ ಎಂಟು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಟ (ದರ್ಶನ್), ಅತ್ಯುತ್ತಮ ಸಿನಿಮಾ (ಯಜಮಾನ), ಅತ್ಯುತ್ತಮ ನಿರ್ದೇಶಕ (ವಿ ಹರಿಕೃಷ್ಣ-ಪೊನ್ ಕುಮಾರ್), ಅತ್ಯುತ್ತಮ ನಟಿ (ವಿಮರ್ಶಾತ್ಮಕ) ರಶ್ಮಿಕಾ ಮಂದಣ್ಣ, ಅತ್ಯುತ್ತಮ ಸಂಗೀತ ನಿರ್ದೇಶಕ (ವಿ ಹರಿಕೃಷ್ಣ), ಅತ್ಯುತ್ತಮ ಹಿನ್ನೆಲೆ ಗಾಯಕ (ಶಿವನಂದಿ ಹಾಡು), ಅತ್ಯುತ್ತಮ ಹಾಸ್ಯನಟ (ಸಾಧುಕೋಕಿಲಾ), ಅತ್ಯುತ್ತಮ ಪೋಷಕ ನಟ (ದೇವರಾಜ್) ಸೈಮಾ ಪ್ರಶಸ್ತಿಗೆ ಪಾತ್ರರಾದರು.

  English summary
  Challening star Darshan’s Kranti Movie to be launched on October 15 on the occasion of Dasara Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X