'ಒಡೆಯ'ನಾದ ದರ್ಶನ್ ಗೆ ಬಲ ನೀಡಿದ ಅಂಬಿ

By Naveen

Recommended Video

ಅದ್ದೂರಿಯಾಗಿ ಸೆಟ್ಟೀರಿದ ಒಡಯ..! | FIlmibeat Kannada

ನಟ ದರ್ಶನ್ ಇಂದಿನಿಂದ 'ಒಡೆಯ'ನಾಗಿದ್ದಾರೆ. ಅರ್ಥಾತ್ ಡಿ ಬಾಸ್ ಅವರ ಹೊಸ ಸಿನಿಮಾ ಇಂದು ಲಾಂಚ್ ಆಗಿದೆ. ದರ್ಶನ್ ಅವರ ಈ ಚಿತ್ರಕ್ಕೆ ನಟ ಅಂಬರೀಶ್ ಸಾಥ್ ನೀಡಿದ್ದಾರೆ. ಈ ಚಿತ್ರಕ್ಕೆ ಮೊದಲು 'ಒಡೆಯರ್' ಎಂಬ ಹೆಸರು ಇದ್ದು, ಬಳಿಕ 'ಒಡೆಯ' ಎಂದು ಅದನ್ನು ಬದಲಿಸಲಾಗಿತ್ತು.

'ಒಡೆಯ' ದರ್ಶನ್ ನಟನೆಯ 52ನೇ ಸಿನಿಮಾವಾಗಿದೆ. ಈ ಚಿತ್ರದ ಮುಹೂರ್ತ ಇಂದು ಮೈಸೂರಿನಲ್ಲಿ ನಡೆದಿದೆ. ಈ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ನಟ ಅಂಬರೀಶ್ ಭಾಗಿಯಾಗಿದ್ದು, ದರ್ಶನ್ ಚಿತ್ರಕ್ಕೆ ಶುಭ ಕೋರಿದ್ದಾರೆ.

ನಿರ್ಮಾಪಕ ಸಂದೇಶ್ ನಾಗರಾಜ್ ಅವರು ನಟ ದರ್ಶನ್ ಹಾಗೂ ಅಂಬರೀಶ್ ಇಬ್ಬರಿಗೂ ಆಪ್ತರು. ಈ ಹಿಂದೆ ದರ್ಶನ್ ಅವರ 'ಐರಾವತ' ಸಿನಿಮಾಗೆ ಬಂಡವಾಳ ಹಾಕಿದ್ದ ಅವರು ಈಗ ಮತ್ತೆ ದಾಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ, ಅಂಬರೀಶ್ ಅವರ ಮಗನ ಚೊಚ್ಚಲ ಚಿತ್ರ 'ಅಮರ್' ಕೂಡ ಸಂದೇಶ್ ನಾಗರಾಜ್ ಅವರ ಬ್ಯಾನರ್ ನಲ್ಲಿ ಬರುತ್ತಿದೆ.

darshans odeya kannada movie launched today.

ಇನ್ನು 'ಒಡೆಯ' ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಎಂ.ಡಿ.ಶ್ರೀಧರ್ ನಟ ದರ್ಶನ್ ಜೊತೆಗೆ 'ಬುಲ್ ಬುಲ್' ಸಿನಿಮಾವನ್ನು ಮಾಡಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ಮತ್ತೆ ಈ ಜೋಡಿ ಒಂದಾಗಿದೆ.

darshans odeya kannada movie launched today.

'ಕುರುಕ್ಷೇತ್ರ', 'ಯಜಮಾನ', 'ಒಡೆಯ' ಸದ್ಯ ದರ್ಶನ್ ಅವರ ಮುಂದಿನ ಚಿತ್ರಗಳಾಗಿವೆ. ಇದರ ಜೊತೆಗೆ ತರುಣ್ ಸುಧೀರ್ ಅವರ ನಿರ್ದೇಶನದ ಚಿತ್ರದಲ್ಲಿ ಸಹ ದರ್ಶನ್ ನಟಿಸುತ್ತಾರೆ.

More from Filmibeat

English summary
Challenging Star Darshan's 'Odeya' kannada movie launched today (August 18th) in Mysore. The movie is directed by MD Sridhar and producing by Sandesh Nagaraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X