ಆನೆ ನಡೆದಿದ್ದೇ ದಾರಿ : ರಿಯಲ್ ಗಜನ ಜೊತೆಗೆ ಸ್ಯಾಂಡಲ್ ವುಡ್ ಗಜ
Recommended Video

'ಆನೆ ನಡೆದಿದ್ದೇ ದಾರಿ ತಾಕತ್ತಿದ್ರೆ ಕಟ್ಟಾಕು..' ಇದು ನಟ ದರ್ಶನ್ ತಮ್ಮ 'ಯಜಮಾನ' ಸಿನಿಮಾದಲ್ಲಿ ಹೇಳುವ ಡೈಲಾಗ್. ಈ ಡೈಲಾಗ್ ಸಿನಿಮಾದ ಬಿಡುಗಡೆಗೆ ಮುಂಚೆಯೇ ಸಖತ್ ಫೇಮಸ್ ಆಗಿತ್ತು.
ದರ್ಶನ್ ಪಾತ್ರವನ್ನು ಈ ಡೈಲಾಗ್ ಮೂಲಕ ಆನೆಗೆ ಹೋಲಿಕೆ ಮಾಡಲಾಗಿತ್ತು. ಇದೀಗ ಆನೆಯ ಮುಂದೆಯೇ ದರ್ಶನ್ ನಿಂತು ಫೋಟೋ ತೆಗೆದುಕೊಂಡಿದ್ದಾರೆ. ದರ್ಶನ್ ಗೆ ಪ್ರಾಣಿಗಳನ್ನು ಕಂಡರೆ ಬಹಳ ಇಷ್ಟ. ಇದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೀಗಿರುವಾಗ ದರ್ಶನ್ ಇದೀಗ ಆನೆಯನ್ನು ಭೇಟಿ ಮಾಡಿದ್ದಾರೆ.
'ಒಡೆಯ' ಸಿನಿಮಾದ ಚಿತ್ರೀಕರಣದಲ್ಲಿ ಸ್ಯಾಂಡಲ್ ವುಡ್ ಗಜ ರಿಯಲ್ ಗಜನ ಸಮಾಗಮವಾಗಿದೆ. ಈ ಫೋಟೋಗಳನ್ನು ನೋಡುತ್ತಿದ್ದರೆ, ಆನೆಯನ್ನು ಚಿತ್ರದ ಹಾಡಿನಲ್ಲಿ ಬಳಸಿರುವ ಹಾಗೆ ಕಾಣುತ್ತಿದೆ. ಮತ್ತೊಂದು ವಿಶೇಷ ಅಂದರೆ, ಈ ಸಿನಿಮಾದಲ್ಲಿ ದರ್ಶನ್ ಪಾತ್ರದ ಹೆಸರು ಸಹ ಗಜೇಂದ್ರ ಆಗಿದೆ.

'ಒಡೆಯ' ನಟ ದರ್ಶನ್ ಅವರ 52ನೇ ಸಿನಿಮಾವಾಗಿದ್ದು, ಇದು ತಮಿಳಿನ 'ವೀರಂ' ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾವನ್ನು ನಿರ್ದೇಶಕ ಎಂ ಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.


Click it and Unblock the Notifications











