ದರ್ಶನ್ ಅವರ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ- ದರ್ಶನ್ ಪರ ವಕೀಲ ಕೆಎನ್ ಫಣೀಂದ್ರ ..!
ದರ್ಶನ್ ರಂಥ ನಂ.1 ಹೀರೋ ಸುಮ್ಮನೇ ಕೂತರೆ ಅವರಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ನಷ್ಟ ಗ್ಯಾರೆಂಟಿ. ಈ ಹಿನ್ನೆಲೆಯಲ್ಲಾದರೂ ಬಾಸ್ ಇಮೀಡಿಯೆಟ್ಟಾಗಿ ಬಣ್ಣ ಹಚ್ಚಲೇಬೇಕಿರುವ ಅನಿವಾರ್ಯತೆ ಇದೆ ಹೀಗಾಗಿಯೇ ಅವರನ್ನು ಜೈಲಿಂದ ಬಿಡುಗಡೆ ಮಾಡಬೇಕು ಅನ್ನುವುದು ಅಭಿಮಾನಿಗಳ ಹಕ್ಕೋತ್ತಾಯ. ಆದರೆ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದ ವ್ಯಕ್ತಿ ಯಾರೇ ಆಗಿರಲಿ, ಎಷ್ಟೇ ಪ್ರಭಾವ ಶಾಲಿಯಾಗಿರಲಿ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು. ಇದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಗೆ ಇನ್ನೊಮ್ಮೆ ನ್ಯಾಯಾಲಯದಲ್ಲಿ ಹಿನ್ನೆಡೆಯಾಗಿದೆ.
ಹೌದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಂಬಿ ಹಿಂದೆ ಇರುವ ದಾಸ, ಬಿಡುಗಡೆ ಭಾಗ್ಯ ಕಲ್ಪಿಸದೇ ಇದ್ದರೂ ಕೊನೆ ಪಕ್ಷ ಮನೆಯ ರುಚಿ ಮತ್ತು ಶುಚಿಯಾದ ಊಟವನ್ನಾದರೂ ತಿನ್ನಲು ಅವಕಾಶ ಮಾಡಿಕೊಡಿ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ದರ್ಶನ್ ಅವರ ಈ ಮನವಿಯನ್ನೂ ಇಂದು ಆಲಿಸಿದ ಹೈಕೋರ್ಟ್ ನ್ಯಾಯಾಧೀಶ ಎಸ್ ಆರ್ ಕೃಷ್ಣಕುಮಾರ್ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚನೆಯನ್ನು ಕೊಟ್ಟರು. ಮಧ್ಯಂತರ ಆದೇಶ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ದರ್ಶನ್ ಪರ ವಾರ ಮಂಡಿಸಿದ ಹಿರಿಯ ವಕೀಲ ಫಣೀಂದ್ರ ಅವರು ಕರ್ನಾಟಕ ಬಂಧೀಖಾನೆ ನಿಯಮಗಳನ್ನು ಓದಿದ್ರು. ಅರವಿಂದ್ ಕೇಜ್ರಿವಾಲ್ ಪ್ರಕರಣವನ್ನೂ ಪ್ರಸ್ತಾಪಿಸಿದರು. ಬಾಂಬೆ ಹೈಕೋರ್ಟ್ ಆದೇಶವನ್ನೂ ಕೂಡ ಪ್ರಸ್ತಾಪಿಸಿದರು. ಹಸ್ಕರ್ ಯೂಸಫ್ ವರ್ಸಸ್ ಮುಂಬೈ ಸರ್ಕಾರದ ಕೇಸ್‌ನ್ನೂ ನೆನಪಿಸಿಕೊಂಡರು. ಕರ್ನಾಟಕ ಪ್ರಿಸನ್ಸ್ ಆಕ್ಟ್ 30,31,32 ಪ್ರಕಾರ ದರ್ಶನ್ ಅವರಿಗೆ ಊಟ ,ಪುಸ್ತಕ,ಹಾಸಿಗೆ ಒದಗಿಸುವಂತೆ ಮನವಿಯನ್ನೂ ಕೂಡ ಮಾಡಿಕೊಂಡರು.
ಇಷ್ಟೇ ಯಾಕೆ ಅಸಾರಾಂ ಬಾಪು ಪ್ರಕರಣವನ್ನೂ ಕೂಡ ದರ್ಶನ್ ಪರ ವಕೀಲರ ಉಲ್ಲೇಖಿಸಿದರು. ಮನೆಯೂಟವನ್ನು ಮಾಡುವುದು ದರ್ಶನ್ ಅವರ ಮೂಲಭೂತ ಹಕ್ಕು ಆ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ಎಂಬ ವಾದವನ್ನೂ ಮಾಡಿದರು.

ಮುಂದುವರೆದು ಲಿನ ಮ್ಯಾನ್ಯುಯಲ್ ಸೆಕ್ಷನ್ 30 ರಲ್ಲಿ ಇದರ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಪ್ರಕಾರ ವಿಚಾರಣಾಧೀನ ಆರೋಪಿಗೆ ಮನೆಯ ಊಟ, ದಿನ ಪತ್ರಿಕೆ, ಹಾಸಿಗೆ ದಿಂಬನ್ನು ಪಡೆಯಲು ಅವಕಾಸ ಇದೆ. ಆದರೆ ಕೊಲೆ ಆರೋಪಿಗಳಿಗೂ, ಇತರ ಆರೋಪಿಗಳಿಗೂ ವ್ಯತ್ಯಾಸ ಇದೆ. ಆದರೆ ಸಮಯದ ನಿಬಂಧನೆಗಳನ್ನು ಇಟ್ಟುಕೊಂಡು ಅವಕಾಶ ನೀಡಬಹುದು. ಕೆಲ ಸಮಯ ಎಂದು ಗುರುತಿಸಿ ಅವಕಾಶವನ್ನು ನೀಡಬಹುದು ಎಂದು ದರ್ಶನ ಪರ ವಕೀಲರು ವಾದ ಮಂಡಿಸಿದ್ರು.
ಆದರೆ ಈ ವಾದವನ್ನು ಒಪ್ಪದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸಮಯದಲ್ಲಿ ಊಟ, ಹಾಸಿಗೆ, ಪುಸ್ತಕ ನೀಡುವ ಬಗ್ಗೆ ಆದೇಶ ಮಾಡಲು ಸಾಧ್ಯವಿಲ್ಲ ಎಂದಿತು. ಪ್ರತಿಯೊಬ್ಬ ವಿಚಾರಣಾಧೀನ ಕೈದಿಗೂ ಮನೆ ಆಹಾರ ಪಡೆಯುವ ಹಕ್ಕಿದೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಹೈಕೋರ್ಟ್‌ನ ಆದೇಶ ತೋರಿಸಿ ಎಂದು ದರ್ಶನ್ ಪರ ವಕೀಲರನ್ನ ನ್ಯಾಯಪೀಠ ಪ್ರಶ್ನೆ ಮಾಡಿತು.

ಇನ್ನೂ ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಸರ್ಕಾರದ ಪರ ವಕೀಲರಾದ ಸರ್ಕಾರದ ಪರ ಎಎಜಿ ವಿ.ಜಿ ಭಾನುಪ್ರಕಾಶ್ ಯಾವುದೇ ಕಾರಣಕ್ಕೂ ಸೌಲಭ್ಯ ಕೊಡಬಾರದು ಎಂದು ಆಗ್ರಹಿಸಿದರು. ವಿಚಾರಣಾಧೀನ ಕೈದಿ ದರ್ಶನ್ ಅವರು ಜುಲೈ10ರವೆಗೂ ಜೈಲೂಟ ಮಾಡಿದ್ದಾರೆ. 11 ರಂದು ಮನೆಯೂಟ ಬೇಕು ಎಂದಿದ್ದು ಯಾಕೆ ಎಂದು ಪ್ರಶ್ನಿಸಿದ್ರು. 5 ಸಾವಿರ ಕೈದಿಗಳು ದಿನವೂ ಅಲ್ಲಿ ಊಟ ಮಾಡುತ್ತಿದ್ದಾರೆ. ಯಾರಿಗೂ ಫುಡ್ ಪಾಯಿಸನಿಂಗ್ ಆಗಿಲ್ಲ. ದರ್ಶನ್ ಕೂಡಾ ಫುಡ್ ಪಾಯಿಸನಿಂಗ್ ಬಗ್ಗೆ ವೈದ್ಯರಿಗೆ ಹೇಳಿಲ್ಲ ಎಂದು ಸರ್ಕಾರದ ಪರ ಎಎಜಿ ಭಾನುಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದ್ರು.
ಆ ನಂತರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್, ನೀವು ಸೆಕ್ಷನ್ 30ರ ಅಡಿ ಕೈದಿಗೆ ಸಂಪೂರ್ಣ ಅಧಿಕಾರವಿದೆ ಎಂದು ಹೇಳುತ್ತಿದ್ದೀರಾ, ಆದ್ರೆ ಈ ರೀತಿ ಆದೇಶ ನೀಡಿದ್ರೆ ಅದು ಎಲ್ಲಾ ಕೈದಿಗಳ ಹಕ್ಕಾಗಿ ಬಿಡುತ್ತದೆ. ಈ ಕೇಸಿನಲ್ಲಿ ನಾನು ಮಧ್ಯಂತರ ಆದೇಶ ನೀಡಲು ಬಯಸುವುದಿಲ್ಲ. ಸಂಪೂರ್ಣ ವಾದ ಮಂಡನೆ ಆಲಿಸಿದ ನಂತರವೇ ತೀರ್ಮಾನಿಸಬೇಕಾಗುತ್ತದೆ ಎಂದರು. ಈ ಕಾರಣಕ್ಕೆ ನೀವು ಮ್ಯಾಜಿಸ್ಟ್ರೇಟ್ ಮುಂದೆಯೇ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಹೇಳಿದರು.

ಸದ್ಯಕ್ಕೆ ನಾಳೆ ದರ್ಶನ್ ಪರ ವಕೀಲರಿಗೆ ಪಿಟಿಷನ್ ಸಲ್ಲಿಸಲು ಸೂಚನೆ ನೀಡಿರುವ ನ್ಯಾಯಾಧೀಶರಾದ ಎಸ್. ಆರ್. ಕೃಷ್ಣಕುಮಾರ್ ಅವರು ಸರ್ಕಾರವೂ ಅದಕ್ಕೆ ಆಕ್ಷೇಪಣೆ ಸಲ್ಲಿಕೆ ಮಾಡಲಿ. ಇದೇ ಜುಲೈ 27ರ ಒಳಗೆ ಮ್ಯಾಜಿಸ್ಟ್ರೇಟ್ ನಿರ್ಧಾರ ಮಾಡಲಿ ಎಂದು ನಿರ್ದೇಶನ ನೀಡಿ ಅರ್ಜಿಯ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದ್ದಾರೆ.


Click it and Unblock the Notifications











