ಜಡ್ಜ್ ಎದುರು ವಿಷಕ್ಕೆ ಬೇಡಿಕೆ : ದರ್ಶನ್‌ಗೆ ಈ ಸ್ಥಿತಿ ಬರಬಾರದಿತ್ತು- ನಾಗೇಂದ್ರ ಪ್ರಸಾದ್ ಭಾವುಕ
ಪರಪ್ಪನ ಅಗ್ರಹಾರದ ಪಾಲಾಗಿರುವ ದರ್ಶನ್ ದಣಿದಿದ್ದಾರೆ. ಜೈಲಿನ ಚಿತ್ರ ಹಿಂಸೆ ಅನುಭವಿಸಲಾಗದೇ ಹೈರಾಣಾಗಿದ್ದಾರೆ. ದರ್ಶನ್ ಅವರ ಈ ದಯನೀಯ ಸ್ಥಿತಿ ಕಂಡು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಮಮ್ಮಲ ಮರುಗುತ್ತಿದ್ದಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ನಂಬರ್ ಒನ್ ನಟ. ನೇರವಂತಿಕೆಯ ಜೊತೆ ಹೃದಯವಂತಿಕೆ ಕೂಡ ಅವರ ಟ್ರೇಡ್ ಮಾರ್ಕ್.
ಆದರೆ ಈಗ ತಾನು ಬೆಳೆಯುವ ಜೊತೆ ಬೇರೆಯವರನ್ನು ಬೆಳೆಸುವ ಗುಣ ಹೊಂದಿರುವ ದರ್ಶನ್ ಜೈಲು ಪಾಲಾಗಿದ್ದಾರೆ. ಈ ಹಿನ್ನೆಲೆ ಅವರ ಈ ಕಡು ಕಷ್ಟದ ಸಮಯದಲ್ಲಿ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಚಿತ್ರರಂಗದಲ್ಲಿ ಹಲವರು ಇದ್ದಾರೆ. ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ಸರಸ್ವತಿ ಪುತ್ರ ನಾಗೇಂದ್ರ ಪ್ರಸಾದ್ ಕೂಡ ಒಬ್ಬರು.

ಹೌದು, ದರ್ಶನ್ ಕುರಿತು ವಿ.ನಾಗೇಂದ್ರ ಪ್ರಸಾದ್ ಮಾತನಾಡಿದ್ದಾರೆ. ಈ ಕುರಿತು ''ಗ್ಯಾರಂಟಿ ನ್ಯೂಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿ.ನಾಗೇಂದ್ರ ಪ್ರಸಾದ್ ಹೀರೋ ಅಂದರೆ ಅವರು ತೆರೆ ಮೇಲೆ ಮಾತ್ರ ಹೀರೋ. ಅವರ ರಿಯಲ್ ಲೈಫ್‌ನಲ್ಲಿ ಒಳ್ಳೆತನ ಎಲ್ಲವೂ ಇದೆ. ಅದರಾಚೆಗೆ ಹೀರೋಯಿಸಂ ಅಂತ ನಾವು ತೆರೆಮೇಲೆ ಏನು ನೋಡುತ್ತೇವೆ ಅಲ್ವಾ? ಆ ಹೀರೋ ಇಲ್ಲಿ ಯಾರೂ ಇಲ್ಲ. ರಜನಿಕಾಂತ್ ಅವರು ಕೂಡ ಅಲ್ಲ, ಬೇರೆಯವರು ಅಲ್ಲ ಎಂದು ಹೇಳಿದ್ದಾರೆ.
ಈ ಮಾತುಗಳನ್ನು ನಾನು ಯಾಕೆ ಹೇಳುತ್ತಿದ್ದೇನೆ ಎಂದರೆ ಎಲ್ಲರೂ ಮನುಷ್ಯರು. ಮೋದಿ ಅವರಿಂದ ಹಿಡಿದು ನನ್ನಂತಹ ಜನಸಾಮಾನ್ಯನವರೆಗೆ ನಾವೆಲ್ಲಾ ಮನುಷ್ಯರು, ಮನುಷ್ಯರಿಗೆ ಭಾವನೆಗಳು, ಸಮಸ್ಯೆಗಳು ಎಲ್ಲವೂ ಇರುತ್ತವೆ. ಕಷ್ಟದ, ಹಿಂಸೆಯ ಪರಿಸ್ಥಿತಿ ಬರಬಾರದಿತ್ತು, ಬಂದಿದೆ. ಎಂದು ಭಾವುಕರಾಗಿದ್ದಾರೆ.

ಇನ್ನು ದರ್ಶನ್ ಜೈಲಿನಲ್ಲಿ ಐಶಾರಾಮಿ ಸೌಲಭ್ಯಗಳನ್ನೇನು ಕೇಳುತ್ತಿಲ್ಲ. ಸಾಮಾನ್ಯ ಜನರಿಗೆ ಸಿಗಬಹುದಾದ ಕೊಡಬಹುದಾದ ಸಾಮಾನ್ಯ ಸೌಲಭ್ಯಗಳಾದ ತಲೆ ದಿಂಬು ಕೇಳ್ತಿದ್ದಾರೆ. ಸೂರ್ಯನ ಬೆಳಕು ನೋಡಲು ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ ಎಂದಿರುವ ನಾಗೇಂದ್ರ ಪ್ರಸಾದ್ ಮಾನವೀಯತೆಯ ನೆಲೆಯಲ್ಲಿ ಈ ಸವಲತ್ತುಗಳನ್ನು ಕೊಡ್ಲೇಬೇಕಾಗುತ್ತೆ ಎಂದು ಹೇಳಿದ್ದಾರೆ.
108 ದಿನ ಅಣ್ಣಾವ್ರು ಕಾಡಿನಲ್ಲಿ ಇದ್ದರು. ಅವರ ಪರಿಸ್ಥಿತಿ ಹೇಗಿರಬೇಡ? ಅಲ್ಲಿ ಅನಿಶ್ಚಿತತೆ. ಮುಂದಿನ ಕ್ಷಣ ಹುಲಿ ಬರುತ್ತಾ? ಆನೆ ಬರುತ್ತಾ? ಏನಾಗುತ್ತೋ ಗೊತ್ತಿಲ್ಲ. ಅಂತ ಅನಿಶ್ಚಿತತೆಯಲ್ಲಿ ಅಣ್ಣಾವ್ರು ಇದ್ದರು ಎಂದಿರುವ ನಾಗೇಂದ್ರ ಪ್ರಸಾದ್ ಮನುಷ್ಯ ಆದವನು ಕಾಲ ಕ್ರಮೇಣ ಹೊಂದಿಕೊಳ್ಳೋಕೆ ಶುರು ಮಾಡಿಬಿಡುತ್ತಾನೆ. ಯಾವುದೇ ಪರಿಸ್ಥಿತಿ ಬಂದರೂ ಕೂಡ ಒಗ್ಗಿಕೊಂಡು ಬಿಡುತ್ತಾನೆ. ಹಾಗೆ ಇಲ್ಲಿ ದರ್ಶನ್ ಅವರ ಪರಿಸ್ಥಿತಿ ಹೇಗೆ ಅಂದರೆ, ಸಾಮಾನ್ಯವಾಗಿ ಕೊಡಬೇಕಾದಂತಹ ಸೌಲಭ್ಯಗಳು ಸಿಗುತ್ತಿಲ್ಲ ಇದರಿಂದ ಅವರ ಮನಸಿಗೆ ಘಾಸಿಯಾಗಿದೆ ಎಂದು ಹೇಳಿದ್ದಾರೆ.
ಇನ್ನೂ ದರ್ಶನ್ ಹೊರಗಡೆಯಿಂದ ಒರಟನಂತೆ ಕಂಡರೂ ಕೂಡ ಅವರ ಮನಸ್ಸು ಮೃದು ಎನ್ನುವುದು ಹಲವರ ಅಭಿಮತ. ನಾಗೇಂದ್ರ ಪ್ರಸಾದ್ ಅವರ ಅಭಿಪ್ರಾಯ ಕೂಡ ಇದೆ. ಈ ಕುರಿತು ಮಾತನಾಡಿರುವ ನಾಗೇಂದ್ರ ಪ್ರಸಾದ್ ದರ್ಶನ್ ಅವರು ಮಾನಸಿಕವಾಗಿ ತುಂಬಾನೇ ಸ್ಟ್ರಾಂಗ್ ಆದ ವ್ಯಕ್ತಿ ಆದರೆ ಎಮೋಷನಲಿ ಅವರು ತುಂಬಾನೇ ವೀಕ್. ಭಾವನಾತ್ಮಕವಾಗಿ ತುಂಬಾ ಬೇಗ ಕನೆಕ್ಟ್ ಆಗುವಂತಹ ಮನುಷ್ಯ ಎಂದು ಹೇಳಿದ್ದಾರೆ. ಆದಷ್ಟು ಬೇಗೆ ಈ ಗೋಜಲುಗಳೆಲ್ಲಾ ಅವರು ಬೇಗ ಹೊರಗೆ ಬರಲಿ ಅಂತ ಹಾರೈಸುತ್ತೇನೆ, ತುಂಬಾ ಜನರ ಹಾರೈಕೆ ಇದೆ. ಸರಿ ಹೋಗುತ್ತದೆ ಅಂತೆನಿಸುತ್ತೆ ನೋಡೋಣ ಎಂದು ಹೇಳಿದ್ದಾರೆ.


Click it and Unblock the Notifications










